TOP STORIES:

ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ


ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ

ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ

ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು ರಚಿಸಲು ಡಾ ಜಿ ಎನ್. ಉಪಾಧ್ಯ ಅವರು ಹೇಳುವವರೆಗೆ ಸುವರ್ಣರನ್ನು ತಿಳಿಯುವ ಪ್ರಯತ್ನವನ್ನು ನಾನೆಂದೂ ಮಾಡಿರಲಿಲ್ಲ. ನನ್ನದು ಸಾಹಿತ್ಯ ಪ್ರಪಂಚ. ಅಪರೂಪಕ್ಕೆ ಸಾಹಿತ್ಯ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ  ಮಾತ್ರ ಬಿಲ್ಲವ ಭವನಕ್ಕೆ ಭೇಟಿ ನೀಡುತ್ತಿದ್ದೆ. ಭವನದಲ್ಲಿ ಯಾವುದೇ ಕಾರ್ಯಕ್ರಮವಿರಲಿ ಜಯ ಸುವರ್ಣರ ಉಪಸ್ಥಿತಿಯಿರುತ್ತಿತ್ತು. ಪ್ರತಿಯೊಬ್ಬರೂ ಅವರಿಗೆ ತೋರುವ ಪ್ರೀತಿ ಗೌರವಗಳು ಮತ್ತು ಮಾಡುವ ಸನ್ಮಾನಗಳನ್ನು ದೂರದಿಂದಲೇ ಕುತೂಹಲದಿಂದ ನೋಡುತ್ತಿದ್ದೆ. ಎಲ್ಲ ಸಮಾಜ ಬಾಂಧವರೊಂದಿಗೆ ಅವರಿಗಿರುವ ಆಪ್ತತೆ ನನ್ನಲ್ಲಿ ಬೆರಗು ಮೂಡಿಸುತ್ತಿತ್ತು.

2013ರಲ್ಲಿ  ಬಿಲ್ಲವ ಭವನದಲ್ಲಿ ಆಟಿಡೊಂಜಿ ಕೂಟ  ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ  ಅಹ್ವಾನಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಸುವರ್ಣರು ವಹಿಸಿಕೊಂಡಿದ್ದರು. ಅಂದು 4:30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುವರ್ಣರ ಅನುಪಸ್ಥಿತಿಯಿಂದ ವಿಳಂಭವಾಗಿತ್ತು. ಜಯ ಸುವರ್ಣರು ಬಂದಾಗ ಅಲ್ಲಿ ನೆರೆದವರೆಲ್ಲ  ಕಿಂಚಿತ್ತೂ ಬೇಸರಿಸದೆ ಖುಷಿಯಿಂದ ಬರಮಾಡಿಕೊಂಡ ರೀತಿ … ಎಲ್ಲವನ್ನೂ ಎಲ್ಲರನ್ನೂ  ಕುತೂಹಲದಿಂದ ಗಮನಿಸುತ್ತಿದ್ದೆ. ಜನ ಸಾಮಾನ್ಯರೆಲ್ಲರಿಗೂ ಇವರ ಮೇಲೆ ಯಾಕಿಷ್ಟು ಅಪಾರ ಪ್ರೀತಿ ಭಕ್ತಿ…ಇವೆಲ್ಲವೂ ಕಾಣುತ್ತಿದ್ದ ನನಗೆ ಸೋಜಿಗವೆನಿಸುತ್ತಿತ್ತು.

ಜಯ ಸುವರ್ಣರ ಕುರಿತು ನನ್ನ ಮನಸಲ್ಲಿ  ಸುಪ್ತ ವಾಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಅವರ  ಕುರಿತು ಆಳವಾದ ಅಧ್ಯಯನವನ್ನು ಕೈಗೊಂಡ ಮೇಲೆಯೇ. ಬಿಲ್ಲವ ಸಮಾಜಕ್ಕೆ ಆಧಾರ ಸ್ತಂಭವಾಗಿ ನಿಂತು, ಹಿರಿಯರು ಕಂಡ ಕನಸಿನ ಗಂಟನ್ನು ಹೆಗಲಲ್ಲಿ ಹೊತ್ತು,  ಸರ್ವ ಸಮಾಜದ ಬಾಂಧವರೊಡನೆ ಸಮಾನವಾಗಿ ಬೆರೆತು, ಸಮಾಜದ ಏಳಿಗೆಗೆ ಅನವರತ ದುಡಿದು  ಸಮಾಜವನ್ನು ಮೇರೆತ್ತರಕ್ಕೆ ಕೊಂಡೊಯ್ದ ಮಹಾನ್ ಚೇತನ ಜಯ ಸುವರ್ಣರು. ಇವರ ಜೀವನ ಸಾಧನೆಯ ಕುರಿತು ದಾಖಲಿಸುವ ಅವಕಾಶ ದೊರಕಿದ್ದು ನನ್ನ ಭಾಗ್ಯ. ಸುವರ್ಣರ ಜೀವಿತಾವಧಿಯವರೆಗೆ ಅವರ  ಜೊತೆಗೆ ಒಡನಾಟದ ಸೌಭಾಗ್ಯವನ್ನು ಪಡೆದ ನೂರಾರು  ಪುಣ್ಯವಂತರನ್ನು ಭೇಟಿ ಮಾಡಿ ಜಯ ಸುವರ್ಣರನ್ನು ಅವರು ಬದುಕಿದ ರೀತಿಯನ್ನು ಅರಿತು ಅರಗಿಸಿಕೊಂಡವಳು ನಾನು.

ಸುವರ್ಣರ ಕುರಿತು ಬರೆಯುವಾಗ ಅವರ ಮಹಾನ್ ವ್ಯಕ್ತಿತ್ವದ ಕತೆಯನ್ನು ಪ್ರತಿದಿನ ನನ್ನ ಮಗಳಿಗೆ ಹೇಳುತ್ತಿದ್ದೆ. ಎಲ್ಲವನ್ನೂ ಹೇಳಿ ಮುಗಿಸಿದ ಮೇಲೆ, ಅವಳು, “ಅಮ್ಮ ಅವರಿರುವಾಗಲೇ ನೀನು ಈ ಕೃತಿಯನ್ನು ಬರೆದಿದ್ದರೆ ಅವರ ತ್ಯಾಗಮಯ ಜೀವನಕ್ಕೆ ಎಷ್ಟು ಧನ್ಯತಾಭಾವ ಸಿಗುತ್ತಿತ್ತು. ಅವರಿಗೆ ಎಷ್ಟೊಂದು ಖುಷಿಯಾಗುತ್ತಿತ್ತು ಅಲ್ಲವೇ” ಎಂದು ಹೇಳಿದಾಗ ನಾನಂದು ಉತ್ತರಿಸಲಾಗದೆ ಭಾವುಕಳಾಗಿದ್ದೆ.

ನಿಜ ಅವರ ತ್ಯಾಗಮಯ ಜೀವನವನ್ನು ನಾವೆಷ್ಟು ಅರ್ಥಮಾಡಿಕೊಂಡಿದ್ದೇವೆ? ಅವರ ಆದರ್ಶಗಳನ್ನು ನಾವೆಷ್ಟು ಪಾಲಿಸುತ್ತಿದ್ದೇವೆ ಅನ್ನುವ ಪ್ರಶ್ನೆಗಳು ನನ್ನನ್ನು ಆಗಾಗ ಕಾಡುತ್ತಿರುತ್ತವೆ.

ಒಬ್ಬ ವ್ಯಕ್ತಿಗೆ ನಾವು ನಿಷ್ಠರಾಗಿದ್ದರೆ ಆ ವ್ಯಕ್ತಿ ಬದುಕಿದ್ದಾಗ ಮಾತ್ರವಲ್ಲ ಅವರು ಗತಿಸಿದ ಮೇಲೂ ಅವರನ್ನು ಗೌರವಿಸಬೇಕು ಅವರ ಸೇವೆಯನ್ನು ನೆನಪಿಟ್ಟುಕೊಂಡು ಮುನ್ನಡೆಯಬೇಕು. ಆಗ ಮಾತ್ರ ಮನುಷ್ಯತ್ವ ಎಂಬ ಪದಕ್ಕೆ ನಿಜವಾದ ಅರ್ಥ ಸಿಗಬಲ್ಲದು.

ಜಯ ಸುವರ್ಣರ ಕುರಿತು ಬರೆದ ಸುವರ್ಣಯುಗ ಕೃತಿಯನ್ನು ಈಗಾಗಲೇ ನೂರಾರು ಮಂದಿ ಹಿರಿಯ ಸಾಹಿತಿಗಳು ವಿಮರ್ಶಕರು ಸಹೃದಯ ಓದುಗರು ಓದಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಗ್ರಂಥವನ್ನು ಇಂಗ್ಲಿಷ್ ಗೆ ಭಾಷಾಂತರಿಸುತ್ತಿರುವ ಅನುವಾದಕರು, *ಈ ಕೃತಿಯನ್ನು ಪರ್ಸನಾಲಿಟಿ ಡೆವಲಪ್ಮೆಂಟ್ ಟ್ರೈನಿಂಗ್ ಗೆ ಟೆಕ್ಸ್ಟ್ ಮಾಡಬಹುದು. ತುಂಬ  ಉನ್ನತ ಮಟ್ಟದ ಸಾಧನೆ ಅವರದ್ದು. ಅವರ ಸಾಧನೆಗಳು ಈ ಕೃತಿಯಲ್ಲಿ ಎಳೆಎಳೆಯಾಗಿ ಅನಾವರಣಗೊಂಡಿವೆ.  ಇದೊಂದು ಸೃಜನಶೀಲ ಬರವಣಿಗೆ. ಈ ರೀತಿ ಬರೆಯುವುದು ಸುಲಭವಿಲ್ಲವೆಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಜಯ ಸುವರ್ಣರ ಮಹಾನ್ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಬೇಕೆನ್ನುವ ನನ್ನ ಪ್ರಯತ್ನ  ಸುವರ್ಣಯುಗ ಕೃತಿಯ ಮೂಲಕ ಫಲನೀಡಿತೆಂಬ ಧನ್ಯತಾಭಾವ ನನಗಿದೆ. ಇಂದು ಅವರ 78ನೆಯ ಜನ್ಮದಿನ. ಮರುಜನ್ಮವೊಂದಿದ್ದರೆ ಅವರು ನಮ್ಮ ಸಮಾಜದಲ್ಲಿಯೇ ಹುಟ್ಟಿ ಬರಲಿ. ಅವರಂಥ ನಾಯಕತ್ವವಿದ್ದರೆ ಖಂಡಿತವಾಗಿಯೂ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ.

ಅನಿತಾ ಪೂಜಾರಿ ತಾಕೊಡೆ


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »