ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ ಬಂತು.
ನಾನು ಕಳೆದ ವಾರ ಸ್ನೇಹಿತರೊಂದಿಗೆ ದುಬೈಗೆ ತೆರಳಿದ್ದು ಈ ವಿಚಾರವನ್ನು ನನ್ನ ಸ್ನೇಹಿತರೊಬ್ಬರಲ್ಲಿ (ಮಂಗಳೂರಿನ)ಹಂಚಿಕೊಂಡಿದ್ದೆ ಬಹುಷಃ ಅವರಿಂದಾಗಿ ನನಗೆ ಬಿಲ್ಲವಾಸ್ ಫ್ಯಾಮಿಲಿ ಯ ಸಂಪರ್ಕ ಸಾಧ್ಯವಾಯಿತು.
ದುಬೈಗೆ ಆಗಮಿಸಿದ ವಿಷಯ ತಿಳಿದ ಬಿಲ್ಲವಾಸ್ ಫ್ಯಾಮಿಲಿ ಯವರು ನನ್ನನ್ನು ಸಂಪರ್ಕಿಸಿ ಭಾನುವಾರದ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಹ್ವಾನಿಸಿದರು.ಈ ಸಂಘಟನೆಯ ಒಂದಿಬ್ಬರ ಪರಿಚಯ ಬಿಟ್ಟರೆ ಉಳಿದವರಿಗೆ ನಾನು ಅಪರಿಚಿತ ಆದರೆ ನಾನು ಕಾರ್ಯಕ್ರಮ ಕ್ಕೆ ಆಗಮಿಸಿದ ಸಂದರ್ಭದಲ್ಲಿ ನನಗೆ ನೀಡಿದ ಸ್ವಾಗತ, ಗೌರವ, ಪ್ರೀತಿಯ ಆತಿಥ್ಯ ಮುಕ್ತ ಮಾತುಕತೆ ಇವೆಲ್ಲವೂ ನನ್ನನ್ನು ಭಾವಪರವಶನನ್ನಾಗಿಸಿತು.
ಕಾರ್ಯಕ್ರಮದ ಬಳಿಕ ಸಮಾಜದ ಅಭಿವೃದ್ಧಿ ಯ ಬಗ್ಗೆ ಒಂದಿಷ್ಟು ವಿಚಾರ ವಿನಿಮಯ ನಡೆಯಿತು. ಜೀವನ ನಿರ್ವಹಣೆ ಗಾಗಿ ಜನ್ಮಭೂಮಿಯಿಂದ( ಭಾರತ) ಕರ್ಮಭೂಮಿಗೆ ( ದುಬೈ )ಆಗಮಿಸಿ ಇಲ್ಲಿ ಬಿಡುವಿಲ್ಲದ ಕರ್ತವ್ಯ ದ ಒತ್ತಡ ದ ನಡುವೆಯೂ ಸಮುದಾಯದ ವರನ್ನು ಒಗ್ಗೂಡಿಸಿ ಅಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಬಿಲ್ಲವಾಸ್ ಫ್ಯಾಮಿಲಿ ಬಗ್ಗೆ ಬಹಳ ಹೆಮ್ಮೆ ಎನಿಸುತ್ತಿದೆ.
ಕೆಲವೇ ಸಮಯ ಜತೆಗೆ ಕಳೆದರೂ ನಾನೂ ಈ ಕುಟುಂಬ ದ ಸದಸ್ಯರಲ್ಲಿ ಓರ್ವ ಎಂಬಂತೆ ಭಾಸವಾಯಿತು. ಮುಜುಗರ ದಿಂದ ಕಾರ್ಯಕ್ರಮ ಕ್ಕೆ ಹೋದ ನಾನು ನನ್ನ ಕುಟುಂಬವನ್ನೇ ಬಿಟ್ಟು ಬರುತ್ತಿರುವೇನೋ ಅನ್ನಿಸುವಷ್ಟು ಭಾರವಾದ ಹೃದಯದೊಂದಿಗೆ ವಿದಾಯ ಹೇಳಬೇಕಾಯಿತು.
ನೀವುಗಳು ನೀಡಿದ ಪ್ರೀತಿ ಗೌರವಾತಿಥ್ಯಕ್ಕೆ ಸದಾ ಚಿರಋಣಿ. ಈ ಪ್ರೀತಿ ವಿಶ್ವಾಸ ಸದಾ ಹೀಗೇ ಇರಲಿ.