TOP STORIES:

ಎ ಜರ್ನಿ ಫ್ರಮ್ ‘ಪಾರ್ವತಿ’ ಟು ‘ಅನ್ವಿತಾ’


ನಿರೂಪಣೆ ಎಂಬ ಮೊದಲ ಘಟ್ಟ ಹತ್ತಿ, ತಂಪಿಂಪಿನ ಕಂಪು ಹರಡಿಸಿ, ಔಟ್ ಆಫ್ ಸಿಲೇಬಸ್ ಅನ್ನೋ ನಟನೆ ಎಂಬ ಪ್ರಶ್ನೆಗೆ ಉತ್ತರಿಸಿ ,’ದಂಡ್’ ನ ಎರಡನೇ ಲೀಡ್ ಆಗಿ, ‘ಗಟ್ಟಿಮೇಳ’ದ ಮೊದಲನೇ ಮದುಮಗಳಾಗಿ, ಪಾರ್ವತಿಯಿಂದ ಅನ್ವಿತಾ ಎಂದು ಪುನರ್ ನಾಮಕರಿಸಿ, ಅಗ್ರಜನ ಮುದ್ದಿನ ತಂಗಿಯಾಗಿ, ನಮ್ಮ ನಿಮ್ಮೆಲ್ಲರ ಮನದಲ್ಲಿ ‘ಆಧ್ಯಾ’ಳ ಛಾಪನ್ನು ಮೂಡಿಸಿ ಮನೆಮಾತಾಗಿರುವವರು ಸಾಗರದ ಬೆಡಗಿ ‘ಅನ್ವಿತಾ ಸಾಗರ್’.

   (Copyrights owned by: billavaswarriors.com )

ಬಣ್ಣದ ಜಗತ್ತಿಗೆ ಕಾಲಿಟ್ಟ ನಂತರ ಪಾರ್ವತಿಯಿಂದ ಅನ್ವಿತಾ ಸಾಗರ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಇವರು ,ಉದ್ಯಮಿ ಹೇಮಚಂದ್ರ ಮತ್ತು ಭಾರತಿ ದಂಪತಿಯ ಸುಪುತ್ರಿ, ನಟ ಅನೂಪ್ ಸಾಗರ್ ರವರ ಮುದ್ದಿನ ತಂಗಿ.ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು,ಬಿ.ಬಿ.ಎ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.ಬಿ.ಬಿ.ಎ ಪದವಿ ಪಡೆದ ಮೇಲೆ ಇವರು ನಮ್ಮ ಟವಿ ಚಾನಲ್ ನಲ್ಲಿ ನಾಲ್ಕು ವರುಷಗಳ ಕಾಲ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.

ರಂಜಿತ್ ಬಜ್ಪೆ ನಿರ್ದೇಶನದ ‘ದಂಡ್’ ಎಂಬ ತುಳು ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಿಸಿದ ಇವರು ನಟನೆ ಹೊರತು ನೃತ್ಯ-ಗಾನಕಲೆ, ಪಾಕಕ್ರಿಯೆ ಮತ್ತು ಮಹಾಕಾವ್ಯಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದಾರೆ.

   (Copyrights owned by: billavaswarriors.com )

‘ವೇದ’ ‘ಪ್ರಿಯ’ಪಾತ್ರಗಳಲ್ಲಿ ಮಿಂಚಿದ ಅನ್ವಿತಾ:

ಬಣ್ಣದ ಜಗತ್ತಿಗೆ ದಂಡ್ ಸಿನಿಮಾದ ಮೂಲಕ ಕಾಲಿಟ್ಟ ಇವರು ಮೊದಲ ಟೇಕ್ ನಲ್ಲೇ ನಿರ್ದೇಶಕ ರಂಜಿತ್ ಬಜ್ಪೆಯವರಿಂದ ಸಯ್ ಎಂದೆನಿಸಿಕೊಂಡಿದ್ದರು. ನಂತರ ಒಮ್ಮೆ ಹಚ್ಚಿದ ಬಣ್ಣವನ್ನು ಗುಂದಲು ಬಿಡದೆ ನಟಿಸಲು ಮುನ್ನಡೆದ ಇವರು ‘ಬಲೆ ಪುದರ್ ದೀಕ ಈ ಪ್ರೀತಿಗ್'(ಶಾನ್ವಿ),’ಪೆಟ್ಕಮ್ಮಿ'(ಪ್ರಿಯ) ಎಂಬ ತುಳು ಸಿನಿಮಾಗಳಲ್ಲಿ ಹಾಗೇ ‘ಬಣ್ಣ ಬಣ್ಣದ ಬದುಕು'(ಶಾಯಿದಾ), ‘ಜೀವನ ಯಜ್ಞ’, ‘ಮಾಯಾ ಕನ್ನಡಿ'(ಮಧು) ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ತುಳುನಾಡಿನ ಹಳ್ಳಿ ಹುಡ್ಗಿಯ ಪಾತ್ರದಲ್ಲಿ ‘ತಂಬಿಲ'(ವೇದ) – ತುಳು ಸಿನಿಮಾದಲ್ಲಿ , ‘ವಿರಾಟ ಪರ್ವ'(ಖುಷಿ) ಎಂಬ ಕನ್ನಡ ಸಿನಿಮಾದಲ್ಲಿ ಪಾತ್ರವಹಿಸಿದ್ದಾರೆ. ಇವು ಮುಂಬರುವ ಚಿತ್ರಗಳು.ಹಾಗೇ ಪ್ರಸ್ತುತವಾಗಿ ‘ಗಟ್ಟಿಮೇಳ’ ಎಂಬ ಧಾರವಾಹಿಯಲ್ಲಿ ಆಧ್ಯಾಳ ಪಾತ್ರ ವಹಿಸಿ ಎಲ್ಲರ ಜನಮನ ಗೆದ್ದಿದ್ದಾರೆ.

ಅನ್ವಿತಾರ ಮನದ ಮಾತು:

‘ಬಿ.ಬಿ.ಎ ಮಗ್ಸಿದ್ ಮೇಲೆ ಕೇವಲ ನಿರೂಪಕಿಯಾಗಿ ಕೆಲ್ಸ ಮಾಡುತ್ತಿದ್ದೆ.ನಟನೆ ತನಗೆ ಔಟ್ ಆಫ್ ಸಿಲೇಬಸ್ ಕ್ವೆಶನ್ ತರ ಬಂದಿದ್ದು,ಅದರ ಬಗ್ಗೆ ಗಂಧ ಗಾಳಿನೂ ಗೊತ್ತಿರದ ತನಗೆ ಮೊದಲನೇ ಬಾರಿಯ ಆಡಿಷನ್ ನಲ್ಲಿ, ಫಸ್ಟ್ ಟೇಕ್ ನಲ್ಲೇ ಸಯ್ ಅನ್ಸಿದ್ದು ತುಂಬಾನೇ ಖುಷಿ ಕೊಟ್ಟಿದೆ. ತನ್ನ ಪ್ರತಿ ಕಾರ್ಯದಲ್ಲಿ ತನ್ನ ಹೆತ್ತವರ ಅದರಲ್ಲೂ ಅಜ್ಜ ಮತ್ತು ಅಣ್ಣ ಸದಾ ಬೆನ್ನೆಲುಬಾಗಿದ್ದರಿಂದ ಈ ಎಲ್ಲಾ ಸಾಧನೆಗಳು ಬೆಳಕಿಗೆ ಬಂದಿವೆ’ ಎನ್ನುತ್ತಾರೆ ಅನ್ವಿತಾ.

ಗಟ್ಟಿಮೇಳದ ಮೊದಲನೇ ಮದುಮಗಳಾಗಿ ಕಿರುತೆರೆಗೆ ಪಾದಾರ್ಪಿಸಿದ ಪಾರ್ವತಿ:

ನಾಲ್ಕು ವರ್ಷಗಳ ಕಾಲ ತುಳುಚಿತ್ರರಂಗದಲ್ಲಿ ಮಿಂಚಿದ ಅನ್ವಿತಾರಿಗೆ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ ನಟಿಸಲು ಸಿಕ್ಕಿದ ಅವಕಾಶವು, ತನ್ನ ಜೀವನದ ಟರ್ನಿಂಗ್ ಸಿಚುವೇಷನ್ ಎಂದು ಅಭಿವ್ಯಕ್ತಪಡಿಸುತ್ತಾರೆ. ಇದೀಗ ಅಗ್ರಜನ ಮುದ್ದಿನ ತಂಗಿಯಾಗಿ ,ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಲ್ಲಿ ಜನರಿಂದ ತುಂಬಾನೇ ಒಳ್ಳೆ ಪ್ರತಿಕ್ರಿಯೆ ಬಂದಿದೆ ಎಂಬುದು ಅನ್ವಿತಾರ ಅಭಿಪ್ರಾಯ.

   (Copyrights owned by: billavaswarriors.com )

ಸಂದ ಗೌರವಗಳು:

ಚಿತ್ರರಂಗದಲ್ಲಿನ ಇವರ ಅಪೂರ್ವ ಸಾಧನೆಯನ್ನು ಗಮನಿಸಿ ಇವರಿಗೆ ಬಿಲ್ಲವ ಹಾಗೂ ಹಲವಾರು ಸಂಘಗಳ ವತಿಯಿಂದ ಸನ್ಮಾನಿಸಲಾಗಿದೆ.ಹಾಗೇ‌ ದಂಡ್ ಸಿನಿಮಾದ‌ ನಂತರ ‘ತುಳುಚಿತ್ರರಂಗದ ಪಟಾಕಿ’ ಅನ್ನೋ ಬಿರುದನ್ನು ಇವರು ಹೊಂದಿದ್ದಾರೆ.

ಮೊಗದಲ್ಲಿ ಸದಾ ಮುಗುಳ್ನಗೆಯನ್ನು ಚೆಲ್ಲುತ್ತಾ ,ಕಿವಿಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸುವ ನಿಮ್ಮ ಮಾತುಗಳು ಹೀಗೆ ಶಾಶ್ವತವಾಗಿದ್ದು ಹಾಗೇ ನಿಮ್ಮ ಕಲಾ ಜೀವನವು ಇನ್ನಷ್ಟು ಬಣ್ಣಗಳಿಂದ ತುಂಬಿ ರಂಗೇರಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ

   (Copyrights owned by: billavaswarriors.com )


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »