TOP STORIES:

FOLLOW US

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಬಿಲ್ಲವರು: ಸಾಹಿತಿ ಸಂಶೋಧಕ ಬಾಬು ಶಿವ ಪೂಜಾರಿ


”ವಿಜಯನಗರ ಸ್ಥಾಪನೆಯಲ್ಲಿ ಬಿಲ್ಲವರಿದ್ದಾರೆ ಎಂಬುದಕ್ಕೆ ಎರಡು ವೀರಗಲ್ಲುಗಳು ಸಾಕ್ಷಿಯಾಗಿವೆ. ಮೇಲ್ವರ್ಗದವರು ಇತಿಹಾಸವನ್ನು ಹೇಗೆ ತಮಗೆ ತಕ್ಕಂತೆ ಬದಲಾವಣೆ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಾನು ನನ್ನ ಮುಂಬರುವ ಪುಸ್ತಕದಲ್ಲಿ ದಾಖಲೆಗಳನ್ನು ಪ್ರಸ್ತುತಪಡಿಸಲಿದ್ದೇನೆ” ಎಂದು ಹಿರಿಯ ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಹೇಳಿದ್ದಾರೆ.

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ವಿಶುಕುಮಾ‌ರ್ ದತ್ತಿನಿಧಿ ಸಮಿತಿ ವತಿಯಿಂದ ಹಾಗೂ ಯುವವಾಹಿನಿ ಪಣಂಬೂರು-ಕುಳಾಯಿ ಘಟಕದ ಆತಿಥ್ಯದಲ್ಲಿ ಉರ್ವಸ್ಟೋರ್‌ನ ತುಳುಭವನದಲ್ಲಿ ರವಿವಾರ ಜರುಗಿದ 2024ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

“ವಿಜಯನಗರವನ್ನು ಸ್ಥಾಪನೆ ಮಾಡಿದವರಲ್ಲಿ ವಿದ್ಯಾರಣ್ಯರು ಪ್ರಮುಖರು ಎನ್ನಲಾಗುತ್ತದೆ. ನಾನು ಬರೆದ ವಿಜಯನಗರ ತುಳುವರು ಮತ್ತು ಬಿಲ್ಲವರ ಕುರಿತಾದ ಅಧ್ಯಯನ ಕೃತಿ ಮುಂದಿನ ಎರಡು ತಿಂಗಳಲ್ಲಿ ಪ್ರಕಟಗೊಳ್ಳಲಿದ್ದು, ಅದರಲ್ಲಿ ಒಂದು ಅಧ್ಯಾಯ ವಿದ್ಯಾರಣ್ಯರಿಗೆ ಮೀಸಲಿಟ್ಟಿದ್ದೇನೆ. ವಿಜಯನಗರ ಸ್ಥಾಪನೆಯಾಗಿದ್ದು 1336 ಎಪ್ರಿಲ್ 18ರ ಶುಕ್ರವಾರ. ಈ ಸಮಯದಲ್ಲಿ ವಿದ್ಯಾರಣ್ಯರ ಪ್ರಾಯ ಕೇವಲ 5 ವರ್ಷ. ಆ ಮಗು ಹೇಗೆ ರಾಜಗುರು ಆಗುತ್ತದೆ? ಹೇಗೆ ಸನ್ಯಾಸಿಯಾಗುತ್ತದೆ? ಎಂಬುದಕ್ಕೆ ಉತ್ತರ ಸಿಗಬೇಕಿದೆ. ಇತಿಹಾಸದಲ್ಲಿ ತಳವರ್ಗವನ್ನು ತಳಕ್ಕೆ ದೂಡಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ನಾವು ಯಾರನ್ನೂ ದೂಷಿಸುತ್ತಿಲ್ಲ. ಆದರೆ ತಳವರ್ಗದ ಇತಿ ಹಾಸವನ್ನು ಯಾಕೆ ಮುಚ್ಚಲಾಗುತ್ತದೆ ಎಂಬುದಕ್ಕೆ ಉತ್ತರ ಬೇಕಿದೆ” ಎಂದವರು ಹೇಳಿದರು.

ಸದ್ಯ ಸನಾತನ ಧರ್ಮದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ದಾಸ ಪರಂಪರೆಯಲ್ಲಿ 222 ಮಂದಿ ದಾಸರ ಉಲ್ಲೇಖವಿದೆ ಆದರೆ ದಾಸ ಸಾಹಿತ್ಯದಲ್ಲಿ ಸೂಫಿ ಸಂತರಿಂದ ಮತ ಪರಿವರ್ತನೆ ಆಗಿದ್ದರ ಬಗ್ಗೆ ಯಾಕೆ ಯಾರೊಬ್ಬರೂ ಧ್ವನಿ ಎತ್ತಿಲ್ಲ? ಇಂದು ಯಾಕೆ ಮುಸ್ಲಿಮರ ವಿರುದ್ಧ ಧ್ವನಿ ಎತ್ತಲಾಗುತ್ತಿದೆ? ನಾನು ಸಾಕಷ್ಟು ದಾಸ ಪುಸ್ತಕಗಳ ಅಧ್ಯಯನ ನಡೆಸಿದ್ದೇನೆ. ನಮ್ಮ ತುಳು ಸಂಸ್ಕೃತಿ, ಸಭ್ಯತೆಯಲ್ಲಿ ಎಲ್ಲ ಜನಾಂಗದವರನ್ನು ಸೇರಿಸಿಕೊಂಡು ಒಟ್ಟಿಗೆ ಕೂಡಿ ಬಾಳಿದೆ ಇದು ನಾರಾಯಣಗುರುಗಳ ತತ್ವವಾಗಿದೆ ಎಂದು ಬಾಬು ಶಿವ ಪೂಜಾರಿ ವಿಶ್ಲೇಷಿಸಿದರು.

“ತುಳು ಭಾಷೆಯ ಲಿಪಿಯ ಬಗ್ಗೆ ಚರ್ಚಿತ ವಿಚಾರ. 14ನೇ ಶತಮಾನದಲ್ಲಿ ತುಳು ಲಿಪಿಯನ್ನು ತಮ್ಮ ಸಾಹಿತ್ಯದಲ್ಲಿ ಬಳಸಲಾಗಿದೆ ಎಂಬ ಉಲ್ಲೇಖ ಮಲಯಾಳಂ ಸಾಹಿತ್ಯದಲ್ಲಿದ್ದು ತುಳು ಲಿಪಿ ತುಳುವರದ್ದೇ ಎಂಬುದಕ್ಕೆ ಬೇರೆ ದಾಖಲೆ ಬೇಕಾಗಿಲ್ಲ. 2ನೇ ಶತಮಾನದ ತಮಿಳು ಸಾಹಿತ್ಯದಲ್ಲಿ ತುಳುವಿನ ಬಗ್ಗೆ ಉಲ್ಲೇಖವಿದೆ. 2010 ಮತ್ತು 12ರಲ್ಲಿ ಎರಡು ಬಾರಿ ತಮಿಳುನಾಡಿನ ಗ್ರಾಮಾಂತರ ಪ್ರದೇಶಕ್ಕೆ ಭೇಟಿ ನೀಡಿ ಅನೇಕ ತುಳು ಪೂರ್ವಿಕರನ್ನು ಭೇಟಿಯಾಗಿದ್ದೇನೆ ಹಾಗಾಗಿ ತುಳು ಪ್ರಾಚೀನ ಭಾಷೆ ಗ್ರೀಕ್‌ನಲ್ಲೂ ತುಳುವಿಗೆ ಸಂಬಂಧಿಸಿದ ವಿಚಾರವಿದೆ. ಕೆಲ ವರ್ಷಗಳ ಹಿಂದೆ ಗ್ರೀಕ್‌ನಿಂದ ಕೆಲವೊಂದು ವೀಡಿಯೊಗ್ರಫಿ ತರಿಸಿಕೊಂಡಿದ್ದು, ನೀರೆತ್ತುವ ರಾಟೆ, ನಮ್ಮಲ್ಲಿ ತೆಂಗಿನಮರಕ್ಕೆ ಕಟ್ಟುವ ಕಟ್ಟಿ ಅಲ್ಲಿ ಖರ್ಜೂರದ ಮರಕ್ಕೆ ಕಟ್ಟೆ ಕಟ್ಟುವ ತದ್ರೂಪವಿದೆ. ಆದರೆ ತುಳುನಾಡಿನಲ್ಲಿ ಸಿಗುವ ಎಲ್ಲಾ ಶಾಸನಗಳು ಕನ್ನಡದಲ್ಲಿವೆ. ಅದಕ್ಕೆ ಕಾರಣ ತುಳುನಾಡು ಒಂದು ಕಾಲದಲ್ಲಿ ಹಾಸನದವರೆಗೆ ಹಬ್ಬಿತ್ತು. ಅಲ್ಲಿ ಆದಿ ಬಿಲ್ಲೇಶ್ವರ ಎಂಬ ಬಿಲ್ಲವರ ಆದಿ ದೇವಸ್ಥಾನವಿದೆ” ಎಂದವರು ವಿವರಿಸಿದರು.

“ನನ್ನ ಹುಟ್ಟುಭಾಷೆ ಕುಂದಾಪುರ ಕನ್ನಡ, ಆದರೆ ಬಡತನ ಮುಂಬೈನ ಹೊರನಾಡಿಗೆ ಕಳುಹಿಸಿ ಅಲ್ಲಿನ ಭಾಷೆಯೊಂದಿಗೆ ಬೆರೆಯುವಂತೆ ಮಾಡಿತು. ದುಡಿಮೆಯ ಜತೆ ಕಲಿಕೆಯನ್ನು ಮುಂದುವರಿಸಿದ್ದ ನನಗೆ ಶಿಕ್ಷಣಕ್ಕೆ ನೆರವಾಗಿದ್ದು ಮುಂಬೈನಲ್ಲಿ ನಡೆಯುತ್ತಿದ್ದ ರಾತ್ರಿ ಶಾಲೆ ಅಲ್ಲಿದ್ದ ಬಹುತೇಕ ಉಪಾಧ್ಯಾಯರು ಉಚಿತವಾಗಿ ಶಿಕ್ಷಣ ನೀಡುತ್ತಿದ್ದ ಕಾರಣ ಶಿಕ್ಷಣದ ಜತೆಗೆ ನಾನು ಬರೆಯಲೂ ಕಾರಣವಾಯಿತು. ಅಂತಹ ಉಪಾಧ್ಯಾಯರಿಗೆ ನನಗೆ ಸಿಕ್ಕ ಗೌರವವನ್ನು ಅರ್ಪಿಸುತ್ತೇನೆ’ ಎಂದು ಬಾಬು ಶಿವ ಪೂಜಾರಿ ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಪದ್ಮರಾಜ್ ಆರ್ ಕುದ್ರೋಳಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ, ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಂಚಾಲಕ ಸುರೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »