TOP STORIES:

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ ಮತ್ತು ನೃತ್ಯಾವಳಿಗಳಿಂದ ಕೂಡಿದ್ದ ಈ ರಸ ಸಂಜೆ, ಶೋತೃ ಗಡಣವನ್ನು ಹುಚ್ಚೆದ್ದು ಕುಣಿಯುವಂತೆ  ಮಾಡಿ, ಎಲ್ಲರ ಮನ ಸೂರೆಗೊಂಡಿತು.

ವಿಶೇಷ ಆಕರ್ಷಣೆಯಾಗಿ ಕರ್ನಾಟಕದ  ಸುಪ್ರಸಿದ್ದ ಗಾಯಕರಾದ ದಿವ್ಯಾ ರಾಮಚಂದ್ರ,  ಅಂಕಿತ ಕುಂಡು, ಅನಿರುದ್ಧ ಶಾಸ್ತ್ರೀ ಮತ್ತು ಸುಪ್ರೀತ್ ಸಪಳಿಗ ತಮ್ಮ ಕಂಚಿನ ಕಂಠದಿಂದ ನೆರೆದ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿದರು.  ಅದ್ಭುತ ಪ್ರತಿಭೆ ಅಮೋಘವರ್ಷ ಮತ್ತು ತಂಡದವರಿಂದ ಸಂಗೀತ ವಾದ್ಯ ಪ್ರದರ್ಶನ  ನಡೆಯಿತು.  ಜನಪ್ರಿಯ ನಿರೂಪಕ ನಿರಂಜನ್ ದೇಶ್ ಪಾಂಡೆ ತಮ್ಮ ರಂಜನೆಯ ವಾಕ್ ಲಹರಿಯಿಂದ ಪ್ರೇಕ್ಷಕರನ್ನು ಸ್ಪಂದಿಸಿ ಎಲ್ಲರ ಜನಾನುರಾಗಿಗಳಾದರು.

ಬಿಲ್ಲವಾಸ್ ಕತಾರ್ ನ ಸಾಂಸ್ಕತಿಕ ಕಾರ್ಯದರ್ಶಿ ಶ್ರೀಮತಿ ಪೂಜಾ ಜಿತಿನ್  ಅವರು ಪ್ರಾಸಂಗಿಕ ಭಾಷಣದ ಮೂಲಕ ಸ್ವರ ಲಹರಿಗೆ ಶುಭಾರಂಭಗೈದರು. ನೆರೆದ ವಿಶೇಷ ಗಣ್ಯರು, ಸಲಹಾಸಮಿತಿ, ಪ್ರಾಯೋಜಕರು ,ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ದೀಪ ಬೆಳಗಿಸಿ ಸ್ವರ ಲಹರಿಯ ಉದ್ಘಾಟನೆ ಮಾಡಲಾಯಿತು .   ಆಮಂತ್ರಿತ ಗಣ್ಯರಿಗೆಲ್ಲಾ ಪುಷ್ಪಗುಚ್ಛ ವನ್ನು ಕೊಟ್ಟು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು.

ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಬಿಲ್ಲವಾಸ್ ಕತಾರ್ ನ ಧ್ಯೇಯೋದ್ದೇಶಗಳ ಬಗ್ಗೆ ಬೆಳಕು ಚೆಲ್ಲುತ್ತಾ  ಎಲ್ಲರನ್ನೂ ಆತ್ಮೀಯವಾಗಿ  ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಡಾ. ವೈಭವ್ . ಎ. ಟಿ.  ಕೌನ್ಸಿಲರ್ (ಚಾನ್ಸೆಲರಿ ಮತ್ತು ಕೌನ್ಸಿಲರ್ ಮುಖ್ಯಸ್ಥರು), ಭಾರತೀಯ ರಾಯಭಾರಿ ಕಚೇರಿ, ಅವರು ಬಿಲ್ಲವಾಸ್ ಕತಾರ್ ನ  ಸಾಧನೆಯನ್ನು ಕೊಂಡಾಡಿ, ಭವಿಷ್ಯದಲ್ಲಿ  ಇನ್ನಷ್ಟು ವಿಶೇಷ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ವಿಜೃಂಭಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗಣ್ಯರಾದ *ಶ್ರೀ ಮಣಿಕಂಠನ್ ಎ. ಪಿ. (ಅಧ್ಯಕ್ಷರು, ಐ.ಸಿ.ಸಿ, ಕತಾರ್ ),

ಶ್ರೀ ದಿವಾಕರ ಪೂಜಾರಿ ( ಸ್ಥಾಪಕಾಧ್ಯಕ್ಷರು, ಬಿಲ್ಲವಾಸ್ ಕತಾರ್ ) ಮತ್ತು ಶ್ರೀ ಚಿದಾನಂದ ನಾಯ್ಕ್  (ಪ್ರಧಾನ ವ್ಯವಸ್ಥಾಪಕ, ಎಂ. ಪಲ್ಲೋಂಜಿ ಡಬ್ಲ್ಯು.ಎಲ್‌.ಎಲ್. ಮತ್ತು ಪ್ರಮುಖ ಪ್ರಾಯೋಜಕರು )ಅವರುಗಳನ್ನು ಆದರದಿಂದ ಸಂಮಾನಿಸಿ ಸ್ಮರಣಿಕೆ ನೀಡಲಾಯಿತು .   ಎಲ್ಲಾ ಮಹನೀಯರು ಬಿಲ್ಲವಾಸ್ ಕತಾರ್ ನ ಪ್ರಶಂಸೆಗೈದರು.

ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು, ಶಿಖರ (ಎಪೆಕ್ಸ್ )ಸಂಸ್ಥೆಗಳ ಪ್ರತಿನಿಧಿಗಳು ಮತ್ತು  ಕರ್ನಾಟಕದ ವಿವಿಧ ಸಂಘಟನೆಗಳ ನಾಯಕರು ಮತ್ತು  ಪ್ರತಿನಿಧಿಗಳು, ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಸ್ವರ ಸಂಜೆಗೆ ವಿಶೇಷ ಕಳೆ ತಂದು ಕೊಟ್ಟರು. ಸಭಾ  ಕಾರ್ಯಕ್ರಮವನ್ನು ವಸುಧಾ ಕೋಟ್ಯಾನ್ ಅವರು ಅಚ್ಚು ಕಟ್ಟಾಗಿ ನೆರವೇರಿಸಿ ಕೊಟ್ಟರು.   

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೃಂಭಿಸಿದ  ನೃತ್ಯ ತಂಡಗಳಾದ  ವಿಷ್ ಡಾನ್ಸ್ ಸ್ಟುಡಿಯೋ, ಜೂನಿಯರ್ ರಾಕ್‌ಸ್ಟಾರ್ಸ್, ಶ್ಯಾಮಾ ಹಂಸ (ತಿಲ್ಲಾನಾ), ಮತ್ತು ದೇಶಿ ಸ್ವ್ಯಾಗ್,  ಸುವರ್ಣ (ಗೋಲ್ಡ್ ) ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಸುಬ್ರಮಣ್ಯ ಹೆಬ್ಬಾಗಿಲು , ಐ, ಎಸ್. ಸಿ, ಸಲಹಾ ಸದಸ್ಯರು ಅವರಿಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು.   ಎಲ್ಲಾ ಕಲಾವಿದರನ್ನು ವಿಶೇಷವಾಗಿ ಸಂಮಾನಿಸಿ ಅವರ ಕಲಾ ಸೇವೆಗೆ ವಿನಯಪೂರ್ವಕ ಗೌರವ ಸಲ್ಲಿಸಲಾಯಿತು.

ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿಯ ಮುಖ್ಯಸ್ಥರಾದ ರಘುನಾಥ್ ಅಂಚನ್ , ಸಲಹಾ ಸಮಿತಿಯ ಸರ್ವ ಸದಸ್ಯರು, ಕಾರ್ಯಕಾರಿ ಮಂಡಳಿ, ಸ್ವಯಂ ಸೇವಕರು ಮತ್ತು ಎಲ್ಲಾ ಸದಸ್ಯರು  ಅಹರ್ನಿಶಿ ದುಡಿದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಬಿಲ್ಲವಾಸ್ ಕತಾರ್ ನ  ಉಪಾಧ್ಯಕ್ಷರಾದ ಜಯರಾಮ ಸುವರ್ಣ ಅವರು ಎಲ್ಲರಿಗೂ ಧನ್ಯವಾದಗೈದರು.  ಎಲ್ಲರ ಮನ ಸೂರೆಗೈದ ಸ್ವರ ಲಹರಿ ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿ ಎಲ್ಲರ ಮನದಂತರಾಳದದಲ್ಲಿ ಹೊಸ ಛಾಪನ್ನು ಮೂಡಿಸಿತು.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »