ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ದೇಯವಾಕ್ಯದೊಂದಿಗೆ ಹುಟ್ಟಿಕೊಂಡ ಸಂಸ್ಥೆ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯು ಹಲವಾರು ಕುಟುಂಬಗಳಿಗೆ ನೆರಳಾಗಿ ಸಾಮಾಜಿಕ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಪಾತ್ರವಾದ ಸಂಘಟನೆ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಈ ನಮ್ಮ ಸಂಘಟನೆಗೆ ಇಂದು 7ವರ್ಷದ ಸಂಭ್ರಮ 7ನೇ ವರ್ಷಚಾರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಸ್ಥೆಯು ” ಸ್ನೇಹ ಭಾರತಿ ವಿದ್ಯಾ ಸಂಸ್ಥೆ ” ನಮ್ಮ ಹಿರಿಯರ ಮನೆ ಪೊರ್ಕೋಡಿ ಇಲ್ಲಿನ ಹಿರಿಯರ ಜೊತೆ ಕೇಕ್ ನ್ನು ಕತ್ತರಿಸಿ ಅವರಿಗೆ 2 ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿ ವಸ್ತುಗಳನ್ನು ನೀಡಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪೊರ್ಕೋಡಿ ಹಿರಿಯರ ಮನೆಯ ಸದಸ್ಯರು ನಮ್ಮ ಸಂಘಟನೆಯ ಪ್ರಮುಖರನ್ನು ಸನ್ಮಾನಿಸಿ ಶುಭ ಹಾರೈಸಿದರು
ಈ ಸಂದರ್ಭ ನಮ್ಮ ಜೊತೆ ಪೊರ್ಕೋಡಿ ಹಿರಿಯರ ಮನೆಯ ಸದಸ್ಯರು ಹಾಗೂ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು
ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )