TOP STORIES:

ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ… ಜಗದೀಶ್ ಪೂಜಾರಿ ದುರ್ಗಕೋಡಿ


ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ..

ವ್ಯಕ್ತಿ ಹಣ‌ ಅಂತಸ್ತಿನಿಂದ ಶ್ರೀಮಂತನಾದರೆ, ಇಲ್ಲೊಬ್ಬರು ತನ್ನ  ಗುಣ, ಪರೋಪಕಾರ ಹೃದಯ ಶ್ರೀಮಂತಿಕೆಯಿಂದ ಜನ‌ಮೆಚ್ಚಿದಸೇವಕನಾಗಿ ತನ್ನ ಊರು ಮಾತ್ರವಲ್ಲದೆ ಅನೇಕ ಕ್ಷೇತ್ರಗಳಲ್ಲಿ ತನ್ನ ಹೆಸರಿಗೆ ಗುರುತು‌ಗಳಿಸಿದ್ದಾರೆ. ಯಾರಪ್ಪ ವ್ಯಕ್ತಿ ಎಂದಾಗನಮಗೆ ತಕ್ಷಣವೇ ನೆನಪಿಗೆ ಬರುವುದು

ಕುಪ್ಪೆ ಪದವಿನ ಜಗ್ಗಣ್ಣ “..

ಜಗದೀಶ್ ಪೂಜಾರಿ ದುರ್ಗಕೋಡಿ ಇವರು ದಿ. ವಾಸು ಪೂಜಾರಿ ಹಾಗು ಮುತ್ತು‌ ಪೂಜಾರಿ ದಂಪತಿಗಳ ಪುತ್ರ, ತನ್ನ ಬಾಲ್ಯದಿಂದಲೇಜನಪರ‌ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಇವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ‌ ಕೈಜೋಡಿಸಿದವರು. ಇನ್ನು ಧಾರ್ಮಿಕ‌ಕಾರ್ಯಗಳಲ್ಲೂ ಇವರು  ನಿರಂತರವಾಗಿ ಸೇವೆಯನ್ನು ನೀಡಿ ರಾಮಕೃಷ್ಣ ಭಜನ ಮಂಡಳಿ‌ ಕುಪ್ಪೆ ಪದವಿನ ಕಾರ್ಯದರ್ಶಿ ಯಾಗಿ  ಸೇವೆ ನೀಡಿದವರು. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ತನ್ನ ಬಿಡುವಿನ‌ ಸಮಯದಲ್ಲಿ ಶಾಲ ವಾಹನವನ್ನು ಚಲಾಯಿಸುವಶ್ರಮಜೀವಿಯೂ ಹೌದು. ಅನೇಕ ಜನಪರ ಕಾರ್ಯಗಳಲ್ಲಿ‌ ಗುರುತಿಸಿ ಸತತ ಮೂರು ಬಾರಿ 15 ವರುಷಗಳಿಂದ ಜನರೇಆಯ್ಕೆಮಾಡಿರುವ ಸೋಲಿಲ್ಲದ ಸರದಾರರು ಹೌದು. ತಾನು ಪಂಚಾಯತ್ ಸದಸ್ಯನಾಗಿ ಜನರ ಪ್ರತಿಯೊಂದು ಕಷ್ಟ ಗಳಿಗೂಹೆಗಲನ್ನು‌ ನೀಡುತ್ತಾ ಮುನ್ನಡೆಯುವ ಜೊತೆಗೆ‌ ಪಂಚಾಯತ್ ಮೂಲಕ‌ ದೊರಕುವ ಎಲ್ಲಾ ಸೌಲಭ್ಯಗಳನ್ನು ಜನರು ಸಮಗ್ರರೀತಿಯಲ್ಲಿ ತಲುಪಿಸುವ ಹೆಮ್ಮೆಯ‌ ಜನಪ್ರತಿನಿಧಿ. ಇನ್ನು ಬಿಲ್ಲವ ಸಮಾಜದ ಯುವವಾಹಿನಿ ರಿ. ಇದರ ಕುಪ್ಪೆಪದವು ಘಟಕದಮಾಜಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿರುತ್ತಾರೆ. ಪ್ರಸ್ತುತ(ಜಗ್ಗಣ್ಣ ರಿಕ್ಷಾ ) ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಯುವಾಹಿನಿ ಕೇಂದ್ರ ಸಮಿತಿ(ರಿ.)ಮಂಗಳೂರು ಇದರ ಸಂಘಟನಕಾರ್ಯದರ್ಶಿ

ತನಗೆ ಎಷ್ಟೇ ಅಧಿಕಾರ ಅವಕಾಶಗಳಿದ್ದರೂ ಇಂದಿಗೂ ರಿಕ್ಷಾ ಚಾಲಕನಾಗಿ ತನ್ನ‌ ಮನೆಯನ್ನು ನಿಭಾಯಿಸುವ ಶ್ರಮಜೀವಿ ಮುಂದಿನದಿನಗಳಲ್ಲಿ ಜನರ ಆಶಿರ್ವಾದ ದಿಂದ ಇನ್ನಷ್ಟು ಎತ್ತರಕ್ಕೆ ಬೆಳೆಯುವ ನಾಯಕನಾಗಲಿ ಎಂಬುವುದು ನಮ್ಮೆಲ್ಲರ ಆಶಯ

ಬಿಲ್ಲವಾಸ್ ಗುರುಪುರ ಕೈಕಂಬ


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »