TOP STORIES:

FOLLOW US

ಎಪ್ರಿಲ್ ತಿಂಗಳ ಅಕ್ಷಯ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ : ರೈಲು


ರೈಲು

ಎಲ್ಲರಂತಲ್ಲ ನಾನು…

ಬಯಲ ಬೆಳಕಿನಲ್ಲಿ ಕತ್ತಲು ಕೊರೆಯುವಲ್ಲಿ

ಓಡಬೇಕು; ಓಡುತ್ತಲೇ ಇರಬೇಕು

ಅಬ್ಬರದಿ ಬಂದೆರಗುವ ಜನಸಾಗರಕೆ ತೀರವಾಗಬೇಕು

  ಶಾಂತವಾಗಿ ನಿರ್ವಾಹವಾಗಿ ಜೀವಜೀವಗಳ  ನಿಜಬಂಧುವಾಗಿ

ತುಂಬಿಕೊಂಡಂತೆ ಖಾಲಿಯಾಗುತ್ತಲೇ ಇರಬೇಕು

ಜೀವನದ ಇತಿಮಿತಿಯಲಿ ಗತಿ ತಿರುಗಿದಂತೆ

ಹಳಿಗಳೂ ಬದಲಾಗುತ್ತವೆ, ಎಲ್ಲೋ ಕವಲೊಡೆದು ಇನ್ನೆಲ್ಲೋ ಕೂಡುತ್ತವೆ

ಉದ್ವೇಗ ಉನ್ಮಾದಗಳ ಬದಿಗೊತ್ತಿ ನಯನಾಜೂಕಿನಲಿ ನಡೆಯಬೇಕು

ಕೆಂಪು ನಿಶಾನೆಯೆದುರು ಸಮಾಧಾನಿಯಾಗಿರಬೇಕು

ಎಲ್ಲರಂತಲ್ಲ ನಾನು

ಕನಸಿಗೆ ಕಚಗುಳಿಯಿಟ್ಟು ನೂಕುವ ರಾಯಭಾರಿಯಾಗಬೇಕು

ಚಿಣ್ಣರ ಕೇಕೆ, ಹರೆಯದ ಬಯಕೆ, ಇಳಿವಯಸ್ಸಿನ ಬೇಗೆಗೆ

ನಿತ್ಯವೂ ಹೊಸ ಆಹ್ಲಾದವನೀಯುತ ಭರವಸೆಯ ಬೆಳಕಾಗಬೇಕು

ಮುಗ್ಗರಿಸಿದವರ ನೋವಿಗೆ  ಸಾಂತ್ವನವಾಗಬೇಕು

ಅರಿವಿನ ಅರವಟಿಗೆಯಲಿ ಒಡಲು ಗಟ್ಟಿಯಾಗುತಿರಬೇಕು

ನವರಸ ಭಾವ ವಿಭಾವಗಳ ತಾಳಮೇಳದೊಳಗೆ

ಕೋಟಿ ಮನಸ್ಸುಗಳು ಹರಿಯುವುದು ನನ್ನೊಳಗೆ

ಸ್ವರ ವ್ಯಂಜನದೊಳು ಮೂಡಿದ ಬಿರುಕಿಗೆ ತೇಪೆ ಹಾಕಿ

ಸಮರಸ ಸಂಧಾನದ ಉಸಿರು ಚೆಲ್ಲಿ ಮುಂದಡಿಯಿಡಬೇಕು

ನನ್ನಾಂತರ್ಯದೊಳಿರುವ ಪ್ರೇಮ, ವಿರಹ ಗೀತೆಗಳೆಷ್ಟೋ…!

ಕಣ್ಣಂಜಿಕೆಗೆ ಮುಖ ಮರೆಸಿ ಕೂತ ಗುಟ್ಟುಗಳೆಷ್ಟೋ…!

ಯುಗಯುಗಾಂತರದಲಿ ಘಟಿಸಿ ಹೋದ ಕತೆಗಳಲೂ

ಮುಖ್ಯ ಪಾತ್ರಧಾರಿ, ಪರಮ ಸೂತ್ರಧಾರಿಯೂ ನಾನೇ

ಎಲ್ಲರಂತಲ್ಲ ನಾನು

ಸಾಗುತ್ತಲೇ ಇರಬೇಕು

ನಿಂತರೆ ಸ್ತಬ್ದವಾಗಬಹುದಲ್ಲವೇ ಯಾನ…!

ನಗರದ ನರನಾಡಿಗಳಲಿ ಪವಹಿಸಿ ಪಥಿಕರ ಗಮ್ಯವಾಗಬೇಕು

ನಿತ್ಯ ಪಥದ ಧ್ಯಾನಿಯಾಗಬೇಕು.

✍🏻 ಅನಿತಾ ಪಿ. ತಾಕೊಡೆ


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »