TOP STORIES:

ಬೆಮ್ಮೆರ್ – ಬ್ರಹ್ಮ


Author Venkatesh Karkera

Team Prajnaanambrahmah

ತುಳುನಾಡ ದೈವಗಳಲ್ಲಿ ಅತಿಪ್ರಮುಖ ಶಕ್ತಿ ಎಂದರೆ ಬೆಮ್ಮೆರ್ ಯಾ ಬೆರ್ಮೆರ್. ಆಲಡೆಗಳಲ್ಲಿ, ನಾಗಮೂಲಸ್ಥಾನಗಳಲ್ಲಿ, ಗರಡಿಗಳಲ್ಲಿ, ದೈವಸ್ಥಾನಗಳಲ್ಲಿ ಹೀಗೆ ಹೆಚ್ಚುಕಡಿಮೆ ತುಳುನಾಡ ಉದ್ದಗಲಕ್ಕೂ ಬೇರೆ ಬೇರೆ ಹೆಸರಿನಿಂದ ಆರಾಧಿಸಲ್ಪಡುತ್ತಿದೆ. ಕೆಲವೆಡೆ ಬೆಮ್ಮೆರ್ ಕೋಲನೇಮ ಪಡೆದುಕೊಂಡು ದೈವಗಳಂತೆ ಆರಾಧನೆ ಪಡೆದರೆ ಇತರೆಡೆ ದೇವರಂತೆ ಪೂಜಿಸಲ್ಪಡುತ್ತಾರೆ.
ಕೆಲ‌ ಸ್ಥಳಗಳಲ್ಲಿ ಬೆಮ್ಮೆರ್ ಪುನರ್ನಾಮಕಗೊಂಡು ಬ್ರಹ್ಮಲಿಂಗೇಶ್ವರ / ಮಹಾಲಿಂಗೇಶ್ವರ/ ಖಡ್ಗೇಶ್ವರಿ ಹೀಗೆಲ್ಲಾ ಹೊಸ ಹೆಸರಿನೊಂದಿಗೆ ಪೂಜಿಸಲ್ಪಡುತ್ತಿದ್ದಾರೆ. ಈ ರೀತಿಯ ಪುನರ್ನಾಮಕರಣ ಸರಿಯೋ ತಪ್ಪೋ‌ ಎಂಬುದು ಖಂಡಿತವಾಗಿಯೂ ವಿಚಾರಾರ್ಹ. ಆದರೆ ಈಗೀಗ ಈ ವಿಚಾರ ಜಾತಿಯ‌ ಬಣ್ಣ ಪಡೆದುಕೊಳ್ಳುತ್ತಿರುವುದು ವಿಷಾದನೀಯ. ಈ ರೀತಿಯ ನಾಮಾಂತರಕ್ಕೆಲ್ಲಾ ವೈದಿಕರೇ ಕಾರಣ, ನಮ್ಮ ದೈವಗಳ ವೈದಿಕೀಕರಣ ಎಂದೆಲ್ಲ ವೈದಿಕ ಸಮುದಾಯವನ್ನು ದೂರುವುದು ಅಲ್ಲಲ್ಲಿ ಕಂಡುಬರುತ್ತಿದೆ. © https://prajnaanambrahmah.wordpress.com

‘ಬೆಮ್ಮೆರ್’ ಎಂಬ ಶಬ್ದ ‘ಪೆರಿಯಮ್ಮೆರ್’ ಎಂಬ ಪದದಿಂದ ಹುಟ್ಟಿದೆಯೇ ಹೊರತು ‘ಬ್ರಹ್ಮ’ ಎಂಬ ಪದದಿಂದ ಅಲ್ಲ, ಈ ‘ಬೆಮ್ಮೆರ್’ ಎಂಬಾತ ತುಳುನಾಡಿನ ಮೂಲನಿವಾಸಿಗಳ ಹಿರಿಯನೋ ಅಥವಾ ರಾಜನೋ ಆಗಿರಬೇಕು ಎಂಬುದು ವೈದಿಕೀಕರಣ ವಿರೋಧಿಗಳ ಅಭಿಪ್ರಾಯ. ಅಂತೂ ಇಂತೂ ಬೆಮ್ಮೆರ್ ಬ್ರಹ್ಮನಲ್ಲ ಎಂಬುದು ಅವರ ವಾದ. ಬೆಮ್ಮೆರ್ ಬ್ರಹ್ಮನೋ ಅಲ್ಲವೋ ಹೇಳುವುದು ಕಷ್ಟಸಾಧ್ಯ. ಆದರೆ ‘ಬ್ರಹ್ಮ’ ಅಂದ ಕೂಡಲೆ ತಥಾಕಥಿತ ‘ವೈದಿಕರ ಚತುರ್ಮುಖ ಬ್ರಹ್ಮ’ ಎಂದು ಅರ್ಥೈಸಿಕೊಳ್ಳುವುದು ತಥಾಕಥಿತ ಬುದ್ದಿಜೀವಿಗಳ ಮೊದಲ ಲಕ್ಷಣ. ನಮಗೆ ಅದು ಏನು ಎಂಬುದನ್ನು ಸಾಧಿಸುವುದಕ್ಕಿಂತ ಅದು ಏನು ಅಲ್ಲ ಎಂಬುದನ್ನು ಸಾಧಿಸುವುದೇ ಮುಖ್ಯವಾದಾಗ ಆಗುವ ಗೊಂದಲವಿದು. ಕತ್ತಲೆ ಕೋಣೆಯಲ್ಲಿ ನಡೆಯುವಾಗ ಕಣ್ಣನ್ನು ಸಾಧ್ಯವಿದ್ದಷ್ಟು ತೆರೆದಿಟ್ಟುಕೊಳ್ಳುವುದು ಜಾಣತನ. ಅದರ ಬದಲಿಗೆ ಮೊದಲೇ ಒಂದು ಕಣ್ಣುಪಟ್ಟಿ ಕಟ್ಟಿಕೊಂಡು ನಡೆವವರನ್ನು ಹಿಡಿಯಲು ಪ್ರಯತ್ನಿಸುವುದು ವ್ಯರ್ಥ.
ವೈದಿಕ ಸಾಹಿತ್ಯದಲ್ಲಿ ಬ್ರಹ್ಮ ಅಂದರೆ ಚತುರ್ಮುಖ ಬ್ರಹ್ಮ ಒಬ್ಬನೇ ಅಲ್ಲ. ಚತುರ್ಮುಖ ಬ್ರಹ್ಮನ ಸ್ಥಾನದಲ್ಲಿ ಈಗಾಗಲೆ ಹಲವಾರು ಬ್ರಹ್ಮರು ಆಗಿಹೋಗಿದ್ದಾರೆ. ಮುಂದೆಯೂ ಹಲವಾರು ಬ್ರಹ್ಮರು ಬರಲಿದ್ದಾರೆ. ತ್ರಿಮೂರ್ತಿಗಳು ಮತ್ತು ಇತರೆಲ್ಲಾ ದೇವತೆಗಳಿಗೂ ಸೃಷ್ಟಿಕರ್ತನಾದ ವಿಶ್ವನಿಯಾಮಕ ಶಕ್ತಿಯನ್ನು ವೇದಾಂತದಲ್ಲಿ ‘ಬ್ರಹ್ಮನ್’, ‘ಪರಬ್ರಹ್ಮ’, ‘ಆತ್ಮ’, ‘ಪರಮಾತ್ಮ’ ಇತ್ಯಾದಿಯಾಗಿ ಕರೆಯಲಾಗುತ್ತದೆ. ವೈಷ್ಣವರು ಅದನ್ನೇ ‘ಮಹಾವಿಷ್ಣು’ ಎಂದು, ಶೈವರು ‘ಪರಶಿವ’ ಎಂದು, ಶಾಕ್ತೇಯರು ‘ಆದಿಶಕ್ತಿ/ ಪರಾಶಕ್ತಿ’ ಎಂದು, ಗಾಣಪತ್ಯರು ‘ಮಹಾಗಣಪತಿ’ ಎನ್ನುವುದು. ನಮ್ಮಲ್ಲಿ ಕಂಡುಬರುವ ಪ್ರಾಚೀನ ದೇವಾಲಯಗಳಲ್ಲೆಲ್ಲಾ ‘ಮಹಾಗಣಪತಿ/ ಮಹಾಲಿಂಗೇಶ್ವರ/ ಮಹತೋಬಾರ ಎಂದೆಲ್ಲಾ ಈ ಮಹತ್ ತತ್ವಕ್ಕೇ ಮಣೆ ಹಾಕಿದ್ದನ್ನು ಗಮನಿಸಿ. ಹಾಗಾಗಿ ಬೆಮ್ಮೆರ್ ಚತುರ್ಮುಖ ಬ್ರಹ್ಮನೇ ಆಗಬೇಕಿಲ್ಲ, ಪರಬ್ರಹ್ಮನೂ ಆಗಬಹುದು, ಯಾಕೆ ಆಗಿರಬಾರದು?
ಬ್ರಹ್ಮ ಎಂಬುದಕ್ಕೆ ಬೃಹತ್ ಮಾತ್ರವಲ್ಲದೆ ಹಿರಿಯ ಎಂಬ ಅರ್ಥವೂ ಸಂಸ್ಕೃತದಲ್ಲಿ ಇದೆ. ಈ ಹಿರಿಯ ಮತ್ತು ಪೆರಿಯಮ್ಮೆರ್ ಎಂಬ ತುಳು ಮೂಲಗಳನ್ನು ಹೋಲಿಸಿ‌‌ ನೋಡಿ. ಬೆಮ್ಮೆರ್ ಮತ್ತು‌ ಬ್ರಹ್ಮ ಶಬ್ದಗಳಲ್ಲಿ ಅರ್ಥವ್ಯತ್ಯಾಸ ಏನಾದರೂ ಇದೆಯೆ?
ಬೆಮ್ಮೆರ್ ಬಗ್ಗೆ ಹೇಳುವುದು ಮುಂದಕ್ಕೂ ಇದ್ದೇ ಇದೆ. ಅಲ್ಲಿಯವರೆಗೆ ನಿಮ್ಮ ಅಂತರಂಗದಲ್ಲಿ ಬೆಮ್ಮೆರ್‌ರ ಬಗ್ಗೆ ಚಿಂತನೆ ನಡೆಸಲು ಹೇಳುತ್ತಾ ಇಂದಿನ ಬರವಣಿಗೆಗೆ ವಿಶ್ರಾಂತಿ‌ ನೀಡುತ್ತೇನೆ.


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »