ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಮುಂಬೈಯ ಪ್ರತಿಷ್ಠಿತ *ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರ ದಕ್ಷ *ಬೆಸ್ಟ್ ಚೇರ್ಮನ್* ಪ್ರಶಸ್ತಿಯನ್ನು *ಭಾರತ ಸರಕಾರದ ಜನರಲ್ ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ಸ್ ನ ನಿರ್ದೇಶಕ ಶ್ರೀ ಸುಮ್ನೆಶ್ ಜೋಶಿರವರು* ಇಂದು ಮುಂಬಯಿ ನ ಲಲಿತ್ ಗ್ರಾಂಡ್ ಹೋಟೆಲ್ ನ ಸಭಾಗೃಹದಲ್ಲಿ ನಡೆದ ಕೋ ಆಪರೇಟಿವ್ ಬ್ಯಾಂಕ್ ನ ಸಭೆಯಲ್ಲಿ ಹಸ್ತಾಂತರಿಸಿದರು. ಸೂರ್ಯಕಾಂತ್ ಬ್ಯಾಂಕಿನ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಿದ ಫಲವಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಏಳು ತಿಂಗಳಲ್ಲಿಯೇ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ಜತೆ *ಆಡಳಿತ ನಿರ್ದೇಶಕ ದಿನೇಶ್ ಬಿ ಸಾಲ್ಯಾನ್, ಭಾಸ್ಕರ್ ರಾವ್(ಸಿಐಎಸ್ಒ), ಬ್ಯಾಂಕ್ ನ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ರೋಹಿತ್ ಉದ್ಯಾವರ್* ಉಪಸ್ಥಿತರಿದ್ದರು. ಭಾರತ್ ಬ್ಯಾಂಕ್ ನಿರಂತರವಾಗಿ ಪ್ರಶಸ್ತಿಗಳನ್ನು ಪಡೆಯಲು, *ಆಡಳಿತವರ್ಗ, ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿವರ್ಗದವರ* ಅನವರತ ಪರಿಶ್ರಮದಿಂದ ಸಾಧ್ಯವಾಗಿದೆ. ಎಲ್ಲರಿಗೂ ಅಭಿನಂದನೆಗಳು.