TOP STORIES:

ಹೋಟೆಲಿನಲ್ಲಿ ಇಂಗ್ಲಿಷ್ ಮಾತನಾಡುವವರನ್ನು ಕಂಡು ಮೂಕನಂತೆ ನೋಡುತ್ತಿದ್ದ ಯುವಕ ಈಗ ಸಾವಿರಾರು ಬಡ ಮಕ್ಕಳಿಗೆ ಇಂಗ್ಲಿಷ್ ಕಲಿಸಿದ ಶಿಕ್ಷಣ ದಿಗ್ಗಜ ಪ್ರಕಾಶ್ ಅಂಚನ್


ಬಡತನದ ಬೇಗೆಯಿಂದ ಬಳಲುತ್ತಿದ್ದ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. 7ನೇ ತರಗತಿಯಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯೋಗಕ್ಕಾಗಿ ಮುಂಬೈಗೆ ಹೊರಟು ಅಲ್ಲಿನ ಹೋಟೆಲುಗಳಲ್ಲಿ ಗ್ಲಾಸ್ ತೊಳೆದು ಸಂಪಾದನೆ ಮಾಡುತ್ತಿದ್ದ ಸಂದರ್ಭವದು. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಜನರನ್ನು ಕಂಡು ಮೂಕ ವಿಸ್ಮಿತನಂತೆ ನೋಡಿ ನಾವಷ್ಟು ಕಲಿಯಲಿಲ್ಲವಲ್ಲಾ ಎಂದು ಚಿಂತಿಸಿ ಬಡವರಿಗೆ ಶಿಕ್ಷಣದ ಬಗ್ಗೆ ಅಂದೇ ಮಸ್ತಕದಲ್ಲಿ ಯೋಜನೆ ಹಾಕಿಕೊಂಡ ವ್ಯಕ್ತಿ ಅವರು.

ಅಂದು ಹಾಕಿದ ಯೋಜನೆಯ ಯೋಚನೆಯು ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದ ಆ ವ್ಯಕ್ತಿ ಮತ್ಯಾರೂ ಅಲ್ಲ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, “ಸರ್ಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿಯ ರಾಜ್ಯಾಧ್ಯಕ್ಷರು, ಸರ್ಕಾರಿ ಶಾಲೆ ಹೀಗೂ ಇರುತ್ತಾ ಎಂದು ಅಭಿವೃದ್ಧಿಯ ಶಕೆಯನ್ನು ಪಸರಿಸಿದ ಧೀಮಂತ ಅಕ್ಷರ ದಿಗ್ಗಜ ಪ್ರಕಾಶ್ ಅಂಚನ್

“ಹುಟ್ಟು ದರಿದ್ರ ಆದರೂ ಸಾವು ಚರಿತ್ರೆ ಆಗಬೇಕು” ಎಂಬ ಮಾತಿದೆ. ಅನೇಕ ಮಂದಿ ಬಡತನದಿಂದಲೇ ಹುಟ್ಟುತ್ತಾರೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾದ ಜನರು ಅದೆಷ್ಟೋ. ಇಂತಹಾ ಅನೇಕ ಮಂದಿಗೆ ಆದರ್ಶ ರೂಪವಾಗಿ ಕಂಗೊಳಿಸುವ ಶಿಕ್ಷಣ ಮೂರ್ತಿ ಪ್ರಕಾಶ್ ಅಂಚನ್.

ಹಿಂದೆಯೇ ಈ ಪುಣ್ಯಾತ್ಮರ ಬಗ್ಗೆ ಅಕ್ಷರ ಚೆಲ್ಲಬೇಕು ಎಂಬ ಕನಸಿತ್ತು. ಆದರೆ ಅದು ಇಂದು ನೆರವೇರಿದೆ ಹಾಗೂ ಅವರ ಬಗ್ಗೆ ಬರೆಯಲು ಬಹಳ ಸಂತೋಷ ಪಡುತ್ತೇನೆ.ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೇರಬೇಕು ಎಂಬ ನಾವು ಕಟ್ಟಿಕೊಳ್ಳುತ್ತಿದ್ದ ಕನಸಿಗೆ ಯಥಾವತ್ತಾಗಿ ಒಬ್ಬ ಅಸಮಾನ್ಯ ವ್ಯಕ್ತಿ ಸಾಧಿಸಿ ತೋರಿಸುತ್ತಿದ್ದಾರೆ ಎನ್ನುವಾಗ ಸಂತೋಷ ನೂರ್ಮಡಿಗೊಳ್ಳುತ್ತಿತ್ತು. ಅದರಲ್ಲೂ ನಮ್ಮ ತುಳುವ ಮಾಣಿಕ್ಯ ಹೆಮ್ಮೆ ಜಾಸ್ತೀನೇ.

ತನ್ನಂತೆ ಮುಂದಿನ ಪೀಳಿಗೆಯ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸಂಕಲ್ಪ ಇಟ್ಟುಕೊಂಡು ಮುಂಬೈನಿಂದ ಮತ್ತೆ ತನ್ನ ಸ್ವಂತ ಊರಿಗೆ ಮರಳಿದ ಪ್ರಕಾಶ್ ಅಂಚನ್ ಸೃಷ್ಟಿಸಿದ್ದು ಇತಿಹಾಸ. ಬಂಟ್ವಾಳದಲ್ಲಿ ಸಣ್ಣ ಗಾರ್ಮೆಂಟ್ಸ್ ಅಂಗಡಿ ತೆರೆದು, ಉದ್ಯಮ ಆರಂಭಿಸಿ ಆರಂಭದಲ್ಲಿ ನಾಲ್ಕು ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡಿದ್ದ ಪ್ರಕಾಶ್ ಅಂಚನ್ ನಂತರ, 9ದೇವಸ್ಥಾನ ಅಭಿವೃದ್ಧಿ ಪಡಿಸಿ ಬ್ರಹ್ಮ ಕಲಸ ದಲ್ಲಿ ತೊಡಗಿ, ಎಂಟು ಶಾಲೆಗಳಿಗೆ ಉಚಿತ ಪುಸ್ತಕಗಳನ್ನು ನೀಡಿ, ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಅವರ ಯೋಚನೆಗಳು ಒಂದೇ ಸಮನೆ ಓಡಾಡುತ್ತಿದ್ದುದು ಶಿಕ್ಷಣದೆಡೆಗೆ. ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಚಿಂತಿಸುತ್ತಿದ್ದ ಪ್ರಕಾಶ್ ಅಂಚನ್‍ರಿಗೆ ಸಿಕ್ಕಿದ್ದು ಮೂವತ್ತು ಮಕ್ಕಳನ್ನು ಹೊಂದಿದ್ದ ಬಂಟ್ವಾಳ ತಾಲೂಕಿನ ದಡ್ಡಲಕಾಡು ಪ್ರಾಥಮಿಕ ಶಾಲೆ. ಕಾಕತಾಳಿಯವೆಂದರೆ ಅದು ತಾನೇ ಕಲಿತ ಶಾಲೆಯಾಗಿತ್ತು. ಸರ್ಕಾರಿ ಶಾಲೆ ಸುಧಾರಿಸಬೇಕು ಎಂದು ಕನಸು ಕಟ್ಟಿಕೊಂಡು ಹೋರಾಡಿದ್ದ ಪ್ರಕಾಶ್ ಅಂಚನ್ ರಿಗೆ ತಾನೇ ಕಲಿತ ಶಾಲೆಯನ್ನು ಕಂಡು ಕಣ್ಣಲ್ಲಿ ನೀರು ಬಂದಿತ್ತು. ಅರೆ ಘಳಿಗೆಯೂ ಯೋಚನೆ ಮಾಡದೆ ತನ್ನ ಮಕ್ಕಳನ್ನು ಅದೇ ಶಾಲೆಗೆ ಸೇರಿಸಲು ನಿರ್ಧರಿಸಿದ್ದಲ್ಲದೆ ತನ್ನ ಸಹೋದರರ ಮಕ್ಕಳನ್ನೂ ಅದೇ ಶಾಲೆಗೆ ಸೇರ್ಪಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡರು. ನಂತರ ನಡೆದಿದ್ದೇ ಇತಿಹಾಸ. ಕೇವಲ 24 ಗಂಟೆಗಳಲ್ಲಿ 26 ಮಕ್ಕಳನ್ನು ಅದೇ ಸರ್ಕಾರಿ ಶಾಲೆಗೆ ಸೇರಿಸುವ ಮಹಾ ಕಾರ್ಯವನ್ನು ಅಂದೇ ಪೂರೈಸಿಬಿಟ್ಟರು. ಅದೇ ಸಂದರ್ಭದಲ್ಲಿ ಅವರಿಗೆ ಜೊತೆಯಾದ ಅತಿದೊಡ್ಡ ಶಕ್ತಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ.). ಅವಿರತ ದುಡಿಯುತ್ತಿದ್ದ ಯುವಕರಿದ್ದ ಆ ಸಂಘಟನೆಯ ಅಧ್ಯಕ್ಷರಾದ ಪ್ರಕಾಶ್ ಅಂಚನ್ ನಂತರ ಅದರ ನೇತೃತ್ವದಲ್ಲೇ ದಡ್ಡಲಕಾಡು ಶಾಲೆಗೆ ಹೊಸ ಆಯಾಮ ನೀಡಿದ್ದರು. ದಿನ ಕಳೆದಂತೆ ದಡ್ಡಲಕಾಡು ಶಾಲೆಯಲ್ಲಿ ಮಕ್ಕಳು ತುಂಬಿ ತುಳುಕಾಡುತ್ತಿದ್ದರು. ಮೂವತ್ತು ಮಕ್ಕಳನ್ನು ಹೊಂದಿದ್ದ ಆ ಶಾಲೆ ಇಂದು ಆರು ನೂರಕ್ಕಿಂತಲೂ ಅಧಿಕ ಮಕ್ಕಳನ್ನು ಹೊಂದಿರುವ ಶಾಲೆಯಾಗಿ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನೂ ಕಲಿಸಬಹುದು ಎಂಬ ಹೊಸ ಆಯಾಮಕ್ಕೆ ನಾಂದಿ ಹಾಡಿದವರೇ ಪ್ರಕಾಶ್ ಅಂಚನ್. ಅವರ ಕಾರ್ಯ ಅಷ್ಟಕ್ಕೇ ಮುಗಿದಿರಲಿಲ್ಲ. ರಾಷ್ಟ್ರ ಸುತ್ತಿದ್ದರು. “ಒಂದು ರಾಷ್ಟ್ರ ಒಂದೇ ಶಿಕ್ಷಣ” ಎಂಬ ಘೋಷವಾಕ್ಯದೊಂದಿಗೆ ರಥಯಾತ್ರೆ ಕೈಗೊಂಡರು. ರಾಜ್ಯ ರಾಜ್ಯಗಳನ್ನು ಸುತ್ತಿದರು. ರಾಜ್ಯದ ಬಹುತೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾದರು. ಇಂದು ರಾಜ್ಯದ ಶಿಕ್ಷಣ ಸಚಿವರು ಸಹಿತವಾಗಿ ಅನೇಕ ಜನಪ್ರತಿನಿಧಿಗಳು ಶಿಕ್ಷಣದ ವಿಚಾರವಾಗಿ ಪ್ರಕಾಶ್ ಅಂಚನ್ ಅವರ ಬಳಿ ಸಲಹೆಗಳನ್ನು ಪಡೆಯುತ್ತಾರೆ.

ದಡ್ಡಲಕಾಡು ಶಾಲೆಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ರಾಜ್ಯದ ರಾಜ್ಯಪಾಲರು ಆಡಿದ ಮಾತು ನಿಜಕ್ಕೂ ಅದ್ಭುತ. “ನಿಮ್ಮ ಸಾಧನೆ ಅಮೋಘ. ನಿಮ್ಮ ಶಿಕ್ಷಣ ಕ್ರಾಂತಿಯನ್ನು ಮುಂದುವರೆಸಿ. ಮುಂದೊಂದು ದಿನ ಈ ಶಾಲೆ ವಿಶ್ವ ವಿದ್ಯಾನಿಲಯವೂ ಆಗಬಹುದು”… ಅಬ್ಭಾ ಎಂತಹಾ ಮಾತುಗಳು. ಬಡ ಕುಟುಂಬದಲ್ಲಿ ಜನಿಸಿ, ದೂರದ ಮಹಾರಾಷ್ಟ್ರದಲ್ಲಿ ಹೋಟೆಲಿನ ಟೇಬಲ್ ತೊಳೆಯುತ್ತಿದ್ದ ಯುವಕ ಇಂದು ಸಾವಿರಾರು ಬಡ ಮಕ್ಕಳ ಪಾಲಿನ ಆದರ್ಶ ಮೂರ್ತಿಯಾಗಿದ್ದಾರೆ. ಪಠ್ಯ ಶಿಕ್ಷಣದೊಂದಿಗೆ ಕರಾಟೆ, ಸಾಂಸ್ಕೃತಿಕ ಚಟುವಟಿಕೆ, ಯೋಗ ಹೀಗೆ ಅನೇಕ ಯೋಜನೆಗಳು ಇವರ ಶಾಲೆಯಲ್ಲಿದೆ. ದಡ್ಡಲಕಾಡು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಮರೋಡಿಯ ಕೂಕ್ರಬೆಟ್ಟ ಸಹಿತ ಕೆಲ ಶಾಲೆಗಳನ್ನು ದತ್ತು ತೆಗೆದುಕೊಂಡು ತಮ್ಮ ಶಿಕ್ಷಣ ಕ್ರಾಂತಿಯನ್ನು ಮುಂದುವರೆಸಿದ್ದಾರೆ.

ಬಡ ಮಕ್ಕಳಿಗೂ ಆಂಗ್ಲ ಮಾಧ್ಯಮವನ್ನು ರುಚಿಸಿದ ಪ್ರಕಾಶ್ ಅಂಚನ್ ರಿಗೆ ಶತಕೋಟಿ ನಮನಗಳು.ನಿಮ್ಮ ಶಿಕ್ಷಣ ಕ್ರಾಂತಿ ಮುಂದುವರಿದು ಮಹಾ ಕ್ರಾಂತಿಯಾಗಲಿ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »