TOP STORIES:

ಕಲಾವಿದರ ಕಣ್ಮಣಿ ‘ರಂಜು ತುಳುರಂಗ ಪ್ರೇಮಿ’


ಓರ್ವ ಕಲಾವಿದನಿಗೆ ಕಲೆಯೇ ತನ್ನ ಬಣ್ಣದ ಪ್ರಪಂಚವಾದರೆ , ಇನ್ನೊಂದೆಡೆ ಆ ಕಲಾವಿದರ ಏಳಿಗೆಯೇ ತನ್ನ ಜಗತ್ತು ಮತ್ತವರ ಆಶೀರ್ವಾದನೇ ತನಗೆ ಶ್ರೀ ರಕ್ಷೆ ಎಂದುಕೊಂಡು ರಂಜಿತ್ ಕಕ್ಕಿಂಜೆ ಇವರು ಕಾರ್ಯಪ್ರವೃತ್ತರಾಗಿದ್ದಾರೆ. ರಂಗಸೇವಕರಿಗೆ ಈ ಸಮಾಜದಲ್ಲಿ ಒಂದೊಳ್ಳೆ ಸ್ಥಾನ ಸಿಗಬೇಕೆಂಬ ಆಶಯದಿಂದ ತನ್ನ ತುಳುವನಾಡಿಗೆ ದುಡಿಯುತ್ತಿರುವ ಇವರು, ತುಳುನಾಡಿನೆಲ್ಲೆಡೆ ಇವರು ‘ರಂಜು ತುಳುರಂಗ ಪ್ರೇಮಿ’ ಎಂದೇ ಜನರಿಗೆ ಚಿರಪರಿಚಿತರಾಗಿದ್ದಾರೆ.

ವಸಂತ್ ಪೂಜಾರಿ ಮತ್ತು ಉಷಾ ದಂಪತಿಯ ಸುಪುತ್ರನಾದ ಇವರು ಐಟಿಐ ಪದವೀಧರ , ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋಟ್ ನಲ್ಲಿ ಗ್ರೌಂಡ್ ಸಪೋರ್ಟ್ ಸೆರ್ವಿಸಸ್ ಮೈಂಟೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಣ್ಣದ ಲೋಕದ ಕಲಾವಿದನಾಗಿ,ನಾಟಕರಂಗದ ನಿರ್ದೇಶಕನಾಗಿ , ಭಜನಕಾರನಾಗಿ, ಗಾಯಕನಾಗಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಬರಹಗಾರನಾಗಿ , ಸಾಹಿತಿಯಾಗಿ ಹೀಗೆ ಸಕಲ ಕಲೆಗಳನ್ನು ಹೊಂದಿರುವ ಪ್ರತಿಭಾನ್ವಿತ ಸಾಧಕರಿವರು.

ಬಾಲ್ಯದಿಂದಲೇ ಭಜನೆಯ ಮೇಲಿನ ಒಲವು:

ಬಾಲ್ಯದಿಂದಲೇ ಇವರು ಉಳ್ಳಾಲ್ತಿ ಭಜನಾ ಮಂಡಳಿ, ಅರಂತಬೈಲಿನಲ್ಲಿ ದೇವರ ನಾಮಸ್ಮರಣೆ ಮಾಡಿಕೊಂಡು ಬಂದವರು.ಭಜನೆಯ ಮೇಲಿನ ಅಪಾರ ಪ್ರೀತಿಯಿಂದಾಗಿ ಇವರು ತನ್ನ ಊರಿನಲ್ಲೇ ಒಂದು ಭಜನಾ ತಂಡವನ್ನು ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ ‘ಶ್ರೀ ಶಬರಿ ಭಜನಾ ಮಂಡಳಿ’ ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು. ಊರು ಬಿಟ್ಟು ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ಹೋದವರು ಅಲ್ಲೂ ‘ಮಕರ ಶ್ರೀ ಭಜನಾ ಮಂಡಳಿ’ ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು ಹಾಗೂ ಮದು ಬಂಗೇರ ಕಲ್ಲಡ್ಕ ಮತ್ತು ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ‘ಯುವವಾಹಿನಿ ಬೆಂಗಳೂರು ಘಟಕ’ ವನ್ನು ಸ್ಥಾಪಿಸಿ ಅದರ ಸಾಂಸ್ಕೃತಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ರಂಗಪ್ರೇಮಿಯ ಮನದ ಮಾತು:

“ನಾನು ಬರಹಗಾರನಲ್ಲ ಅಭಿಮಾನಿ.ಕಲಾವಿದರ ಪ್ರೀತಿ ಅಭಿಮಾವೇ ನನ್ನ ಬರಹದ ಘಳಿಕೆ ಮತ್ತು ಶ್ರೀರಕ್ಷೆ.ಕಲಾಕ್ಷೇತ್ರದಲ್ಲಿ ನಿರಂತರ ಸೇವೆಗೈಯುವ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವುದೇ ನನ್ನ ಉದ್ದೇಶ.ಇದು ನನ್ನ ಸಾಧನೆಯಲ್ಲ ಕೇವಲ ಒಂದು ಪ್ರಯತ್ನ, ತನ್ನ ಪ್ರತಿ ಕಾರ್ಯದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಆತ್ಮೀಯ ಮಿತ್ರ ಸುಧೀರ್ ಎಸ್.ಕೆ ಮತ್ತು ಪ್ರಸಾದ್ ಕಲ್ಲಾಜೆ ” ಎನ್ನುತ್ತಾರೆ ತುಳುರಂಗ ಪ್ರೇಮಿ.

ರಂಗಭೂಮಿಯಲ್ಲಿನ ಪರಿಣಿತಿ:

ತಾನು ಒಬ್ಬ ಕಲಾವಿದನಾಗಬೇಕೆಂಬ ಆಸೆ ಹೊಂದಿದ್ದ ಇವರು ಅವಕಾಶವಿಲ್ಲದ ಕಾರಣ ಶಬರಿ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ ” ಬುದ್ಧಿ ಬನ್ನಗ” ಎಂಬ ತುಳು ನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದರು. ನಂತರ ‘ಗೌಜಿ ಗಮ್ಮತ್ತ್’ , ‘ಎನ್ನ ತಂಗಡಿ’ , ‘ಮಲ್ಲಸ್ತಿಕೆದ ಮರ್ಮಾಲ್’ , ‘ಒಂಜೆಕ್ ಒಂಜರೆ ಮಲ್ಪೊಚ್ಚಿ’ ನಾಟಕಗಳಿಗೆ ಸಾಹಿತ್ಯ ನೀಡಿ ನಿರ್ದೇಶಿಸಿ ನಟಿಸಿದ್ದಾರೆ. ಹಾಗೂ ಮೊದಲಬಾರಿಗೆ ಇವರು ‘ಗೋಲ್ಮಾಲ್’ ಎಂಬ ತುಳು ಚಲನಚಿತ್ರದಲ್ಲಿಯೂ ನವೀನ್ ಡಿ ಪಡಿಲ್ ರವರೊಡನೆ ನಟಿಸಿದ್ದಾರೆ. ತುಳುರಂಗಭೂಮಿ ಕಲಾವಿದರ ಸಲುವಾಗಿ ಇವರು ‘ಕಲಾವಿದೆರೆ ಕಡಲ್’ ವಾಟ್ಸಾಪ್ ಗ್ರೂಪ್ ರಚಿಸಿ ಒತ್ತಡದ ಕೆಲಸದ ಮಧ್ಯೆಯೂ ಕಲಾವಿದರಿಗೆ ತನ್ನ ಬರಹದ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಸಂದ ಗೌರವಗಳು:

ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಯುವವಾಹಿನಿ ಬೆಂಗಳೂರು ಘಟಕದ ವತಿಯಿಂದ ಸನ್ಮಾನ ,ಮಡಿಲು ಸಂಸ್ಥೆಯಿಂದ ‘ಮಡಿಲು ಪುರಸ್ಕಾರ’, ತೆಲಿಕೆದ ತೆನಾಲಿ ಕಾರ್ಲ ತಂಡದಿಂದ “ಕಲಾವಿದೆರೆ ಕಣ್ಮಣಿ” ಎಂಬ ಬಿರುದು ಹೀಗೆ ಹತ್ತು ಹಲವು ಕಡೆ ಇವರನ್ನು ಸನ್ಮಾನಿಸಲಾಗಿದೆ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ತಾನು ಹುಟ್ಟಿದ ಮಣ್ಣಿಗೆ ಋಣಿಯಾಗಿರು ಎಂಬಂತೆ, ಸದಾ ಮುಗುಳ್ನಗೆಯ ಮಾಲೀಕನಾಗಿರುವ ಇವರು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಕಾರ್ಯನಿರತರಾಗಿದ್ದರೂ ತುಳುನಾಡು ಹಾಗೂ ತುಳು ಭಾಷೆಯ ಮೇಲಿನ ಇವರ ಅಭಿಮಾನವನ್ನು ಒಂಚೂರು ಕುಗ್ಗಿಸದೆ ,ರಂಗಭೂಮಿ ಕಲಾವಿದರಿಗೂ ಈ ಸಮಾಜದಲ್ಲಿ ಉನ್ನತ ಸ್ಥಾನ ಸಿಗಬೇಕೆಂಬ ನಿಮ್ಮ ನಿಸ್ವಾರ್ಥ ಭಾವನೆಗೆ ನಾವೆಂದಿಗೂ ಚಿರಋಣಿ. ನಿಮ್ಮ ಈ ರಂಗಪ್ರೇಮ ಶಾಶ್ವತವಾಗಿದ್ದು ಇನ್ನಷ್ಟು ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿ – ಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.

ಬರಹ: ಯಕ್ಷಿತಾ ಆರ್ ,ಮೂಡುಕೊಣಾಜೆ


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »