TOP STORIES:

60 ಹೆಚ್ಚು ಕೋವಿಡ್ ಮೃತರ ಶವ ಸಂಸ್ಕಾರ, ಕೊರೋನಾ ವಾರಿಯರ್‌ ನಾಗಾರ್ಜುನ್ ಪೂಜಾರಿ


ನಾಗಾರ್ಜುನ್.ಡಿ.ಪೂಜಾರಿಯವರು ದಿನೇಶ್. ಪೂಜಾರಿ ಹಾಗೂ ಜಯ. ಡಿ. ಪೂಜಾರಿ. ರವರ ಪುತ್ರನಾಗಿದ್ದು, ಉಡುಪಿಯ ಗುಂಡಿಬೈಲಿನಲ್ಲಿ ನೆಲೆಸಿದ್ದಾರೆ. ಉಡುಪಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಸತತ ಮೂರು – ನಾಲ್ಕು ತಿಂಗಳಿಂದ ಕೋರೋನಾ ಸೋಂಕಿತ ಮೃತದೇಹವನ್ನು ದಹನ ಮಾಡುವ ಕಾರ್ಯದಲ್ಲಿ ಮತ್ತೆರಡು ಜನ ಒಳಗೊಂಡ ತಂಡಕ್ಕೆ ಸಾರಥಿಯಂತೆ ಇದ್ದು ಅವರಿಗೂ ಧೈರ್ಯ ನೀಡುತ್ತ ಮಾನವೀಯತೆಯಿಂದ ನಿಸ್ವಾರ್ಥವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಇಂತಹ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.

ಕ್ರಿಕೆಟ್ ಲೋಕದ ಅತ್ಯದ್ಭುತ ಪ್ರತಿಭೆ ಕೂಡಾ ಹೌದು ನಾಗಾರ್ಜುನ್

ತನ್ನ ಹದಿಮೂರನೆಯ ವಯಸ್ಸಿಗೇ ದೊಡ್ಡಣಗುಡ್ಡೆ ಫ್ರೆಂಡ್ಸ್ ತಂಡದ ಮೂಲಕವಾಗಿ ಟೆನಿಸ್ ಕ್ರಿಕೆಟ್ ಗೆ ಪರಿಚಯ ಕಂಡು ನಂತರ ಗುರುಶ್ರೀ ಗುಂಡಿಬೈಲು ಹಾಗೂ ವಿಷ್ಣುಮೂರ್ತಿ ದೊಡ್ಡಣಗುಡ್ಡೆ, ಸಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ ಹಾಗೂ ಲೋಕಲ್ ಬಾಯ್ಸ್ ಉಡುಪಿ ತಂಡದ ಪರವಾಗಿ ಬಹಳಷ್ಟು ಪಂದ್ಯಾಟವನ್ನು ಗೆಲ್ಲಿಸಿಕೊಟ್ಟ ಕ್ರಿಕೆಟಿಗ.

ಜಿಲ್ಲೆ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಆಲ್-ರೌಂಡರ್ ಆಟಗಾರನಾಗಿ ಗುರುತಿಸಿಕೊಂಡರು. ಟೆನಿಸ್ ಕ್ರಿಕೆಟ್‌ನ ಜನಪ್ರಿಯ ತಂಡಗಳಾದ ಉಡುಪಿಯ ಎ.ಕೆ. ಸ್ಪೋರ್ಟ್ಸ್, ಉಡುಪಿ ಫ್ರೆಂಡ್ಸ್, ಬಿಬಿಸಿ ಅಗ್ರಹಾರ, ಸೈಮಂಡ್ಸ್ ಕಡಿಯಾಳಿ, ರಿಯಲ್ ಫೈಟರ್ಸ್ ನಂತಹ ತಂಡಗಳನ್ನು ಪ್ರತಿನಿಧಿಸಿ ಅಪಾರ ಯಶಸ್ಸನ್ನು ಕೂಡಾ ತನ್ನದಾಗಿಸಿಕೊಂಡಿದ್ದಾರೆ.

ಕರಾವಳಿಯ ಭಾಗದಲ್ಲಿ ಜನಪ್ರಿಯತೆಯನ್ನು ಪಡೆದಿರುವ 40 ಗಜಗಳ ಮಾದರಿಯ ಪಂದ್ಯಾಕೂಟಗಳಲ್ಲಿ ಆ ಪಂದ್ಯಾಕೂಟಗಳ ಶ್ರೇಷ್ಠ ತಂಡಗಳೆನಿಸಿಕೊಂಡ ಜಾನ್ಸನ್ ಕುಂದಾಪುರ, ಚಾಲೆಂಜ್ ಕುಂದಾಪುರ , ಈಗಲ್ಸ್ ಕುಂಭಾಶಿಯ ಪರವಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ.

2011 ರಿಂದ ಈಚೆಗೆ ತನ್ನನ್ನು ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಇಲ್ಲಿಯವರೆಗೆ ತನ್ನ ಸಾಧನೆಗಾಗಿ 350 +ಕ್ಕೂ ಮಿಗಿಲಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ, 170ಕ್ಕೂ ಹೆಚ್ಚು ಉತ್ತಮ ದಾಂಡಿಗ ಹಾಗೂ ಉತ್ತಮ ಬೌಲರ್ ಪ್ರಶಸ್ತಿ ಮತ್ತು 45 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಇವರ ಮುಡಿಗೇರಿದೆ.

ಉಡುಪಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಂಡಕ್ಕೆ ಸತತ ಮೂರು ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ತನ್ನ ಉತ್ತಮ ರೀತಿಯ ದಾಂಡಿಗ ಹಾಗೂ ನಿಖರವಾಗಿ ಚೆಂಡನ್ನು ತಿರುಗಿಸಬಲ್ಲ ಚಾಣಾಕ್ಷ ಎಸೆತಗಾರನಾಗಿ ತನ್ನನ್ನು ಗುರುತಿಸಿಕೊಂಡು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿಕೊಂಡಿದ್ದಾರೆ.

“ಕೋರೋನಾ ಪ್ರಾರಂಭವಾದಾಗ ಪಾಸಿಟಿವ್ ಬಂದ ಪ್ರಕರಣದ ಶವವನ್ನು ಬೀಡಿನಗುಡ್ಡೆಯಲ್ಲಿ ಸುಡಲಾಗಿತ್ತು . ಇದು ಅಲ್ಲಿಗೆ ಬರುವ ಸಾರ್ವಜನಿಕರಿಗೆ ಆತಂಕ ಹುಟ್ಟಿಸಿತ್ತು. ಆದ್ದರಿಂದ ಇಂದ್ರಾಳಿಯಲ್ಲಿರುವ ಶವಾಗಾರವನ್ನು ಸ್ವಚ್ಛ ಗೊಳಿಸಿ ಅಲ್ಲಿ ಸುಡುವ ಕೆಲಸ ಆರಂಭಿಸಿದ್ದೆ. ಐವತ್ತು ಶವಗಳನ್ನ ಸಂಸ್ಕಾರ ಮಾಡುವವರೆಗೆ ಮನೆಯವರಿಗೂ ಗೊತ್ತಿರಲಿಲ್ಲ. ಇಲ್ಲಿ ಎರಡು ಹೆಣ ಸುಡುವ ಪೆಟ್ಟಿಗೆ ಇದೆ. ಈ ಹಿಂದೆ ಕೋವಿಡ್ ನಿಂದ ಮರಣ ಹೊಂದಿದವರನ್ನು ಹೂಳಲಾಗ್ತಾ ಇತ್ತು.

ಆದರೆ ಅದು ಹಿಂದುಗಳ ಕ್ರಮವಲ್ಲ. ಸತ್ತ ಮೇಲೆ ಮನೆಯವರು ಬೂದಿಯೂ ಸಿಕ್ಕಿಲ್ಲ ಎಂಬ ಪಶ್ಚಾತ್ತಾಪ ಪಡಬಾರದಲ್ಲ. ಪಿಪಿಇ ಕಿಟ್ ಬಳಸಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ, ಮನೆಯ ಒಳಗೆ ಹೋಗುವ ಮೊದಲು ನನ್ನ ಮತ್ತು ಮನೆಯವರ ಆರೋಗ್ಯದ ದೃಷ್ಟಿಯಿಂದ ಸ್ವಚ್ಚತೆಯನ್ನು ಮಾಡಿಕೊಳ್ಳುವುದನ್ನು ಮರೆಯುವುದಿಲ್ಲ”.

“ಒಂದು ಹೆಣ ಸುಡಲು 350 ರಿಂದ 400 ಕೆಜೆ , ಅಂದರೆ ರೂ 1200 ಕಟ್ಟಿಗೆ ಬೇಕಾಗುತ್ತದೆ. ಕೆಲವರು ಶವ ಸಂಸ್ಕಾರಕ್ಕೆ ಹಣ ಕೊಡುತ್ತಾರೆ. ಇನ್ನು ಬಡವರು ಅಷ್ಟು ಶಕ್ತರಾಗಿರುವುದಿಲ್ಲ. ಆಗ ನಾವೇ ಮುಂದೆ ನಿಂತು ನಿಭಾಯಿಸುತ್ತೇವೆ. ಈ ಎಲ್ಲಾ ಕೆಲಸಕ್ಕೆ ನಗರಸಭೆಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಇದೆ. ಕೊರೊನ ಸಂಕಷ್ಟ ಸಮಯದಲ್ಲಿ ಇದು ಒಂದು ಸಣ್ಣ ಸೇವೆ ಎಂದು ಕೆಲಸ ಮುಂದುವರಿಸಿದ್ದೇನೆ”, ಎನ್ನುತ್ತಾರೆ ನಾಗಾರ್ಜುನ್.

ಲಾಕ್ ಡೌನ್ ಶುರುವಾದಾಗಿನಿಂದ ಒಂದು ರಜೆಯ ನ್ನೂ ತೆಗೆದುಕೊಂಡಿಲ್ಲವಂತೆ ನಾಗಾರ್ಜುನ್. ಆಗಲೂ ಸ್ಯಾನಿಟೈಸೇಶನ್, ನಿರಾಶ್ರಿತರಿಗೆ ಊಟ ಕೊಡುವುದು ನಡೆದೇ ಇತ್ತು. ಅಲ್ಲದೇ ಪ್ರತಿ ದಿನ 10-30 ಮನೆಗಳಿಗೆ ಹೋಗಿ ಕೊರೋನಾ ಜಾಗ್ರತಿ ಮೂಡಿಸುವ ಕೆಲಸ ಕೂಡ ಮಾಡ್ತ ಇದ್ದಾರೆ.

ಇನ್ನು ನಿತ್ಯದ ಸೇವೆ ಹೊರತು ಪಡಿಸಿ ಕ್ರಿಕೆಟ್ ಆಡುವುದು ಇವರ ಆಸಕ್ತಿ. ಈಗ ಕೆಲಸದ ಒತ್ತಡದಿಂದ ಆಡಲು ಆಗುತ್ತಿಲ್ಲ. ಆದರೂ ಸ್ಥಳೀಯ ಕಡೆ ಕ್ರಿಕೆಟ್ ಪಂದ್ಯಾಟವಿದ್ದರೆ ಇವರು ಹಾಜರ್. ಇಷ್ಟು ಕೆಲಸ ನಿರಂತರ ಮಾಡುತ್ತಿದ್ದರೂ ಎಲೆ ಮರೆ ಕಾಯಿಯಂತೆ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.

Special: Billavaswarriors.com team


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »