TOP STORIES:

FOLLOW US

ಕಲಾವಿದರ ಕಣ್ಮಣಿ ‘ರಂಜು ತುಳುರಂಗ ಪ್ರೇಮಿ’


ಓರ್ವ ಕಲಾವಿದನಿಗೆ ಕಲೆಯೇ ತನ್ನ ಬಣ್ಣದ ಪ್ರಪಂಚವಾದರೆ , ಇನ್ನೊಂದೆಡೆ ಆ ಕಲಾವಿದರ ಏಳಿಗೆಯೇ ತನ್ನ ಜಗತ್ತು ಮತ್ತವರ ಆಶೀರ್ವಾದನೇ ತನಗೆ ಶ್ರೀ ರಕ್ಷೆ ಎಂದುಕೊಂಡು ರಂಜಿತ್ ಕಕ್ಕಿಂಜೆ ಇವರು ಕಾರ್ಯಪ್ರವೃತ್ತರಾಗಿದ್ದಾರೆ. ರಂಗಸೇವಕರಿಗೆ ಈ ಸಮಾಜದಲ್ಲಿ ಒಂದೊಳ್ಳೆ ಸ್ಥಾನ ಸಿಗಬೇಕೆಂಬ ಆಶಯದಿಂದ ತನ್ನ ತುಳುವನಾಡಿಗೆ ದುಡಿಯುತ್ತಿರುವ ಇವರು, ತುಳುನಾಡಿನೆಲ್ಲೆಡೆ ಇವರು ‘ರಂಜು ತುಳುರಂಗ ಪ್ರೇಮಿ’ ಎಂದೇ ಜನರಿಗೆ ಚಿರಪರಿಚಿತರಾಗಿದ್ದಾರೆ.

ವಸಂತ್ ಪೂಜಾರಿ ಮತ್ತು ಉಷಾ ದಂಪತಿಯ ಸುಪುತ್ರನಾದ ಇವರು ಐಟಿಐ ಪದವೀಧರ , ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋಟ್ ನಲ್ಲಿ ಗ್ರೌಂಡ್ ಸಪೋರ್ಟ್ ಸೆರ್ವಿಸಸ್ ಮೈಂಟೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಣ್ಣದ ಲೋಕದ ಕಲಾವಿದನಾಗಿ,ನಾಟಕರಂಗದ ನಿರ್ದೇಶಕನಾಗಿ , ಭಜನಕಾರನಾಗಿ, ಗಾಯಕನಾಗಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಬರಹಗಾರನಾಗಿ , ಸಾಹಿತಿಯಾಗಿ ಹೀಗೆ ಸಕಲ ಕಲೆಗಳನ್ನು ಹೊಂದಿರುವ ಪ್ರತಿಭಾನ್ವಿತ ಸಾಧಕರಿವರು.

ಬಾಲ್ಯದಿಂದಲೇ ಭಜನೆಯ ಮೇಲಿನ ಒಲವು:

ಬಾಲ್ಯದಿಂದಲೇ ಇವರು ಉಳ್ಳಾಲ್ತಿ ಭಜನಾ ಮಂಡಳಿ, ಅರಂತಬೈಲಿನಲ್ಲಿ ದೇವರ ನಾಮಸ್ಮರಣೆ ಮಾಡಿಕೊಂಡು ಬಂದವರು.ಭಜನೆಯ ಮೇಲಿನ ಅಪಾರ ಪ್ರೀತಿಯಿಂದಾಗಿ ಇವರು ತನ್ನ ಊರಿನಲ್ಲೇ ಒಂದು ಭಜನಾ ತಂಡವನ್ನು ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ ‘ಶ್ರೀ ಶಬರಿ ಭಜನಾ ಮಂಡಳಿ’ ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು. ಊರು ಬಿಟ್ಟು ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ಹೋದವರು ಅಲ್ಲೂ ‘ಮಕರ ಶ್ರೀ ಭಜನಾ ಮಂಡಳಿ’ ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು ಹಾಗೂ ಮದು ಬಂಗೇರ ಕಲ್ಲಡ್ಕ ಮತ್ತು ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ‘ಯುವವಾಹಿನಿ ಬೆಂಗಳೂರು ಘಟಕ’ ವನ್ನು ಸ್ಥಾಪಿಸಿ ಅದರ ಸಾಂಸ್ಕೃತಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ರಂಗಪ್ರೇಮಿಯ ಮನದ ಮಾತು:

“ನಾನು ಬರಹಗಾರನಲ್ಲ ಅಭಿಮಾನಿ.ಕಲಾವಿದರ ಪ್ರೀತಿ ಅಭಿಮಾವೇ ನನ್ನ ಬರಹದ ಘಳಿಕೆ ಮತ್ತು ಶ್ರೀರಕ್ಷೆ.ಕಲಾಕ್ಷೇತ್ರದಲ್ಲಿ ನಿರಂತರ ಸೇವೆಗೈಯುವ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವುದೇ ನನ್ನ ಉದ್ದೇಶ.ಇದು ನನ್ನ ಸಾಧನೆಯಲ್ಲ ಕೇವಲ ಒಂದು ಪ್ರಯತ್ನ, ತನ್ನ ಪ್ರತಿ ಕಾರ್ಯದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಆತ್ಮೀಯ ಮಿತ್ರ ಸುಧೀರ್ ಎಸ್.ಕೆ ಮತ್ತು ಪ್ರಸಾದ್ ಕಲ್ಲಾಜೆ ” ಎನ್ನುತ್ತಾರೆ ತುಳುರಂಗ ಪ್ರೇಮಿ.

ರಂಗಭೂಮಿಯಲ್ಲಿನ ಪರಿಣಿತಿ:

ತಾನು ಒಬ್ಬ ಕಲಾವಿದನಾಗಬೇಕೆಂಬ ಆಸೆ ಹೊಂದಿದ್ದ ಇವರು ಅವಕಾಶವಿಲ್ಲದ ಕಾರಣ ಶಬರಿ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ ” ಬುದ್ಧಿ ಬನ್ನಗ” ಎಂಬ ತುಳು ನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದರು. ನಂತರ ‘ಗೌಜಿ ಗಮ್ಮತ್ತ್’ , ‘ಎನ್ನ ತಂಗಡಿ’ , ‘ಮಲ್ಲಸ್ತಿಕೆದ ಮರ್ಮಾಲ್’ , ‘ಒಂಜೆಕ್ ಒಂಜರೆ ಮಲ್ಪೊಚ್ಚಿ’ ನಾಟಕಗಳಿಗೆ ಸಾಹಿತ್ಯ ನೀಡಿ ನಿರ್ದೇಶಿಸಿ ನಟಿಸಿದ್ದಾರೆ. ಹಾಗೂ ಮೊದಲಬಾರಿಗೆ ಇವರು ‘ಗೋಲ್ಮಾಲ್’ ಎಂಬ ತುಳು ಚಲನಚಿತ್ರದಲ್ಲಿಯೂ ನವೀನ್ ಡಿ ಪಡಿಲ್ ರವರೊಡನೆ ನಟಿಸಿದ್ದಾರೆ. ತುಳುರಂಗಭೂಮಿ ಕಲಾವಿದರ ಸಲುವಾಗಿ ಇವರು ‘ಕಲಾವಿದೆರೆ ಕಡಲ್’ ವಾಟ್ಸಾಪ್ ಗ್ರೂಪ್ ರಚಿಸಿ ಒತ್ತಡದ ಕೆಲಸದ ಮಧ್ಯೆಯೂ ಕಲಾವಿದರಿಗೆ ತನ್ನ ಬರಹದ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಸಂದ ಗೌರವಗಳು:

ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಯುವವಾಹಿನಿ ಬೆಂಗಳೂರು ಘಟಕದ ವತಿಯಿಂದ ಸನ್ಮಾನ ,ಮಡಿಲು ಸಂಸ್ಥೆಯಿಂದ ‘ಮಡಿಲು ಪುರಸ್ಕಾರ’, ತೆಲಿಕೆದ ತೆನಾಲಿ ಕಾರ್ಲ ತಂಡದಿಂದ “ಕಲಾವಿದೆರೆ ಕಣ್ಮಣಿ” ಎಂಬ ಬಿರುದು ಹೀಗೆ ಹತ್ತು ಹಲವು ಕಡೆ ಇವರನ್ನು ಸನ್ಮಾನಿಸಲಾಗಿದೆ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ತಾನು ಹುಟ್ಟಿದ ಮಣ್ಣಿಗೆ ಋಣಿಯಾಗಿರು ಎಂಬಂತೆ, ಸದಾ ಮುಗುಳ್ನಗೆಯ ಮಾಲೀಕನಾಗಿರುವ ಇವರು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಕಾರ್ಯನಿರತರಾಗಿದ್ದರೂ ತುಳುನಾಡು ಹಾಗೂ ತುಳು ಭಾಷೆಯ ಮೇಲಿನ ಇವರ ಅಭಿಮಾನವನ್ನು ಒಂಚೂರು ಕುಗ್ಗಿಸದೆ ,ರಂಗಭೂಮಿ ಕಲಾವಿದರಿಗೂ ಈ ಸಮಾಜದಲ್ಲಿ ಉನ್ನತ ಸ್ಥಾನ ಸಿಗಬೇಕೆಂಬ ನಿಮ್ಮ ನಿಸ್ವಾರ್ಥ ಭಾವನೆಗೆ ನಾವೆಂದಿಗೂ ಚಿರಋಣಿ. ನಿಮ್ಮ ಈ ರಂಗಪ್ರೇಮ ಶಾಶ್ವತವಾಗಿದ್ದು ಇನ್ನಷ್ಟು ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿ – ಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.

ಬರಹ: ಯಕ್ಷಿತಾ ಆರ್ ,ಮೂಡುಕೊಣಾಜೆ


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »