TOP STORIES:

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಬಿಲ್ಲವರು: ಸಾಹಿತಿ ಸಂಶೋಧಕ ಬಾಬು ಶಿವ ಪೂಜಾರಿ


”ವಿಜಯನಗರ ಸ್ಥಾಪನೆಯಲ್ಲಿ ಬಿಲ್ಲವರಿದ್ದಾರೆ ಎಂಬುದಕ್ಕೆ ಎರಡು ವೀರಗಲ್ಲುಗಳು ಸಾಕ್ಷಿಯಾಗಿವೆ. ಮೇಲ್ವರ್ಗದವರು ಇತಿಹಾಸವನ್ನು ಹೇಗೆ ತಮಗೆ ತಕ್ಕಂತೆ ಬದಲಾವಣೆ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಾನು ನನ್ನ ಮುಂಬರುವ ಪುಸ್ತಕದಲ್ಲಿ ದಾಖಲೆಗಳನ್ನು ಪ್ರಸ್ತುತಪಡಿಸಲಿದ್ದೇನೆ” ಎಂದು ಹಿರಿಯ ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಹೇಳಿದ್ದಾರೆ.

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ವಿಶುಕುಮಾ‌ರ್ ದತ್ತಿನಿಧಿ ಸಮಿತಿ ವತಿಯಿಂದ ಹಾಗೂ ಯುವವಾಹಿನಿ ಪಣಂಬೂರು-ಕುಳಾಯಿ ಘಟಕದ ಆತಿಥ್ಯದಲ್ಲಿ ಉರ್ವಸ್ಟೋರ್‌ನ ತುಳುಭವನದಲ್ಲಿ ರವಿವಾರ ಜರುಗಿದ 2024ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

“ವಿಜಯನಗರವನ್ನು ಸ್ಥಾಪನೆ ಮಾಡಿದವರಲ್ಲಿ ವಿದ್ಯಾರಣ್ಯರು ಪ್ರಮುಖರು ಎನ್ನಲಾಗುತ್ತದೆ. ನಾನು ಬರೆದ ವಿಜಯನಗರ ತುಳುವರು ಮತ್ತು ಬಿಲ್ಲವರ ಕುರಿತಾದ ಅಧ್ಯಯನ ಕೃತಿ ಮುಂದಿನ ಎರಡು ತಿಂಗಳಲ್ಲಿ ಪ್ರಕಟಗೊಳ್ಳಲಿದ್ದು, ಅದರಲ್ಲಿ ಒಂದು ಅಧ್ಯಾಯ ವಿದ್ಯಾರಣ್ಯರಿಗೆ ಮೀಸಲಿಟ್ಟಿದ್ದೇನೆ. ವಿಜಯನಗರ ಸ್ಥಾಪನೆಯಾಗಿದ್ದು 1336 ಎಪ್ರಿಲ್ 18ರ ಶುಕ್ರವಾರ. ಈ ಸಮಯದಲ್ಲಿ ವಿದ್ಯಾರಣ್ಯರ ಪ್ರಾಯ ಕೇವಲ 5 ವರ್ಷ. ಆ ಮಗು ಹೇಗೆ ರಾಜಗುರು ಆಗುತ್ತದೆ? ಹೇಗೆ ಸನ್ಯಾಸಿಯಾಗುತ್ತದೆ? ಎಂಬುದಕ್ಕೆ ಉತ್ತರ ಸಿಗಬೇಕಿದೆ. ಇತಿಹಾಸದಲ್ಲಿ ತಳವರ್ಗವನ್ನು ತಳಕ್ಕೆ ದೂಡಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ನಾವು ಯಾರನ್ನೂ ದೂಷಿಸುತ್ತಿಲ್ಲ. ಆದರೆ ತಳವರ್ಗದ ಇತಿ ಹಾಸವನ್ನು ಯಾಕೆ ಮುಚ್ಚಲಾಗುತ್ತದೆ ಎಂಬುದಕ್ಕೆ ಉತ್ತರ ಬೇಕಿದೆ” ಎಂದವರು ಹೇಳಿದರು.

ಸದ್ಯ ಸನಾತನ ಧರ್ಮದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ದಾಸ ಪರಂಪರೆಯಲ್ಲಿ 222 ಮಂದಿ ದಾಸರ ಉಲ್ಲೇಖವಿದೆ ಆದರೆ ದಾಸ ಸಾಹಿತ್ಯದಲ್ಲಿ ಸೂಫಿ ಸಂತರಿಂದ ಮತ ಪರಿವರ್ತನೆ ಆಗಿದ್ದರ ಬಗ್ಗೆ ಯಾಕೆ ಯಾರೊಬ್ಬರೂ ಧ್ವನಿ ಎತ್ತಿಲ್ಲ? ಇಂದು ಯಾಕೆ ಮುಸ್ಲಿಮರ ವಿರುದ್ಧ ಧ್ವನಿ ಎತ್ತಲಾಗುತ್ತಿದೆ? ನಾನು ಸಾಕಷ್ಟು ದಾಸ ಪುಸ್ತಕಗಳ ಅಧ್ಯಯನ ನಡೆಸಿದ್ದೇನೆ. ನಮ್ಮ ತುಳು ಸಂಸ್ಕೃತಿ, ಸಭ್ಯತೆಯಲ್ಲಿ ಎಲ್ಲ ಜನಾಂಗದವರನ್ನು ಸೇರಿಸಿಕೊಂಡು ಒಟ್ಟಿಗೆ ಕೂಡಿ ಬಾಳಿದೆ ಇದು ನಾರಾಯಣಗುರುಗಳ ತತ್ವವಾಗಿದೆ ಎಂದು ಬಾಬು ಶಿವ ಪೂಜಾರಿ ವಿಶ್ಲೇಷಿಸಿದರು.

“ತುಳು ಭಾಷೆಯ ಲಿಪಿಯ ಬಗ್ಗೆ ಚರ್ಚಿತ ವಿಚಾರ. 14ನೇ ಶತಮಾನದಲ್ಲಿ ತುಳು ಲಿಪಿಯನ್ನು ತಮ್ಮ ಸಾಹಿತ್ಯದಲ್ಲಿ ಬಳಸಲಾಗಿದೆ ಎಂಬ ಉಲ್ಲೇಖ ಮಲಯಾಳಂ ಸಾಹಿತ್ಯದಲ್ಲಿದ್ದು ತುಳು ಲಿಪಿ ತುಳುವರದ್ದೇ ಎಂಬುದಕ್ಕೆ ಬೇರೆ ದಾಖಲೆ ಬೇಕಾಗಿಲ್ಲ. 2ನೇ ಶತಮಾನದ ತಮಿಳು ಸಾಹಿತ್ಯದಲ್ಲಿ ತುಳುವಿನ ಬಗ್ಗೆ ಉಲ್ಲೇಖವಿದೆ. 2010 ಮತ್ತು 12ರಲ್ಲಿ ಎರಡು ಬಾರಿ ತಮಿಳುನಾಡಿನ ಗ್ರಾಮಾಂತರ ಪ್ರದೇಶಕ್ಕೆ ಭೇಟಿ ನೀಡಿ ಅನೇಕ ತುಳು ಪೂರ್ವಿಕರನ್ನು ಭೇಟಿಯಾಗಿದ್ದೇನೆ ಹಾಗಾಗಿ ತುಳು ಪ್ರಾಚೀನ ಭಾಷೆ ಗ್ರೀಕ್‌ನಲ್ಲೂ ತುಳುವಿಗೆ ಸಂಬಂಧಿಸಿದ ವಿಚಾರವಿದೆ. ಕೆಲ ವರ್ಷಗಳ ಹಿಂದೆ ಗ್ರೀಕ್‌ನಿಂದ ಕೆಲವೊಂದು ವೀಡಿಯೊಗ್ರಫಿ ತರಿಸಿಕೊಂಡಿದ್ದು, ನೀರೆತ್ತುವ ರಾಟೆ, ನಮ್ಮಲ್ಲಿ ತೆಂಗಿನಮರಕ್ಕೆ ಕಟ್ಟುವ ಕಟ್ಟಿ ಅಲ್ಲಿ ಖರ್ಜೂರದ ಮರಕ್ಕೆ ಕಟ್ಟೆ ಕಟ್ಟುವ ತದ್ರೂಪವಿದೆ. ಆದರೆ ತುಳುನಾಡಿನಲ್ಲಿ ಸಿಗುವ ಎಲ್ಲಾ ಶಾಸನಗಳು ಕನ್ನಡದಲ್ಲಿವೆ. ಅದಕ್ಕೆ ಕಾರಣ ತುಳುನಾಡು ಒಂದು ಕಾಲದಲ್ಲಿ ಹಾಸನದವರೆಗೆ ಹಬ್ಬಿತ್ತು. ಅಲ್ಲಿ ಆದಿ ಬಿಲ್ಲೇಶ್ವರ ಎಂಬ ಬಿಲ್ಲವರ ಆದಿ ದೇವಸ್ಥಾನವಿದೆ” ಎಂದವರು ವಿವರಿಸಿದರು.

“ನನ್ನ ಹುಟ್ಟುಭಾಷೆ ಕುಂದಾಪುರ ಕನ್ನಡ, ಆದರೆ ಬಡತನ ಮುಂಬೈನ ಹೊರನಾಡಿಗೆ ಕಳುಹಿಸಿ ಅಲ್ಲಿನ ಭಾಷೆಯೊಂದಿಗೆ ಬೆರೆಯುವಂತೆ ಮಾಡಿತು. ದುಡಿಮೆಯ ಜತೆ ಕಲಿಕೆಯನ್ನು ಮುಂದುವರಿಸಿದ್ದ ನನಗೆ ಶಿಕ್ಷಣಕ್ಕೆ ನೆರವಾಗಿದ್ದು ಮುಂಬೈನಲ್ಲಿ ನಡೆಯುತ್ತಿದ್ದ ರಾತ್ರಿ ಶಾಲೆ ಅಲ್ಲಿದ್ದ ಬಹುತೇಕ ಉಪಾಧ್ಯಾಯರು ಉಚಿತವಾಗಿ ಶಿಕ್ಷಣ ನೀಡುತ್ತಿದ್ದ ಕಾರಣ ಶಿಕ್ಷಣದ ಜತೆಗೆ ನಾನು ಬರೆಯಲೂ ಕಾರಣವಾಯಿತು. ಅಂತಹ ಉಪಾಧ್ಯಾಯರಿಗೆ ನನಗೆ ಸಿಕ್ಕ ಗೌರವವನ್ನು ಅರ್ಪಿಸುತ್ತೇನೆ’ ಎಂದು ಬಾಬು ಶಿವ ಪೂಜಾರಿ ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಪದ್ಮರಾಜ್ ಆರ್ ಕುದ್ರೋಳಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ, ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಂಚಾಲಕ ಸುರೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »