ನವಚೇತನ ಸೇವಾ ಬಳಗ (ರಿ ) ತೋಡಾರು.
ಬಡವರ ಸೇವೆಯೇ ದೇವರ ಸೇವೆ
ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಎಂಬ ಮಾತಿನಂತೆ ನಮ್ಮ ತಂಡವು ಈ ದಿನದಂದು ಶಿಕ್ಷಣಕ್ಕೆ ಮಹತ್ವವನ್ನುಕೊಟ್ಟು ದ್ವಿತೀಯ ಪಿ ಯು ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನ ಗಳಿಸಿದ 6 ವಿದ್ಯಾರ್ಥಿಗಳನ್ನು ಗುರುತಿಸಿಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರಿನಲ್ಲಿ ಸನ್ಮಾನಿಸಲಾಯಿತು.ಸನ್ಮಾನಿತಗೊಂಡ ವಿದ್ಯಾರ್ಥಿಗಳು ತಂಡದ ಬಗ್ಗೆ ಇನ್ನಷ್ಟುಸಮಾಜಸೇವೆ ನಿಮ್ಮಿಂದಾಗಲಿ ಹಾಗೆಯೇ ಶಿಕ್ಷಣಕ್ಕೆ ನಿಮ್ಮ ಸಹಕಾರ ಎಂದಿಗೂ ಇರಲಿ ಎಂದು ಶುಭ ಹಾರೈಸಿದರು.ನಮ್ಮ ಈ ಸನ್ಮಾನಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದವರು ಸತೀಶ್ ಅಂಚನ್ ಬಜಾಲ್ ಅಧ್ಯಕ್ಷರು ಮಂಗಳೂರು ಅಸೋಸಿಯೇಷನ್ ಸೌದಿಅರೇಬಿಯಾ ದಮ್ಮಾಮ್ ಇವರು, ಈ ಸಂದರ್ಭದಲ್ಲಿ ನಮ್ಮ ತಂಡದ ಉಪಾಧ್ಯಕ್ಷರಾದ ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ, ಸದಸ್ಯರಾದ ದೀಕ್ಷಿತ್ ದೇವಾಡಿಗ ನಂದಲಿಕೆ, ಶೈಲೇಶ್ ಕೋಟ್ಯಾನ್ ಸೂಡ, ಸುಧೀರ್ ಪೂಜಾರಿ ಇರ್ವತ್ತೂರು,ನಾಗರಾಜ್ ಕುಲಾಲ್ಬೆಲ್ಮನ್, ಮುಕೇಶ್ ಸಾಲ್ಯಾನ್ ನಂದಲಿಕೆ, ಪ್ರಸನ್ನ ಆಚಾರ್ಯ ನಂದಲಿಕೆ, ಜಾನ್ ಸೂಡ, ಹಾಗೂ ಕೃಷ್ಣ ಸುವರ್ಣ ವೇಣೂರ್, ಉಪಸ್ಥಿತರಿದ್ದರು. ದೀಕ್ಷಿತ್ ನಂದಲಿಕೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.