TOP STORIES:

ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ ಯೋಜನೆಯಿಂದ ಚಿಕಿತ್ಸೆಗೆ ನೆರವು


ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ‌ ಸ್ಥಾಪಕ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ ಯೋಜನೆಯನ್ನು ಮಡಂತ್ಯಾರು ನಿವಾಸಿಯಾದ ರವಿಶಂಕರ್ ಪೂಜಾರಿ ಪೂರ್ಣಿಮಾ ದಂಪತಿಗಳ ಮನೆಗೆ ನೀಡಲಾಯಿತು.

ರವಿಶಂಕರ್ ಪೂಜಾರಿ ಪೂರ್ಣಿಮಾ ದಂಪತಿಗಳ ಮೂರುವರೆ ವರ್ಷದ ಮುಗ್ಧ ಮಗಳಾದ ಆರಾಧ್ಯಳು ಮಾತನಾಲಾಗದ ಹಾಗೂ ಕಿವಿ ಕೇಳಿಸದ ಸಮಸ್ಯೆಯಿಂದ ಬಳಲುತ್ತಿದ್ದು ಬೆಂಗಳೂರಿನ ಮಾನಸ ಇಎನ್ ಟಿ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದರೆ ಆರಾಧ್ಯಳು ಎಲ್ಲರಂತೆ ಮಾತನಾಡಲು ಹಾಗೂ ಶ್ರವಣ ದೋಷದಿಂದ ಹೊರಬರುವ ಎಲ್ಲ ಸೂಚನೆಗಳಿವೆ ಎಂದು ಹಾಗೂ ಈ ಚಿಕಿತ್ಸೆಗೆ ಸರಿ ಸುಮಾರು 14 ಲಕ್ಷದ ಅಗತ್ಯವಿದೆ ಎಂದು ತಿಳಿಸುತ್ತಾರೆ.

ರವಿ ಪೂಜಾರಿ ಮಂಗಳೂರಿನ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ಈಗಾಗಲೇ ಕೆಲವೊಂದು ತೆರಪಿ ಚಿಕಿತ್ಸೆ ಯನ್ನು ನೀಡುತ್ತಿದ್ದು ದೊಡ್ಡ ಮೊತ್ತದ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟದ ಕೆಲಸ.
ರವಿ ಪೂಜಾರಿಯವರ ಸಮಸ್ಯೆಯನ್ನು ಮನಗಂಡ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕವೂ ಸರ್ವ ಸದಸ್ಯರ ಒಮ್ಮತದಿಂದ ಮಹಾನ್ ಧಾನಿಗಳ ಸಹಕಾರದಿಂದ ರವಿ ಪೂಜಾರಿಯವರಿಗೆ ತನ್ನ 25 ನೇ ತುರ್ತು ಸೇವಾ ಯೋಜನೆ ಯಾಗಿ‌ 40000/-ರೂ.ಗಳ ಚೆಕ್ ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಪಧಾನ ಕಾರ್ಯದರ್ಶಿ ಅರುಣ್ ಕುಮಾರ್, ಕೋಶಾಧಿಕಾರಿ ಹರ್ಷ ಕೋಟ್ಯಾನ್, ಬೆಳ್ತಂಗಡಿ ವಲಯ ಸಂಚಾಲಕರಾದ ಸುರೇಂದ್ರ ಕೋಟ್ಯಾನ್, ಮಧುಕರ್ ಪುಂಜಾಲಕಟ್ಟೆ,ಸುಧೀರ್ ಪೆರ್ಲ,ಅಶೋಕ್ ಸ್ನೇಕ್,ವಿಜಿತ್ ಪೂಜಾರಿ ಮುಂಡಾಜೆ,ವಿಶ್ವನಾಥ್ ಬುಡೆಂಗೊಟ್ಟು,ಸುಜೀತ್ ಮಾಲಾಡಿ,ಪ್ರಶಾಂತ್ ದಾನ,ಪುಷ್ಪರಾಜ್ ಪುರಿಯ,ಹರಿಪ್ರಸಾದ್ ಪುರಿಯ,ರಾಜ್ ಕೋಟ್ಯಾನ್ ಮದ್ದಡ್ಕ,ಲಕ್ಷಣ್ ಮೆಸ್ಕಾಂ ಮಡಂತ್ಯಾರ್ ,ಸುನೀಲ್ ಉಪಸ್ಥಿತಿತರಿದ್ದರು.

ಇನ್ನು ಹೆಚ್ಚಿನ ಧನಸಹಾಯದ ಅಗತ್ಯ ವಿದ್ದು ನೀಡುವವರು ನೇರವಾಗಿ ಪೂರ್ಣಿಮಾ ಅವರ ಖಾತೆಗೆ ನೀಡಬಹುದು.

ಪೂರ್ಣಿಮಾ
ಖಾತೆ ಸಂಖ್ಯೆ. 520291028831611
ಕಾರ್ಪೊರೇಷನ್ ಬ್ಯಾಂಕ್ ಮಡಂತ್ಯಾರ್ ಬ್ರಾಂಚ್
IFSC COD-CORP0000145
INR-014500101017343
Google Play-9742621757


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »