ವರ್ಕಲಾ: ಸ್ವಾಮಿ ಪ್ರಕಾಶಾನಂದ ( 99 ) ಬುಧವಾರ ಬೆಳಿಗ್ಗೆ ವರ್ಕಲಾ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಶಿವಗಿರಿ ಮಠದ ಮಾಜಿ ಮಠಾಧೀಶರಾಗಿದ್ದರು.
1922 ಡಿಸೆಂಬರ್ ನಲ್ಲಿ ಜನಿಸಿದ್ದು, ಕೆಲ ದಿವಸಗಳಿಂದ ವೃದ್ದ್ಯಾಪ್ಯ ಸಹಜ ಕಾಯಿಲೆಯಿಂದಾಗಿ ವರ್ಕಲ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಸಂಜೆ ಐದು ಗಂಟೆಗೆ ,ಠದ ಆವರಣದಲ್ಲಿ ಸ್ವಾಮೀಜಿಯವರ ಸಮಾಧಿ ಕ್ರಿಯೆ ನಡೆಯಲಿದೆ.
1922 ರಂದು ಪಿರವತ್ತೂರು ಕಳತ್ತರಡಿ ಮನೆತನದಲ್ಲಿ ಸ್ವಾಮೀಜಿಗಳ ಜನನ. ಪೂರ್ವಾಶ್ರಮದಲ್ಲಿ ಕುಮಾರನ್ ಎಂಬ ಹೆಸರಿತ್ತು. ಸ್ವಾಮೀಜಿಗಳ ಮುಂದಾಳುತ್ವದಲ್ಲಿ ಶಿವಗಿರಿ ಬ್ರಹ್ಮ ವಿದ್ಯಾಲಯದ ಸ್ಥಾಪನೆಯಾಗಿತ್ತು. ದೀರ್ಘಾವಧಿಗೆ ಶಿವಗಿರಿ ಶ್ರೀ ನಾರಯಣ ಗುರು ಧರ್ಮಸಂಘಂ ಟ್ರಸ್ಟ್ ಅಧ್ಯಕ್ಷರಾಗಿದ್ದರು. 1970 ಹಾಗೂ 1977 ರಲ್ಲಿ ಸಂಘಂ ನ ಕಾರ್ಯದರ್ಶೀಯಾಗಿಯೂ ಸೇವೆ ಸಲ್ಲಿಸಿದ್ದರು
ಶ್ರೀ ನಾರಾಯಣ ಆಶಯಗಳಲ್ಲಿ ಆಕರ್ಷಿತರಾಗಿ ಇಪ್ಪತ್ತ ಮೂರನೇ ವಯಸ್ಸಿನಲ್ಲಿ ಪ್ರಕಾಶಾನಂದ ಶಿವಗಿರಿ ಮಠಕ್ಕೆ ಸೇರಿದ್ದರು. ಅಂದು ಮಠಾಧಿಪತಿಯಾಗಿದ್ದ ಸ್ವಾಮಿ ಶಂಕರಾನಂದರ ಶಿಶ್ಯರಾಗಿ ಆಧ್ಯಾತ್ಮಿಕ ವಿಧ್ಯಾಭ್ಯಾಸ ಪೂರೈಸಿದರು. 35 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.