TOP STORIES:

ಏಷ್ಯಾದ ನಂಬರ್ 1 ಮ್ಯಾರಥನ್ ನಲ್ಲಿ ಮಿಂಚಿದ ಓಟಗಾರ ಹರೀಶ ಕರ್ಕೇರ


ಏಷ್ಯಾದ ನಂಬರ್ 1 ಮ್ಯಾರಥನ್ ನಲ್ಲಿ ಮಿಂಚಿದ ಓಟಗಾರ ಹರೀಶ ಕರ್ಕೇರಡ

ಸಾಧನೆ ಎಂಬ ಶಿಖರವನ್ನು ಒಂದು ಎರಡು ದಿನಗಳಲ್ಲಿ ಏರಲು ಸಾಧ್ಯವಿಲ್ಲ.ಒಂದು ವೇಳೆ ಅಲ್ಪ ಸಮಯದಲ್ಲಿ ಸಾಧನೆ ನಡೆದರೆ ಆ ಸಾಧನೆ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ.ಸಾಧನೆಯ ಹಾದಿ ಯಾವಾಗಲೂ ಕಠಿಣವಾಗಿರಬೇಕು, ಅತೀವವಾದ ಶ್ರಮವಿರಬೇಕು,ಹಲವಾರು ದಿನಗಳ ಪರಿಶ್ರಮ ಎದ್ದು ಕಾಣಬೇಕು.ಆಗ ನಿಜವಾದ ಸಾಧನೆಗೆ ಬೆಲೆ ಸಿಗೊದು ಆದಕ್ಕಾಗಿಯೇ ಹಿರಿಯರು ಹೇಳಿರೋದು ಸಾಧನೆ ಎಂಬುದು ಸಾಧಕನ ಸೊತ್ತೆ ಹೊರತು ಸೋಮಾರಿಯ ಸ್ವತ್ತಲ್ಲ.ಇದೇ ರೀತಿಯ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಮ್ಯಾರಥನ್ ಓಟಗಾರ ಹರೀಶ ಕರ್ಕೇರ.

ಇವರ ಜೀವನದ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಣಾಜೆ ಗ್ರಾಮದ ಮಚ್ಚಿರೋಡಿ ನಿವಾಸಿ ದೇವಪ್ಪ ಪೂಜಾರಿ ಮತ್ತು ಮೋಹಿನಿ ದಂಪತಿಯ ಮುದ್ದಿನ ಮಗನಾಗಿ ಜನಿಸಿ ತಂದೆ ತಾಯಿಯ ಪ್ರೋತ್ಸಾಹದ ಜೊತೆ ಸಾಧನೆಯ ಹಾದಿ ಹಿಡಿದು ನಡೆದವರು.ಪ್ರಸ್ತುತ ಬೆಂಗಳೂರಿನ ಟೈಟಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಧನೆಯಲ್ಲಿ ಯಶಸ್ಸು ಕಾಣಲು ಇಂತಹದೇ ನಿರ್ದಿಷ್ಟ ಕ್ಷೇತ್ರ ಬೇಕೆಂಬ ಅಗತ್ಯವಿಲ್ಲ.ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿ ಮತ್ತು ಪ್ರೀತಿ ಇರಬೇಕು.ಆಗ ಸಾಧನೆಯ ಹಾದಿ ಸುಲಭವಾಗಿ ಕಾಣುತ್ತದೆ ಅದೇ ರೀತಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ.ಇದೇ ರೀತಿಯ ಸಾಧನೆಯ ಹಾದಿ ಹಿಡಿದ ಹರೀಶ್ ಕರ್ಕೇರ ಅವರು ಆರಿಸಿದ್ದು ಕ್ರೀಡಾ ಕ್ಷೇತ್ರ.ಇವರ ಸಾಧನೆಯನ್ನು ಗಮನಿಸುತ್ತ ಹೋದಂತೆ ಇವರು ಟಾಟಾ ಮುಂಬೈ ನಡೆಸಿಕೊಡುವ ಏಷ್ಯಾದ_ನಂ.1 ಮ್ಯಾರಥನ್ ನಲ್ಲಿ ಭಾಗವಹಿಸಿ 42 ಕಿಲೋಮೀಟರ್ ದೂರವನ್ನು 4 ಗಂಟೆ 16 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದವರು,ಕಳೆದ ಬಾರಿ 42 ಕಿಲೋಮೀಟರ್ ದೂರವನ್ನು 4 ಗಂಟೆ 27 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದರು,ಹಾಗೆಯೇ ಬೆಂಗಳೂರು ಮ್ಯಾರಥಾನ್ ನಲ್ಲಿ 21 ಕಿಲೋಮಿಟರ್ ಗಳನ್ನು 2 ಗಂಟೆ 01 ನಿಮಿಷಗಳಲ್ಲಿ,ಟಿ.ಸಿ.ಎಸ್ ಬೆಂಗಳೂರು ನಡೆಸಿಕೊಡುವ 10 ಕಿಲೋಮಿಟರ್ ಅನ್ನು 58 ನಿಮಿಷಗಳಲ್ಲಿ,ಎಸ್.ಬಿ.ಐ ಗ್ರೀನ್ ಮ್ಯಾರಥಾನ್ ಬೆಂಗಳೂರು ಇಲ್ಲಿ 2 ಗಂಟೆಯಲ್ಲಿ ಕ್ರಮಿಸಿದವರು ಹೀಗೆ ಮ್ಯಾರಥಾನ್ ನಲ್ಲಿ ಹತ್ತು ಹಲವಾರು ದಾಖಲೆ ನಿರ್ಮಿಸಿದ ಕೀರ್ತಿ ಇವರದ್ದು ಇವರ ಈ ಸಾಧನೆಯ ಹಿಂದೆ ಕಂಪೆನಿಯ M.D ಗಳಾದ ಭಾಸ್ಕರ್ ಭಟ್ ಹಾಗೂ ವೆಂಕಟರಮಣ್ ಅವರ ಸಹಕಾರ ತುಂಬಾ ಇದೆ ಎಂದು ನೆನಪಿಸಿಕೊಳ್ಳುತ್ತಾರೆ.ಇನ್ನು ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಹೆಸರು ತಂದುಕೊಡಬೇಕು ಎಂಬ ಇವರ ಕನಸು ನನಸಾಗಲಿ ಇವರ ಈ ಸಾಧನೆಗೆ

ನಮ್ಮ
ಬಿಲ್ಲವ ವಾರಿಯಾರ್ಸ್ ಪೇಜ್
ವತಿಯಿಂದ ಶುಭ ಹಾರೈಕೆಗಳು…

 

✍️ ಸುಶಾಂತ್ ಪೂಜಾರಿ ಕನ್ನಡಿಕಟ್ಟೆ


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »