TOP STORIES:

FOLLOW US

ಬದುಕಿನ ಸತ್ಯ ಅನ್ವೇಷಣೆಗಾಗಿ ಆಧ್ಯಾತ್ಮ ಸೆಳೆತ – ಶ್ರೀಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ಜೀವನ ರಹಸ್ಯ


ಮಹಾಕಾಳಿ ಮಹಾಸಂಸ್ಥಾನ ಸದ್ಧರ್ಮ ಓಂಶಕ್ತಿಪೀಠ ರಸಾಯಿ ಶೇಂಡೂರು, ನಿಪ್ಪಾಣಿ ಮಠದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರು ಮೂಲತಃ ತುಳುನಾಡಿನವರು. ಇವರು ಮೂಲ್ಕಿ ಸಮೀಪದ ಪಡುಪಣಂಬೂರು ಎಂಬಲ್ಲಿ 1976 ಜುಲೈ 25 ರಂದು ಜನಿಸಿದರು. ಹಳೆಯಂಗಡಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ ನಂತರ ಪದವಿ ವ್ಯಾಸಂಗವನ್ನು ಹಳೆಯಂಗಡಿಯ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿ ಮುಂಬೈಯಲ್ಲಿ ಎಲ್‌ಐಸಿ ಡೆವಲಪ್ ಆಫಿಸರ್ ಆಗಿ ಉದ್ಯೋಗ ಮಾಡುತ್ತಿದ್ದ ಅವರನ್ನು ಸೆಳೆದದ್ದು ಆಧ್ಯಾತ್ಮ.
(Copyrights owned by: billavaswarriors.com )

ಅವರ ಪೂರ್ವಾಶ್ರಮದ ಹೆಸರು ಅರುಣ್ ಕುಮಾರ್. ಅರುಣಾನಂದ ತೀರ್ಥ ಸ್ವಾಮೀಜಿಯವರಿಗೆ ಬಾಲ್ಯದಲ್ಲಿಯೇ ಆಧ್ಯಾತ್ಮ ಎಂದರೆ ಹೆಚ್ಚು ಒಲವು. ತನ್ನ 8ನೇ ವರ್ಷದಲ್ಲೇ ಆಧ್ಯಾತ್ಮದ ಕಡೆಗೆ ಒಲವು ಮೂಡಿತ್ತು. ಆದರೆ ಮನೆಯಲ್ಲಿ ಮಗ ಆಧ್ಯಾತ್ಮದೆಡೆಗೆ ಹೋಗಬಾರದೆಂದು ವಿರೋಧವಿತ್ತು. ಅದಕ್ಕಾಗಿ ಮನೆಯಲ್ಲಿದ್ದ ದೇವರ ಫೋಟೋಗಳನ್ನೂ ತೆಗೆದು ಹಾಕಿದ್ದರು. ಆದರೂ ಮನೆಯಲ್ಲಿ ತಂದೆ ತಾಯಿಗೆ ಗೊತ್ತಾಗದಂತೆ ರೂಮಿನಲ್ಲಿ ಕುಳಿತು ಮಂತ್ರಗಳನ್ನು ಬರೆದು ಪಠಿಸುತ್ತಿದ್ದರಂತೆ. ಹಾಗಾಗಿ ಮುಂದೆ ಉದ್ಯೋಗವನ್ನು ಬಿಟ್ಟು ಆಧ್ಯಾತ್ಮಿಕ ಬದುಕಿನೆಡೆಗೆ ಸಾಗಿದರು.

(Copyrights owned by: billavaswarriors.com )

ಸನ್ಯಾಸತ್ವ ಸ್ವೀಕರಿಸಿ ಯತಿಯಾಗುವುದೆಂದರೆ ಅಂದುಕೊಂಡಷ್ಟು ಸುಲಭವಲ್ಲ. ತನ್ನ ಮನೆ, ತಂದೆ ತಾಯಿ, ಬಂಧು ಬಳಗ ಎಲ್ಲವನ್ನೂ ತ್ಯಜಿಸಿ ಬರಬೇಕು. ಆ ದಾರಿಯಲ್ಲಿ ಇರುವ ಕಷ್ಟ, ನಡೆದು ಬಂದ ಹಾದಿ, ಮಾತಿನಲ್ಲಿ ಹೇಳುವಷ್ಟು ಸುಲಭವಲ್ಲ. ತಾನು ಮಾಡಬೇಕಾದ ಕೆಲಸ ಇದಲ್ಲ, ತನ್ನ ಬದುಕಿನ ಗುರಿ ಬೇರೆಯೇ ಇದೆ. ಬದುಕಿನ ಸತ್ಯವನ್ನು ಅನ್ವೇಷಣೆ ಮಾಡಬೇಕು ಎನ್ನುವ ಛಲದಿಂದ ತಮ್ಮ ಕೆಲಸ ಬಿಟ್ಟು ಆಧ್ಯಾತ್ಮದ ಬದುಕಿಗೆ ಕಾಲಿಟ್ಟ ಇವರು, 2002ರ ಆಗಸ್ಟ್ 23ರಂದು ವಜ್ರೇಶ್ವರಿಯಲ್ಲಿ ತಮ್ಮ ಗುರುಗಳಾದ ಕುಕ್ಕೆ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರಿಂದ ಸನ್ಯಾಸತ್ವಕ್ಕೆ ದೀಕ್ಷೆ ಮತ್ತು ಮಂತ್ರೋಪದೇಶ ಪಡೆದುಕೊಂಡರು.

ಮಹಾಕಾಳಿ ಮಹಾಸಂಸ್ಥಾನ ಸದ್ಧರ್ಮ ಓಂಶಕ್ತಿಪೀಠ ರಸಾಯಿ ಶೇಂಡೂರು ಮಠ

ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿರುವ ಈ ಮಠ, ಬೆಳಗಾವಿಯ ನಿಪ್ಪಾಣಿ ಎಂಬ ತಾಲೂಕಿನಿಂದ 9 ಕಿಲೋ ಮೀಟರ್ ಒಳಗಿರುವ ರಸಾಯಿ ಶೇಂಡೂರು ಎನ್ನುವ ಊರಿನಲ್ಲಿದೆ. ಇದು ಆರ್ಥಿಕವಾಗಿ ತುಂಬ ಹಿಂದುಳಿದಿರುವ ಗ್ರಾಮ. ಅರುಣಾನಂದ ಸ್ವಾಮೀಜಿಯವರು ರಸಾಯಿ ಶೇಂಡೂರಿನಲ್ಲಿ ಮಠ ಸ್ಥಾಪನೆ ಮಾಡಲು ಮುಖ್ಯವಾಗಿ ಕಾರಣವೆಂದರೆ, ತಮ್ಮ ಜತೆ ಶಿಷ್ಯನಾಗಿದ್ದ ಬಾಲು ಎಂಬುವವರ ಊರು ಬೆಳಗಾವಿ ಆಗಿತ್ತು. ಅವರು ಅಲ್ಲಿಗೆ ಒಂದು ಬಾರಿ ಹೋಗಿದ್ದಾಗ ಅದೇ ಊರಿನ ವ್ಯಕ್ತಿಯೊಬ್ಬರು, ನೀವು ಮಠ ಮಾಡುವುದಾದರೆ ನಾವು ನಿಮಗೆ ಜಾಗ ಕೊಡ್ತೇವೆ. ನಮ್ಮಲ್ಲಿ ಕೊಡಲು ಬೇರೆ ಏನೂ ಇಲ್ಲ ಎಂದು ಹೇಳಿದ್ದರಂತೆ. ಹಾಗಾಗಿ ಸ್ವಲ್ಪ ಸಮಯದ ನಂತರ ಅಲ್ಲಿಯೇ ಮಠ ಸ್ಥಾಪಿಸುವ ಯೋಜನೆ ಮಾಡಿಕೊಂಡರು.

ಪ್ರಾರಂಭದಲ್ಲಿ ಆ ಊರಿನಲ್ಲಿ ನೀರಿನ ಸಮಸ್ಯೆ ಇತ್ತಾದರೂ ನಂತರ ಬೋರ್‌ವೆಲ್ ಹಾಕಿ ನೀರಿನ ವ್ಯವಸ್ಥೆ ಮಾಡಿದ ಮೇಲೆ, ಈಗ ಇಡೀ ಊರಿಗೆ ನೀರನ್ನು ಅಲ್ಲಿನ ಮಠದ ವತಿಯಿಂದಲೇ ನೀಡುತ್ತಿದ್ದಾರೆ. 2011ರ ಏಪ್ರಿಲ್ 20ರಂದು ಈ ಮಠವನ್ನು ಸ್ಥಾಪನೆ ಮಾಡಲಾಗಿದೆ. ಬೆಳಗಾವಿಯ ನಿಪ್ಪಾಣಿಯಲ್ಲಿರುವ ಈ ಮಠವನ್ನು ಅರುಣಾನಂದ ಸ್ವಾಮೀಜಿಯವರಿಗೆ ದೀಕ್ಷೆ ನೀಡಿದ ಅವರ ಗುರುಗಳಾದ ಕುಕ್ಕೆ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರು ಬಂದು ಸ್ಥಾಪನೆ ಮಾಡಿದ್ದರು. ಮಠದ ಸ್ಥಾಪನೆ ಜತೆಗೆ ನಾಗ ದೇವರ ಪ್ರತಿಷ್ಠಾಪನೆಯನ್ನೂ ಮಾಡಲಾಗಿದೆ. ಈ ಮಠದಲ್ಲಿ ಮಹಾಕಾಳಿ ಹಾಗೂ ಕಾಲಭೈರವರ ಆರಾಧನೆ ನಡೆಯುತ್ತದೆ. ಪ್ರತಿ ವರ್ಷದ ಏಪ್ರಿಲ್ 20 ರಂದು ಈ ಮಠದಲ್ಲಿ ಜಾತ್ರೆ ನಡೆಯುತ್ತದೆ.

ಗೋವಾ, ಮಹಾರಾಷ್ಟ್ರ, ಕೇರಳ, ಆಂಧಪ್ರದೇಶ ಹೀಗೆ ಎಲ್ಲ ಕಡೆಯಿಂದಲೂ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವಂತಹ ಯಾತ್ರಿಗಳಿಗೆ ತಂಗಲು ಯಾತ್ರಿನಿವಾಸದ ವ್ಯವಸ್ಥೆಯೂ ಇದೆ. ನಿತ್ಯ ಅನ್ನದಾನ, ಪೂಜೆ ಪಾಠ ನಡೆಯುತ್ತದೆ ಹಾಗೂ ಪ್ರಶ್ನೆ ಕೇಳಲು ಕೂಡ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಇದರ ಜತೆಗೆ ಮಠದ ಕಡೆಯಿಂದ 10 ಜನ ಅನಾಥ ಮಕ್ಕಳನ್ನು ಓದಿಸುತ್ತಿದ್ದಾರೆ. ಮುಂದೆ ಬೆಂಗಳೂರಿನ ಯಲಹಂಕದಲ್ಲಿಯೂ ಈ ಮಠದ ಸಹಮಠ ಸ್ಥಾಪನೆ ಮಾಡುವ ಕನಸನ್ನೂ ಹೊಂದಿದ್ದಾರೆ ಶ್ರೀ ಅರುಣಾನಂದ ತೀರ್ಥರು.

ಅರುಣಾನಂದ ಸ್ವಾಮೀಜಿಯವರಿಗೆ ಮೈಸೂರಿನ ಚಾಮುಂಡಿ ಬೆಟ್ಟವೆಂದರೆ ತುಂಬಾ ಇಷ್ಟದ ಸ್ಥಳವಂತೆ. ಅದರೊಂದಿಗೆ ಕೊಡಗಿನ ತಲಕಾವೇರಿಗೂ ತಮ್ಮ ಬಿಡುವಿನ ಸಮಯದಲ್ಲಿ ಪ್ರವಾಸ ಮಾಡುತ್ತಾರೆ. ಪೂಜೆ, ಪಾಠ ಇದರ ಜತೆಗೆ ಮಠದ ಹತ್ತಿರದಲ್ಲಿ ತೋಟವನ್ನು ಮಾಡಿಕೊಂಡಿದ್ದಾರೆ. ಅಡಕೆ, ತೆಂಗು, ಮಲ್ಲಿಗೆ ಹೂವು ಹೀಗೆ ಸಣ್ಣ ಮಟ್ಟಿನ ಕೃಷಿ ಮಾಡಿ ಮಧ್ಯಾಹ್ನದ ಹೊತ್ತು ತೋಟಕ್ಕೆ ಹೋಗಿ ಕಾಲ ಕಳೆಯುತ್ತಾರೆ.

ಮುಂಬೈಯ ಕಲ್ಯಾಣದಲ್ಲಿ ಮೂಲ ದೇವಸ್ಥಾನ ಇದ್ದು, ಇಲ್ಲಿ ಮಠವನ್ನು ಮಾತ್ರ ನಡೆಸುತ್ತಿದ್ದಾರೆ. ಬಾಲ್ಯದಿಂದಲೀ ಬಡತನದಿಂದಲೇ ಮೇಲೆ ಬಂದಿರುವ ಇವರು ಬಡಜನರಿಗಾಗಿ ತನ್ನ ಮಠದ ಕಡೆಯಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ಹಾಗೆಯೇ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವ ಅಭಿಲಾಷೆ ಹೊಂದಿರುವ ಸ್ವಾಮೀಜಿಯವರು, ಮಹಾಕಾಳಿ ಸೇವಾ ಸಂಸ್ಥೆ ಮುಂಬೈ ಮೂಲಕ ತಮ್ಮ ಮಠ ಇರುವ ಊರಿನ ಜನರಿಗಾಗಿ ವೈದ್ಯಕೀಯ ವ್ಯವಸ್ಥೆಗಾಗಿ ಆಸ್ಪತ್ರೆ, ಶಾಲೆಯ ಸ್ಥಾಪನೆ ಹಾಗೆಯೇ ಗೋಶಾಲೆಯನ್ನು ಸ್ಥಾಪಿಸಬೇಕೆಂಬ ಕನಸು ಕಟ್ಟಿಕೊಂಡಿದ್ದಾರೆ. ಮಠದಲ್ಲಿದ್ದು ಪೂಜೆ ಆರಾಧನೆ ಮಾಡುವ ಜತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಇವರ ಕೆಲಸವನ್ನು ಮೆಚ್ಚಲೇಬೇಕು. ಇವರ ಸಮಾಜಪರ ಕೆಲಸಗಳು ಇನ್ನೂ ನಡೆಯುತ್ತಲೇ ಇರಲಿ ಹಾಗೆಯೇ ಎಲ್ಲಾ ಕಾರ್ಯದಲ್ಲಿಯೂ ಯಶಸ್ಸನ್ನು ಪಡೆಯಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ.

Watch Video: Yatishrestaru 12: ಅರುಣಾನಂದ ಸ್ವಾಮೀಜಿ, Nippani. Born in Mulky ಆಧ್ಯಾತ್ಮಿಕ ಬದುಕಿನ ನೋಟ with Walter

ಬರಹ:- ರಾಜಶ್ರೀ ಜೆ ಪೂಜಾರಿ
(Copyrights owned by: billavaswarriors.com )


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »