TOP STORIES:

ನೃತ್ಯಪಟು ಬಹುಮುಖ ಬಾಲ ಪ್ರತಿಭೆ ದಿಶಾ ಕೆ ಪೂಜಾರಿ


‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತಿನಂತೆ ಚಿಕ್ಕ ವಯಸ್ಸಿನಲ್ಲೇ ಹಲವು ಪ್ರಶಸ್ತಿಗಳನ್ನು ಮುಡಿಗೆರಿಸಿ ಕೊಂಡವಳು.’ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು’ ಎನ್ನುವಾಗೆ ಇನ್ನೂ 11 ವರ್ಷದಲ್ಲೇ ಜಿಲ್ಲಾಮಟ್ಟ,ರಾಜ್ಯ ಮಟ್ಟದವರೆಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡು,ಸಾಧನೆಯ ಹಾದಿಯಲ್ಲಿ ಹೆಜ್ಜೆಗಳನ್ನಿಡುತ್ತ ಸಾಗುತ್ತಿರುವ ಹೆಮ್ಮೆಯ ನೃತ್ಯಪಟು ಬಹುಮುಖ ಬಾಲ ಪ್ರತಿಭೆ ದಿಶಾ.ಕೆ.ಪೂಜಾರಿ.

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕೇಶವ ಪೂಜಾರಿ ಮತ್ತು ರಾಜೀವಿ.ಕೆ ದಂಪತಿಗಳ ಮೊದಲನೆ ಸುಪುತ್ರಿಯಾಗಿ 6/10/2009ರಲ್ಲಿ ಜನಿಸಿದರು. ಒಂದು ಸಹೋದರ ಒಳಗೊಂಡ ಚಿಕ್ಕ ಸಂಸಾರ ಇವರದ್ದು. ಪ್ರಸ್ತುತ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.

ಚಿಕ್ಕ ವಯಸ್ಸಿನಲ್ಲೇ ನೃತ್ಯದಲ್ಲಿ ಆಸಕ್ತಿ ಇದ್ದ ಇವರು, ಈಗಾಗಲೇ 500 ಮಿಕ್ಕಿ ವೇದಿಕೆಯಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿದ್ದಾರೆ.ಇಷ್ಟೇ ಅಲ್ಲದೆ ಯಕ್ಷಗಾನ,ನಾಟಕ,ಚಿತ್ರಕಲೆ,ಯೋಗ,ಭರತನಾಟ್ಯ,ಸಂಗೀತ ಮತ್ತು ನಿರೂಪಣೆ ಕ್ಷೇತ್ರದಲ್ಲು ಮುಂಚೂಣಿಯಲ್ಲಿರುವುದು ಇವರಲ್ಲಿ ಇರುವ ಪ್ರತಿಭೆಗೆ ಸಾಕ್ಷಿಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಹತ್ತು-ಹಲವು ಸಂಘ-ಸಂಸ್ಥೆಗಳು ಸನ್ಮಾನಗಳು ಇವರ ಮಡಿಲಿಗೆ ಸೇರಿದೆ. ಸ್ಥಳೀಯ ಟಿ.ವಿ ಚಾನೆಲ್ ಗಳು ನಡೆಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ‘ರಾರಾಸಂ ಫೌಂಡೇಶನ್ ರವರು ನಡೆಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಯುವವಾಹಿನಿ ನಡೆಸುವ ‘ಡೆನ್ನಾನ ಡೆನ್ನಾನ’ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜನರ ಮನಸ್ಸನ್ನು ಗೆದ್ದ ಹೆಮ್ಮೆಯ ಬಾಲ ಸಾಧಕಿ.#Namma Tv ಚಾನೆಲ್ ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತು ‘ಬಿಟ್ ದಿ ಬಿಟ್’ ನೃತ್ಯ ಸ್ಪರ್ಧೆಯಲ್ಲಿ, ‘ವಾಯ್ಸ್ ಝೊನ್’ ಏರ್ಪಡಿಸಿದ ‘ನಮ್ಮ ಡ್ಯಾನ್ಸ್ ಚಾಂಪಿಯನ್’ ಟಿ.ವಿ ಶೋನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

#Bodhi media ಆಯೋಜಿಸಿದ “ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್” ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಗಳಿಸಿದ್ದಾರೆ. “ಡ್ಯಾನ್ಸ್ ಮಾಡಿ ಬಹುಮಾನ ಗೆಲ್ಲಿರಿ” ಎನ್ನುವ ವಿಭಿನ್ನ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ ಕೀರ್ತಿ ಈ ಬಾಲ ಪ್ರತಿಭೆಯದ್ದು, ಇಷ್ಟೇ ಅಲ್ಲದೆ ಮಾಜಿ ಸಚಿವರಾದ ರಮನಾಥ ರೈರವರಿಂದ ಸನ್ಮಾನವನ್ನು ಗಿಟ್ಟಿಸಿಕೊಂಡು,ಹೆಗ್ಗಳಿಕೆ ಮಾತುಗಳನ್ನಾಡಿ,ಶುಭ ಹಾರೈಸಿದ್ದಾರೆ. ಕನ್ನಡ ಚಲನಚಿತ್ರದಲ್ಲಿ ಬಾಲ ನಟಿಯಾಗಿ ಬಣ್ಣ ಹಚ್ಚಿ ನಟನೆ ಮಾಡಿರುವುದು ಇವರ ಸಾಧನೆಯ ದೊಡ್ಡ ಹೆಜ್ಜೆ ಆಗಿದೆ ಮತ್ತು ಈ ಚಲನಚಿತ್ರಯು ಸಾಧ್ಯದಲ್ಲೆ ಬಿಡುಗಡೆಗೊಳ್ಳಲಿದೆ.ಚಿಕ್ಕ ವಯಸ್ಸಿನಲ್ಲೇ ಹಲವು ಶಾರ್ಟ್ ಫಿಲ್ಮ್ ಮತ್ತು ಆಲ್ಬಮ್ ಸಾಂಗ್ ನಲ್ಲಿ ಪಾತ್ರಗಳನ್ನು ಮಾಡಿ ನಟನೆಯಲ್ಲು ತಮ್ಮ ಛಾಪುನ್ನು ಮೂಡಿಸಿದ್ದಾರೆ.

ಹತ್ತು ಹಲವು ಪ್ರಶಸ್ತಿ,ಸನ್ಮಾನಗಳನ್ನು ಬಾಚಿಕೊಂಡಿರುವ ದಿಶಾರವರು ಮತ್ತು ಈಗಾಗಲೇ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇವರು ಪ್ರಸ್ತುತ ‘ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್’ ಕಡೇಶಿವಾಲಯದ ತಂಡದ ನಾಯಕ ಮತ್ತು ಕೋರಿಯೊಗ್ರಾಪರ್ ಆದ ಮಹೇಶ್ ಕುಲಾಲ್ ಇವರಿಂದ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.

 

ನಿಮ್ಮೆಲ್ಲಾ ಕನಸು ನನಸಾಗಲಿ,ಸಾಧನೆಯ ಶಿಖರವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ,ಸಾಧನೆಯ ಹಾದಿ ಸುಗಮವಾಗಲಿ,ಇನ್ನಷ್ಟು ಅವಕಾಶಗಳು ನಿಮ್ಮ ಮಡಿಲಿಗೆ ಸೇರಲಿ,ಪ್ರಶಸ್ತಿ ಪುರಸ್ಕಾರಗಳು ನಿಮಗೆ ಹರಸಿ ಬರಲಿ ಎನ್ನುವ ಶುಭಾಶಯಗಳೊಂದಿಗೆ,ನೃತ್ಯ ಲೋಕದಲ್ಲಿ ಇನ್ನೂ ಎತ್ತರದ ಸ್ಥಾನಕ್ಕೇರಲು ಈ ಪ್ರತಿಭೆಯನ್ನು ಹರಸಿ,ಹಾರೈಸಿ,ಆರ್ಶಿವಾದಿಸೋಣ ಎನ್ನುವ ಕೋರಿಕೆ.

✍ ರಾಜೇಶ್ ಎಸ್ ಬಲ್ಯ


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »