TOP STORIES:

FOLLOW US

ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ಮಾನವೀಯ ಮೌಲ್ಯ ಮೆರೆದ ಅರುಣ್ ಉಳ್ಳಾಲ್

ಅರುಣ್ ಉಳ್ಳಾಲ್ ಫೇಸ್ ಬುಕ್ ವಾಲ್ನ್ ನಲ್ಲಿ ಬೆಂಜನಪದವಿನ ಯಮುನಕ್ಕನಿಗೆ ವಿವಾಹ ಕಾಣಿಕೆ ನಮ್ಮ ಗೃಹಪ್ರವೇಶ ಡಿಜೆಮುಕ್ತವಾಗಿ ನಡೆದಾಗ ಅದನ್ನು ಮೆಚ್ಚಿಕೊಂಡರ ಮಧ್ಯೆ ಕೆಲವು ಅಮಲುಪ್ರಿಯರಲ್ಲಿ ‘ಆಹಾ ಒಳ್ಳೆಯ ತಂತ್ರ..ಸಂಸ್ಕೃತಿ ಕುಟುಂಬ ಈ ಮೂಲಕ ಸಾಕಷ್ಟು ಹಣ ಉಳಿಸಿತು’ ಎಂಬ ಅಗ್ಗದ ಮಾತುಗಳು ಕೇಳಿಬಂದಿತ್ತಂತೆ.‌ ಹೌದು, ಹಣ ಉಳಿಸಿದ್ದು ಸತ್ಯ. ಯಾರ್ಯಾಯ ಮನೆಮಕ್ಕಳಿಗೆ ಕುಡಿಸಿ ನಮ್ಮ ಹಣ ಸಾರ್ಥಕತೆ ಪಡೆಯಬೇಕೆ? ದುಂದುವೆಚ್ಚ ಅಂದು ಮಾತ್ರವಲ್ಲ ಇಂದೂ ಇಲ್ಲವೇ ಇಲ್ಲ. ಆದರೆ ಇದು ಹಣ ಉಳಿಸುವ ಉದ್ದೇಶವಲ್ಲ.‌ ಡಿಜೆ […]

ಪಂಜುರ್ಲಿ- ವರಾಹ: ಇಸರ ದೇವರ ಕೃಷಿ ಕಾಯಕ

Author Venkatesh Karkera ಹಿಂದಿನಿಂದ ಕೇಳುತ್ತಾ ಬಂದಿದ್ದ ದೈವದ ಕಥೆಯೊಂದು ಬಹಳ ಸಮಯದಿಂದ ಬಹುವಾಗಿ ಕಾಡುತ್ತಿತ್ತು. ಎಲ್ಲಾ ಮತ- ಪಂಥಗಳಲ್ಲಿ ದೇವರು ಎಂದರೆ ಅತಿಮಾನುಷ ಶಕ್ತಿ, ಸರ್ವಸಮರ್ಥ, ಸರ್ವಜ್ಞ, ಸರ್ವವ್ಯಾಪಿ ಎಂಬೆಲ್ಲ ಕಲ್ಪನೆಗಳಿವೆ. ಆದರೆ ನಮ್ಮ ತುಳು ಜನಪದ ವಿದ್ವಾಂಸರು ಮಾತ್ರ ತುಳುವರ ಇಸರ ದೇವರನ್ನು ಬರೀ ಒಬ್ಬ ಕೃಷಿಕನ ಮಟ್ಟಕ್ಕೆ ಇಳಿಸಿಬಿಟ್ಟಿದ್ದರು. ನಮ್ಮ ಹಿರಿಯರು ತಾವೂ ಕೃಷಿಕರಾಗಿದ್ದ ಕಾರಣದಿಂದ ತಮ್ಮ ದೇವರನ್ನೂ ತಮ್ಮಂತೆಯೇ ಕೃಷಿಕನಾಗಿ ಕಂಡಿದ್ದಾರೆ ಯಾ ಬಿಂಬಿಸಿದ್ದಾರೆ ಎನ್ನುವ ಈ ವಿದ್ವಾಂಸರ ಮಾತು ಕೇಳಿದಾಗೆಲ್ಲಾ […]

ಸಂಸ್ಕೃತಿಯ ಆರಾಧಕ, ಹಿರಿಯ ಸಾಹಿತಿ ಬನ್ನಂಜೆ ಬಾಬು ಅಮೀನ್

ಸಂಸ್ಕೃತಿಯ ಆರಾಧಕ, ಹಿರಿಯ ಸಾಹಿತಿ ಬನ್ನಂಜೆ  ಬಾಬು ಅಮೀನ್ ಅವರಿಗೆ ಮೊನ್ನೆ ನಡೆದ ಅಭಿವಂದನಾ ಕಾರ್ಯಕ್ರಮ ಅವರ ಧೀರ್ಘ ಕಾಲದ ಸಾಧನೆಗೆ, ಪ್ರಾಮಾಣಿಕ ಶ್ರಮಕ್ಕೆ ತಕ್ಕುದಾದ ರೀತಿಯಲ್ಲಿ  ಘನತೆಯಿಂದ ಅರ್ಥಪೂರ್ಣವಾಗಿ ನಡೆಯಿತು.ನೂರಾರು ಮಂದಿಗೆ ಸತ್ಪ್ರೇರಣೆಯಾಯಿತು. ಮಣ್ಣಿನ ಮೂಲ ಸಂಸ್ಕೃತಿಯ ಬಗ್ಗೆ ನೈಜ ತುಡಿತವುಳ್ಳವರ  ಸಮ್ಮೇಳನದಂತಾಯಿತು.                ಹಾಗೆಯೇ ವ್ಯವಸ್ಥಿತ  ಅಧ್ಯಯನ ನಡೆಸಿದ ಶೈಕ್ಷಣಿಕ ಕ್ಷೇತ್ರದ  ವಿದ್ವಾಂಸರನ್ನು (Scholar) ಮತ್ತು  ನೆಲದ ಸಂಸ್ಕೃತಿಯ ಬಗೆಗಿನ ತುಡಿತದಿಂದ ಅಧ್ಯಯನ ನಡೆಸಿ ಅದನ್ನು […]

ಬೆಮ್ಮೆರ್‌ರ ಎಡ-ಬಲದ ಜನಿವಾರಗಳು

ಬೆಮ್ಮೆರ್‌ರ ಪಾಡ್ದನದಲ್ಲಿ ಅವರ ಸ್ವರೂಪದ ಕಲ್ಪನೆಯನ್ನು ಗಮನಿಸಿದವರಿಗೆ ಕೌತುಕದ ಸಂಗತಿಯೊಂದು ಪ್ರಶ್ನೆಯಾಗಿ ಕಾಡುತ್ತದೆ. ಬೆಮ್ಮೆರ್ ತನ್ನ ಬಲ ಹೆಗಲಲ್ಲಿ ಬಂಗಾರದ ಜನಿವಾರ ಮತ್ತು ಎಡ ಹೆಗಲಲ್ಲಿ ಬೆಳ್ಳಿಯ ಜನಿವಾರ ಧರಿಸಿಕೊಂಡು ಉದ್ಭವವಾದರು ಎನ್ನುತ್ತದೆ ಪಾಡ್ದನ. ಸಾಮಾಜಿಕ ಮತ್ತು ಧಾರ್ಮಿಕ ಈ ಎರಡೂ ಹಿನ್ನೆಲೆಯಲ್ಲಿ ನೋಡಿದರೂ ಈ ಮಾತಿನ ಅಂತರಾಳವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಜನಿವಾರವನ್ನು ಎಡಹೆಗಲಿಂದ ಸೊಂಟದ ಬಲಭಾಗದತ್ತ ಬರುವಂತೆ ಧರಿಸುವುದು ಸಾವಿರಾರು ವರ್ಷಗಳಿಂದ ನಡೆದುಬಂದ ಪದ್ದತಿ. ಅದು ಬಿಟ್ಟು ಎರಡು ಹೆಗಲಲ್ಲಿ ಎರಡು ಜನಿವಾರ ಧರಿಸುವ ಪದ್ದತಿ […]

ಪಟ್ಟಕ್ಕೆ ಪಟ್ಟದ ಹೆಸರೇ ಹೇಗೆ ಆಗಬೇಕೋ ಹಾಗೆಯೇ ಸಾಧನೆಗೆ ಸಾಧಕದ ಹೆಸರೇ ಆಗಬೇಕು ಇದೇ ಧಾರ್ಮಿಕ ನಡೆ…..

ಮಾತೆತ್ತಿದರೆ ಜೈ ಕೋಟಿ ಚೆನ್ನಯ ಅನ್ನುವ, ಕಂಡ ಕಂಡ ಬಸ್‌ಸ್ಟ್ಯಾಂಡ್- ಏರ್‌ಪೋರ್ಟ್ -ವೃತ್ತಗಳಿಗೆಲ್ಲ ಕೋಟಿಚೆನ್ನಯರ ಹೆಸರಿಡಬೇಕೆಂದು ಒತ್ತಾಯಿಸುವ ಕೋಟಿ ಚೆನ್ನಯರ ಅಭಿಮಾನಿಗಳಿಗೆ (ಭಕ್ತರಿಗಲ್ಲ), ಅವರ ಆದರ್ಶಪುರುಷರೇ ಸರಿಯಾದ ಉತ್ತರ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಸ್ವತಃ ಬ್ರಹ್ಮಬೈದರ್ಕಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಹುಶಃ ಕೆಲವರಿಗೆ ಇನ್ನೂ ವಿಷಯವೇನೆಂದು ಹೊಳೆದಿರಲಿಕ್ಕಿಲ್ಲ. ತಮಗೆಲ್ಲಾ ತಿಳಿದಿರುವಂತೆ ಎಣ್ಮೂರ ಬೈದೆರುಗಳು ಅಥವಾ ಬ್ರಹ್ಮಬೈದರ್ಕಳು  ಬ್ರಹ್ಮರ ಅಥವಾ ಬೆಮ್ಮೆರ್‌ರ ಜೊತೆಗೆ ಅವರಿಗೆ ಸಮಾನವಾದ […]

ಮಾನ್ಯ ಸಂಸದರು ಶಾಸಕರುಗಳಿಗೆ. ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು” ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ :

ಮಾನ್ಯ ಸಂಸದರು ಶಾಸಕರುಗಳಿಗೆ.! ಮಂಗಳೂರು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು” ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ. ✒️ ಪ್ರಶಾಂತ್ ಪೂಜಾರಿ ಮಸ್ಕತ್, ಪಜೀರ್ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಿವೇದಿಸಿಕೊಳ್ಳುವುದೇನೆಂದರೆ ಸುಮಾರು ಐದು ಶತಮಾನಗಳ ಹಿಂದೆ ತುಳುನಾಡ ಮಣ್ಣಲ್ಲಿ ಅವತಾರ ತಾಳಿ ತಮ್ಮ ಜೀವಿತಾವಧಿಯ ಕಾಲದಲ್ಲಿಯೇ 66 ಗರಡಿ ಮತ್ತು 33 ತಾವು ಗಳನ್ನು ನಿರ್ಮಿಸಿ ಸತ್ಯ, ಧರ್ಮಕ್ಕಾಗಿ ಹೋರಾಡಿ ಅಮರರಾದ ಕಾಯ ಬಿಟ್ಟು ಮಹಾ ಶಕ್ತಿಗಳಾಗಿ […]

ಈ 4 ಅಭ್ಯಾಸಗಳನ್ನು ತಪ್ಪಿಸಿ.. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದ ಅಪಾಯವನ್ನು ತಪ್ಪಿಸಿ

Heart Attack: ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಹೆಚ್ಚಿನ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ವಾರದಲ್ಲಿ 150 ನಿಮಿಷಗಳ ಕಾಲ ವೇಗವಾಗಿ ನಡೆಯಿರಿ. ಅಷ್ಟೇ ಅಲ್ಲ, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡರೆ, ಈ ಅಪಾಯಕಾರಿ ಕಾಯಿಲೆಯನ್ನು ದೂರ ಮಾಡಬಹುದು. ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬೇಕಾದರೆ.. ಸರಿಯಾದ ಜೀವನಶೈಲಿಯ ಜೊತೆಗೆ ಸಮತೋಲನ ಆಹಾರವನ್ನೂ ಹೊಂದಿರಬೇಕು. ಇತ್ತೀಚಿನ ವರ್ಷಗಳಲ್ಲಿ ವಯಸ್ಸನ್ನು ಲೆಕ್ಕಿಸದೆ ಹೃದಯಾಘಾತದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಭಾರತದಲ್ಲಿಯೂ ಹೃದ್ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಹೃದಯಾಘಾತದ ಅಪಾಯವು ವಯಸ್ಸಾದವರಲ್ಲಿ […]

ಮುಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ರವರಿಗೆ ಮುಲ್ಕಿ ಅರಮನೆಯ ಗೌರವ

ಮುಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ರವರಿಗೆ ಮುಲ್ಕಿ ಅರಮನೆಯ ಗೌರವ ಜನಪದ ವಿದ್ವಾಂಸ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ, ಇದರ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ರವರು ಮುಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಮುಲ್ಕಿ ಅರಮನೆಯ ಪರವಾಗಿ ಸಾಮಂತ ಅರಸರಾದ ಶ್ರೀ ಎಂ. ದುಗ್ಗಣ್ಣ ಸಾವಂತರು, ಡಾ. ಗಣೇಶ್ ಅಮೀನ್ ಸಂಕಮಾರ್ ರವರನ್ನು ಶಾಲು ಹೊದಿಸಿ, […]

ಮಂಗಳೂರು ಕಾಣಿಯೂರಿನ ಸೌಮ್ಯ ಪೂಜಾರಿ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು : ಪಂಜಾಬ್‌ನ ಲ್ಯಾಮಿನ್ ಟೆಕ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 70ನೇ ಸೀನಿಯರ್ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು ಕಾಣಿಯೂರು ಅಬೀರ ರಾಮಣ್ಣ ಪೂಜಾರಿ ಮತ್ತು ಲಲಿತಾ ದಂಪತಿಗಳ ಸುಪುತ್ರಿ ಹಾಗೂ ಪುತ್ತೂರಿನಲ್ಲಿ ಪೊಲೀಸ್‌ ಇಲಾಖೆಯ ಸಿಬ್ಬಂದಿಯಾಗಿರುವ ಸಂತೋಷ್ ಕುಮಾರ್ ರವರ ಸಹೋದರಿ. ಇವರು ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಗತಿ ಆಂಗ್ಲಮಾದ್ಯಮ ಶಾಲೆ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ. […]

ನೇಜಾರು ಹತ್ಯೆ ಪ್ರಕರಣದ ಆರೋಪಿಯ ಚಹರೆ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆಂತರಿಕ ಭದ್ರತೆ ಇಲಾಖೆಯ ಗೋಪಾಲಕೃಷ್ಣ ASI ರವರಿಗೆ ಬಹುಮಾನ ಹಾಗೂ ಪ್ರಶಂಸನ ಪತ್ರ

ಉಡುಪಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಉಡುಪಿಯ ನೇಜಾರಿನ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ 1.42 ಲಕ್ಷ ರೂಪಾಯಿ ನಗದು ಬಹುಮಾನವನ್ನು ಮಂಜೂರು ಮಾಡಲಾಗಿದೆ. ಪ್ರಕರಣದ ಆರೋಪಿ ಪ್ರವೀಣ್ ಚೌಗುಳೆಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಶ್ರಮಿಸಿದ ಉಡುಪಿ, ಮಂಗಳೂರು ಹಾಗೂ ಬೆಳಗಾವಿಯ ಒಟ್ಟು 41 ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ 1,42,500 ರೂಪಾಯಿಯನ್ನು ಬಹುಮಾನವಾಗಿ ಐಜಿಪಿ ಚಂದ್ರಗುಪ್ತ ಅವರ ಶಿಫಾರಸ್ಸಿನಂತೆ ಡಿಜಿಪಿ ಅಲೋಕ್ ಮೋಹನ್ ಅವರು ಮಂಜೂರು ಮಾಡಿದ್ದಾರೆ. ಆರೋಪಿಯ ಚಹರೆ […]