TOP STORIES:

ಪಟ್ಟಕ್ಕೆ ಪಟ್ಟದ ಹೆಸರೇ ಹೇಗೆ ಆಗಬೇಕೋ ಹಾಗೆಯೇ ಸಾಧನೆಗೆ ಸಾಧಕದ ಹೆಸರೇ ಆಗಬೇಕು ಇದೇ ಧಾರ್ಮಿಕ ನಡೆ…..


ಮಾತೆತ್ತಿದರೆ ಜೈ ಕೋಟಿ ಚೆನ್ನಯ ಅನ್ನುವ, ಕಂಡ ಕಂಡ ಬಸ್‌ಸ್ಟ್ಯಾಂಡ್- ಏರ್‌ಪೋರ್ಟ್ -ವೃತ್ತಗಳಿಗೆಲ್ಲ ಕೋಟಿಚೆನ್ನಯರ ಹೆಸರಿಡಬೇಕೆಂದು ಒತ್ತಾಯಿಸುವ ಕೋಟಿ ಚೆನ್ನಯರ ಅಭಿಮಾನಿಗಳಿಗೆ (ಭಕ್ತರಿಗಲ್ಲ), ಅವರ ಆದರ್ಶಪುರುಷರೇ ಸರಿಯಾದ ಉತ್ತರ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಸ್ವತಃ ಬ್ರಹ್ಮಬೈದರ್ಕಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಹುಶಃ ಕೆಲವರಿಗೆ ಇನ್ನೂ ವಿಷಯವೇನೆಂದು ಹೊಳೆದಿರಲಿಕ್ಕಿಲ್ಲ. ತಮಗೆಲ್ಲಾ ತಿಳಿದಿರುವಂತೆ ಎಣ್ಮೂರ ಬೈದೆರುಗಳು ಅಥವಾ ಬ್ರಹ್ಮಬೈದರ್ಕಳು  ಬ್ರಹ್ಮರ ಅಥವಾ ಬೆಮ್ಮೆರ್‌ರ ಜೊತೆಗೆ ಅವರಿಗೆ ಸಮಾನವಾದ ಸ್ಥಾನ ಪಡೆದ ಈ ಮಣ್ಣಿನ ಅತ್ಯುನ್ನತ ಶಕ್ತಿಗಳು‌. ಅವರ ಆರಾಧನೆ ಬೈದೆರ್ಲು/ ಬೈದರ್ಕಳು ಎಂಬ ಹೆಸರಿಂದ ನಡೆಯುವುದೇ ಹೊರತು ಕೋಟಿ ಚೆನ್ನಯ ಎಂಬ ಅವರ ಲೌಕಿಕ ಹೆಸರಿನಿಂದಲ್ಲ. ಮೂಲ ಆರಾಧ್ಯ ಶಕ್ತಿಗಳನ್ನು ಬಿಡಿ, ಅವರ ದರ್ಶನ ಪಾತ್ರಿಗಳು/ ನೇಮ ಕಟ್ಟುವವರನ್ನೂ ಜನ ಹೆಸರಿಂದ ಕರೆಯದೆ ಎಡ-ಬಲ/ ದತ್ತ್- ಬಲತ್‌ಗ್ ಉಂತುನಾರ್/ ಕಟ್ಟುನಾರ್ ಎಂದೇ ಗುರುತಿಸುವುದು ವಾಡಿಕೆ‌. ಭಕ್ತರು ಯಾವತ್ತೂ ಅವರನ್ನು ಕೋಟಿ ಚೆನ್ನಯ ಎಂದು ಕರೆಯುವ ವಾಡಿಕೆ ಹಿಂದಿನಿಂದಲೂ ಇಲ್ಲ‌. ಆದರೆ ಈವಾಗ ಸ್ವಲ್ಪ ಸಮಯದಿಂದ, ಅದೂ ಮುಖ್ಯವಾಗಿ ಎಲ್ಲದರಲ್ಲೂ  ವರ್ಗ ಸಂಘರ್ಷವನ್ನು ಕಾಣಲು ಕಾತರಿಸುವ ತಥಾಕಥಿತ ಬುದ್ದಿಜೀವಿಗಳು, ಲೇಖಕರು ಮತ್ತು ಸಂಶೋಧಕರುಗಳ ಕೃಪೆಯಿಂದಾಗಿ, ಜನ ಹೋದಲ್ಲಿ ಬಂದಲ್ಲಿ ಕೋಟಿ ಚೆನ್ನಯ ಎಂದು ಕರೆಯುವುದು ಆರಂಭವಾಯಿತು. ಸಿಕ್ಕಸಿಕ್ಕ ಸಾರ್ವಜನಿಕ ಸ್ಥಳಗಳಿಗೆ ನಮ್ಮ ಆರಾಧ್ಯಶಕ್ತಿಗಳ, ಅದರಲ್ಲೂ ಅವರ ಲೌಕಿಕ ಹೆಸರನ್ನು ಇಡಬೇಕೆಂದು ಒತ್ತಾಯಿಸುವುದು, ವಾಟ್ಸಾಪ್/ ಫ಼ೇಸ್‌ಬುಕ್ ಕೂಟಗಳಲ್ಲಿ ಜೈ ಕೋಟಿ-ಚೆನ್ನಯ ಎಂದು ಕಮೆಂಟ್ ಮಾಡುವುದು ಇವೆಲ್ಲಾ ಆರಂಭವಾಯಿತು. ನಮಗಂತೂ ಇಂತಹವರಿಗೆ ತಿಳಿಹೇಳಿ ಸಾಕಾಗಿಹೋಗಿತ್ತು. ಅಷ್ಟರಲ್ಲಿ ಇಂತವರಿಗೆ ಸಾಕ್ಷಾತ್ ಬ್ರಹ್ಮ ಬೈದರ್ಕಳೇ ಈ ಬಗ್ಗೆ ಬುದ್ದಿ ಹೇಳಿದ ಘಟನೆ ಇತ್ತೀಚೆಗೆ ಗರೊಡಿಯೊಂದರಲ್ಲಿ ನಡೆಯಿತು.

ಇತ್ತೀಚೆಗೆ ಗರೊಡಿಯೊಂದರಲ್ಲಿ ಬೈದರ್ಕಳು ಮತ್ತು ಕೊಡಮಂದಾಯ ದೈವದ ದರ್ಶನ ಸೇವೆ ನಡೆಯುತ್ತಿತ್ತು. ಬೈದರ್ಕಳ ನುಡಿ ಆಗುತ್ತಿರುವ ಹೊತ್ತಿಗೆ ಗರೊಡಿಯ ಅಸ್ರಣ್ಣ/ ತಂತ್ರಿಯೂ ಆಗಿರುವ ಗ್ರಾಮದೇವರ ಅರ್ಚಕರು ಮಾತಿನ ನಡುವೆ ಬೈದರುಗಳನ್ನು ಕೋಟಿಬೈದ್ಯ ಚೆನ್ನಯ ಬೈದ್ಯ ಎಂದು ಸಂಬೋಧಿಸಿದರು. ಆಗ ಬೈದೆರುಗಳು ಸಮಾಧಾನ ಚಿತ್ತದಿಂದಲೇ ಅಸ್ರಣ್ಣರ ಮಾತಲ್ಲಿ ಆಗುತ್ತಿರುವ ತಪ್ಪನ್ನು ಎತ್ತಿ ತೋರಿಸಿದರು. ಕೊಡಮಂದಾಯ ದೈವದ ಜೊತೆಗೆ ದರ್ಶನದಲ್ಲಿದ್ದ ಬೈದರುಗಳು, “ಅಸ್ರಣ್ಣರೇ, ನಿಮ್ಮ ಮಾತಲ್ಲೊಂದು ಲೋಪವಿದೆ. ಇದನ್ನು ಇನ್ನು ಮುಂದಕ್ಕೆ ಸರಿಪಡಿಸಿಕೊಳ್ಳಿ. ನಾವು ಜನ್ಮಕ್ಕೆ ಬಂದಾಗ ನಮಗೆ ನಮ್ಮ ಬಲ್ಲಾಳರು ಇಟ್ಟ ಹೆಸರು ಕೋಟಿ -ಚೆನ್ನಯ ಎನ್ನುವುದರಲ್ಲಿ ಸಂದೇಹವಿಲ್ಲ‌. ಆದರೆ ಒಮ್ಮೆ ನಾವು ಕಾಯವನ್ನು ತ್ಯಜಿಸಿ ಬೆಮ್ಮೆರ್‌ರನ್ನು ಸೇರಿದ  ಬಳಿಕ ನಮ್ಮನ್ನು ಕೋಟಿ ಚೆನ್ನಯ ಎಂದು ಕರೆಯುವ ರೂಢಿ ಇಲ್ಲ. ಕಾಯದಲ್ಲಿ ಕೋಟಿ ಚೆನ್ನಯರಾಗಿದ್ದ ನಾವು ಮಾಯದಲ್ಲಿ ಬೆಮ್ಮೆರ್ ಬೈದೆರುಗಳಾಗಿ ನಂಬಿದವರನ್ನು ಕಾಯುತ್ತಾ ಬಂದಿದ್ದೇವೆ. ಅಲ್ಲದೆ ನಮ್ಮನ್ನು ಬೆಮ್ಮೆರ್ ಬೈದೆರುಗಳೆಂದು ಆರಾಧಿಸುವುದೇ ಹೊರತು ಕೋಟಿ-ಚೆನ್ನಯರೆಂದಲ್ಲ. ಹಾಗಾಗಿ ನೀವು ನಮ್ಮನ್ನು ಕೋಟಿ- ಚೆನ್ನಯ ಎಂದಾಗಲೀ ಕೋಟಿಬೈದ್ಯ- ಚೆನ್ನಯಬೈದ್ಯ ಎಂದಾಗಲೀ ಕರೆಯುವುದು ಸೂಕ್ತವಲ್ಲ. ಮುಂದಕ್ಕೆ ಈ ರೀತಿಯ ಮಾತು‌ ನಿಮ್ಮಿಂದ ಬಾರದಂತೆ ನೋಡಿಕೊಳ್ಳಿ” ಎಂದು ತಾಕೀತು ಮಾಡಿದರು.  ಅಸ್ರಣ್ಣರು ಮರುಮಾತಾಡದೆ ಬೈದರ್ಕಳ ನುಡಿಗೆ ತಲೆಬಾಗಿ ಅಂದಿನಿಂದ ಅವರನ್ನು ಬೆಮ್ಮೆರ್ ಬೈದೆರುಗಳೆಂದೇ ಕರೆಯತೊಡಗಿದ್ದಾರೆ. ಅಸ್ರಣ್ಣರೇ ಬೈದರ್ಕಳ ಮಾತಿಗೆ ತಲೆಬಾಗಿ ತಮ್ಮ ಹಿರಿತನವನ್ನು ಮೆರೆಯುತ್ತಿರುವಾಗ ನಮ್ಮನಿಮ್ಮಂತಹ ಸಾಮಾನ್ಯರಿಗೆ ಬೈದರ್ಕಳ ನುಡಿಯನ್ನು ಪಾಲಿಸುವುದು ಕಷ್ಟವಾದೀತೇ? ಬೈದರ್ಕಳ ನುಡಿಯನ್ನು ನಿಮಗೆ ತಲುಪಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಇನ್ನು ಮುಂದಕ್ಕಾದರೂ ಹೇಗೆ ನಡೆದುಕೊಳ್ಳುವಿರೋ ನಿಮಗೆ ಬಿಟ್ಟಿದ್ದು.


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »