ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ.
ಮಂಗಳೂರು ಚಿತ್ರಾಪು ಮೂಲದವರಾದ ಲಕ್ಷ್ಮಣ್ ಸಿ. ಪೂಜಾರಿ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದು 1997ರ ಬಿಎಂಸಿ ಚುನಾವಣೆಯ ನಗರ ಸೇವಕ ಅಭ್ಯರ್ಥಿಯಾಗಿದ್ದರು. 1999ರ ಎನ್‌ಸಿಪಿ ಆರಂಭದಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ಶರದ್ ಪವಾರ್ ಅವರ ನಿಕಟವರ್ತಿ ಎಂದೇ ಗುರುತಿಸಿಕೊಂಡಿದ್ದಾರೆ. ಇವರು ಮಾಡಾ ಸದಸ್ಯರಾಗಿ, ಪಶ್ಚಿಮ ಪ್ರಾದೇಶಿಕ ರೈಲ್ವೇ ಮಂಡಳಿ ಸದಸ್ಯರಾಗಿ, ಚಿತ್ರಾಪು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ, ಮೂಲ್ಕಿ ಬಿಲ್ಲವ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.