TOP STORIES:

FOLLOW US

ರಾಮಮಂದಿರದ ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ಏನು ಮಾಡಬೇಕು?

ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ಏನು ಮಾಡಬೇಕು? ನಮಗೆಲ್ಲಾ ತಿಳಿದಿರುವ ಹಾಗೆ ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆ ದೇಶದ ಪ್ರತಿಯೊಂದು ಹಿಂದೂವಿನ ಮನೆ ತಲುಪಿದೆ ಇನ್ನು ಕೆಲವು ಮನೆಗೆ ತಲುಪಬೇಕಿದೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ನಾವು ಈಗಲೇ ಉಪಯೋಗ ಮಾಡುವಂತಿಲ್ಲ. ಜನವರಿ 22ನೇ ತಾರಿಕಿನ ವರೆಗೆ ತಮ್ಮತಮ್ಮ ದೇವರ ಸ್ಟಾಂಡ್ ಲ್ಲಿ ಅಥವಾ ದೇವರಕೋಣೆಯಲ್ಲಿ ಇಡಬೇಕು. ದಿನನಿತ್ಯ ದೇವರಿಗೆ ಪೂಜೆ ಮಾಡುವಾಗ ಆ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಬೇಕು. ಇದೇ ಜನವರಿ 22 ಸೋಮವಾರ ಮಧ್ಯಾಹ್ನ 12 ಘಂಟೆ […]

ಮಂಗಳೂರು ಬಜ್ಪೆ ಊರಿನಲ್ಲೊಬ್ಬ ಆಪತ್ಬಾಂಧವ… ದಿನೇಶಣ್ಣ ಬಜಪೆ.

#ಬಜ್ಪೆ_ರಿಕ್ಷ_ದಿನೇಶಣ್ಣೆ…. 😍 ಮಂಗಳೂರು ಬಜ್ಪೆ  ಊರಿನಲ್ಲೊಬ್ಬ ಆಪತ್ಬಾಂಧವ…. ನಮ್ಮ ಆಟೋ ದಿನೇಶಣ್ಣ ಬಜಪೆ. ಎಲ್ಲೋ ಒಬ್ಬ ಆಟೋ ಚಾಲಕ ಮೀಟರ್  ಡಬಲ್ ಕೇಳಿದರೆ ನಾವು ಅವನಿಗೆ ಬಾಯಿ ತುಂಬಾ ಬೈದು ಮತ್ತೆ ಎಲ್ಲಾ ಆಟೋ ಚಾಲಕರ ಮೇಲೆ ಮುನಿಸಿಕೊಳ್ಳುತ್ತೇವೆ. ಆದರೆ ಅದೆಷ್ಟೋ ಆಟೋ ಚಾಲಕರು ತಮ್ಮ ದುಡಿಮೆಯ ಜೊತೆಗೆ ಸಮಾಜದ ಪ್ರತಿ ಒಂದು ವರ್ಗದ ಜಾತಿ ಧರ್ಮ ಭೇದ ಮರೆತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತನ್ನ ಸೇವೆಯನ್ನು ನೀಡಿ ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಷ್ಟು […]

ರಶ್ಮಿ ಸನಿಲ್ ನಿರ್ಮಾಣದ ಕೊರಗಜ್ಜನ ಭಕ್ತಿ ಗೀತೆ ಬಿಡುಗಡೆ 

ಮಂಗಳೂರು :  ಜನವರಿ ೧ ರಂದು ನಂತೂರಿನ ಶ್ರೀ ಕೊರಗ ತನಿಯ ದೈವ ಸಾನಿಧ್ಯದಲ್ಲಿ ಬಿಡುಗಡೆಯಾಯಿತು.  ರಶ್ಮಿ ಸನಿಲ್ ನಿರ್ಮಾಣ, ಸಾಹಿತ್ಯ ಹಾಗೂ ಹಿನ್ನೆಲೆ ಧ್ವನಿಯಾಗಿರುವ ವರ್ಷಾ ಶೆಟ್ಟಿ ಹಾಡಿರುವ. ಕಿರಣ್ ಕೊಯಿಲ ಅವರ ಸಂಕಲನದಲ್ಲಿ ಮೂಡಿ ಬಂದಿರುವ ಕೊರಗಜ್ಜನ ಭಕ್ತಿ ಗೀತೆ ಕಾಪುಲೆ ಕೊರಗಜ್ಜ ರಾಜ್ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.    

ಜಯವುಲ್ಲ ಬೆಮ್ಮೆರ್

Author Venkatesh Karkera ಬೈದರ್ಕಳ ಪಾಡ್ದನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಬುದ್ಯಂತನನ್ನು ಕೊಲ್ಲುವ ಪ್ರಕರಣದಲ್ಲಿ “ಬುದ್ಯಂತನ್ ಜಯಿಪುನು” (ಬುದ್ಯಂತನನ್ನು ಜಯಿಸುವುದು) ಎಂಬ ಪದಪ್ರಯೋಗ ಕಂಡುಬರುತ್ತದೆ. ಆದರೆ ಮುಂದಕ್ಕೆ ಅದೇ ಬೈದರ್ಕಳು ಚಂದುಗಿಡಿಯನ್ನು ಕೊಲ್ಲುವಾಗ ಚಂದುಗಿಡಿಯನ್ನು ಕೊಂದಿದ್ದು ಎನ್ನಲಾಗುತ್ತದೆಯೇ ಹೊರತು ಜಯಿಸಿದ್ದು ಎನ್ನಲಾಗುವುದಿಲ್ಲ. ಬುದ್ಯಂತ ಪಡುಮಲೆಯ ಮಹಾಮಂತ್ರಿಯಾದರೆ ಚಂದುಗಿಡಿ ಪಂಜದ ಮಹಾಮಂತ್ರಿಯಾಗಿದ್ದ. ಇಬ್ಬರೂ ಸಮಾನ ಸ್ಥಾನಮಾನ ಹೊಂದಿದ್ದರೂ ಇಬ್ಬರ ವಧೆಯನ್ನು ಬೇರೆಬೇರೆ ಹೆಸರಿಂದ ಕರೆಯಲಾಗಿದೆ. ಅದರಲ್ಲೂ ವಿಶೇಷವೆಂದರೆ ಚಂದುಗಿಡಿಯನ್ನು ಕೊಂದಿದ್ದು ಯುದ್ದರಂಗದಲ್ಲಿ, ಅಲ್ಲಾದರೆ ಸಾಮಾನ್ಯ ಭಾಷಾ ಬಳಕೆಯಂತೆ ಕೊಲ್ಲುವುದು ಎನ್ನುವ […]

17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನವು ಜನವರಿ 18 ಮತ್ತು 19ರಂದು ಸೌದಿ ಅರೇಬಿಯಾ ದಮ್ಮಾಮ್ ನಲ್ಲಿ ನಡೆಯಲಿದೆ

ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ, ಕರ್ನಾಟಕದ ಹೃದಯವಾಹಿನಿ ಸಂಸ್ಥೆಗಳ ಆಶ್ರಯದಲ್ಲಿ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನವು ಜನವರಿ 18 ಮತ್ತು 19ರಂದು ದಮಾಮ್ ನ ಸಫ್ವಾ ಸಭಾಂಣದಲ್ಲಿ ನಡೆಯಲಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್, ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂದಪಟ್ಟಂತೆ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರಗಲಿವೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪ, […]

ಬೆಮ್ಮೆರ್ – ಬ್ರಹ್ಮ

Author Venkatesh Karkera Team Prajnaanambrahmah ತುಳುನಾಡ ದೈವಗಳಲ್ಲಿ ಅತಿಪ್ರಮುಖ ಶಕ್ತಿ ಎಂದರೆ ಬೆಮ್ಮೆರ್ ಯಾ ಬೆರ್ಮೆರ್. ಆಲಡೆಗಳಲ್ಲಿ, ನಾಗಮೂಲಸ್ಥಾನಗಳಲ್ಲಿ, ಗರಡಿಗಳಲ್ಲಿ, ದೈವಸ್ಥಾನಗಳಲ್ಲಿ ಹೀಗೆ ಹೆಚ್ಚುಕಡಿಮೆ ತುಳುನಾಡ ಉದ್ದಗಲಕ್ಕೂ ಬೇರೆ ಬೇರೆ ಹೆಸರಿನಿಂದ ಆರಾಧಿಸಲ್ಪಡುತ್ತಿದೆ. ಕೆಲವೆಡೆ ಬೆಮ್ಮೆರ್ ಕೋಲನೇಮ ಪಡೆದುಕೊಂಡು ದೈವಗಳಂತೆ ಆರಾಧನೆ ಪಡೆದರೆ ಇತರೆಡೆ ದೇವರಂತೆ ಪೂಜಿಸಲ್ಪಡುತ್ತಾರೆ. ಕೆಲ‌ ಸ್ಥಳಗಳಲ್ಲಿ ಬೆಮ್ಮೆರ್ ಪುನರ್ನಾಮಕಗೊಂಡು ಬ್ರಹ್ಮಲಿಂಗೇಶ್ವರ / ಮಹಾಲಿಂಗೇಶ್ವರ/ ಖಡ್ಗೇಶ್ವರಿ ಹೀಗೆಲ್ಲಾ ಹೊಸ ಹೆಸರಿನೊಂದಿಗೆ ಪೂಜಿಸಲ್ಪಡುತ್ತಿದ್ದಾರೆ. ಈ ರೀತಿಯ ಪುನರ್ನಾಮಕರಣ ಸರಿಯೋ ತಪ್ಪೋ‌ ಎಂಬುದು ಖಂಡಿತವಾಗಿಯೂ ವಿಚಾರಾರ್ಹ. […]

ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ನೇಮಕ

ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ನೇಮಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹಲವು ತಿಂಗಳ ಬಳಿಕ ವಿಧಾಸಭಾ ವಿಪಕ್ಷ ನಾಯಕನನ್ನಾಗಿ ಆರ್ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನನ್ನೂ ಸಹ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಬೆಂಗಳೂರು, (ಡಿಸೆಂಬರ್ 25): ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ(kota srinivas poojary)ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ […]

ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳುನಾಡ ಅದ್ಭುತ ಕಲಾವಿದ ಕುಸಲ್ದರಸೆ ನವೀನ್ ಡಿ ಪಡೀಲ್ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ

ಹುಬ್ಬಳ್ಳಿ: ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ  ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳುನಾಡ ಅದ್ಭುತ ಕಲಾವಿದ ಕುಸಲ್ದರಸೆ ನವೀನ್ ಡಿ ಪಡೀಲ್ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರವಾದ “ಜೀಟಿಗೆ” ನಂತರ ಸಂತೋಷ್ ಮಾಡ ಇವರು ನಿರ್ದೇಶಿಸಿದ ಮೊದಲ ಅರೆಭಾಷೆ ಚಿತ್ರವಾದ ಮೂಗಜ್ಜನ ಕೋಳಿ, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಾದ ಮೂಗಜ್ಜನ ಪಾತ್ರವನ್ನು ನವೀನ್ ಡಿ ಪಡೀಲ್ ಇವರು ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಒಂದೇ ಒಂದು ಮಾತಿಲ್ಲದ, ಕೋಳಿಗಳನ್ನು ಪ್ರೀತಿಸುವ […]

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರು ಇಡುವಂತೆ MLC ಹರೀಶ್ ಕುಮಾರ್ ಒತ್ತಾಯ…

ಬೆಂಗಳೂರು, ಡಿಸೆಂಬರ್ 20: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರ ಹೆಸರಿನ ವಿಚಾರದಲ್ಲಿ ಮತ್ತೆ ಒತ್ತಾಯಗಳು ಕೇಳಿಬರಲಾರಂಭಿಸಿದೆ. ರಾಜ್ಯ ವಿಧಾನ ಪರಿಷತ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಹಿಂದೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕೂಡಾ ಇದೇ ಒತ್ತಾಯವನ್ನು ಮಾಡಿದ್ದಾರೆ. ಹರೀಶ್ ಕುಮಾರ್ ಈ ವಿಚಾರವಾಗಿ ಸರಕಾರವನ್ನು ಬಲವಾಗಿ ಒತ್ತಾಯಿಸಿದ್ದು,ಈ ಸಂಬಂಧ ಹೋರಾಟಕ್ಕೂ ಸಿದ್ಧವಾಗಿದ್ದೇನೆ […]

ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ಮಾನವೀಯ ಮೌಲ್ಯ ಮೆರೆದ ಅರುಣ್ ಉಳ್ಳಾಲ್

ಅರುಣ್ ಉಳ್ಳಾಲ್ ಫೇಸ್ ಬುಕ್ ವಾಲ್ನ್ ನಲ್ಲಿ ಬೆಂಜನಪದವಿನ ಯಮುನಕ್ಕನಿಗೆ ವಿವಾಹ ಕಾಣಿಕೆ ನಮ್ಮ ಗೃಹಪ್ರವೇಶ ಡಿಜೆಮುಕ್ತವಾಗಿ ನಡೆದಾಗ ಅದನ್ನು ಮೆಚ್ಚಿಕೊಂಡರ ಮಧ್ಯೆ ಕೆಲವು ಅಮಲುಪ್ರಿಯರಲ್ಲಿ ‘ಆಹಾ ಒಳ್ಳೆಯ ತಂತ್ರ..ಸಂಸ್ಕೃತಿ ಕುಟುಂಬ ಈ ಮೂಲಕ ಸಾಕಷ್ಟು ಹಣ ಉಳಿಸಿತು’ ಎಂಬ ಅಗ್ಗದ ಮಾತುಗಳು ಕೇಳಿಬಂದಿತ್ತಂತೆ.‌ ಹೌದು, ಹಣ ಉಳಿಸಿದ್ದು ಸತ್ಯ. ಯಾರ್ಯಾಯ ಮನೆಮಕ್ಕಳಿಗೆ ಕುಡಿಸಿ ನಮ್ಮ ಹಣ ಸಾರ್ಥಕತೆ ಪಡೆಯಬೇಕೆ? ದುಂದುವೆಚ್ಚ ಅಂದು ಮಾತ್ರವಲ್ಲ ಇಂದೂ ಇಲ್ಲವೇ ಇಲ್ಲ. ಆದರೆ ಇದು ಹಣ ಉಳಿಸುವ ಉದ್ದೇಶವಲ್ಲ.‌ ಡಿಜೆ […]