TOP STORIES:

ನಾವು ಸತ್ತ ಮೇಲೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳು ಏನಾಗುತ್ತೆ ಗೊತ್ತಾ? ಇಲ್ಲಿದೆ ಉತ್ತರ…!!!


ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ , ಇನ್​​ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆ ಏನಾಗುತ್ತದೆ..?. ರೀತಿಯ ಅನೇಕ ಪ್ರಶ್ನೆಗಳುಬಹುತೇಕರಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರಿರುವುದು ನಿಜ. ಹೆಚ್ಚಿನ ಜನರಲ್ಲಿ ಕನಿಷ್ಠಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ. ಆದರೆ ನಿಮ್ಮ ಸಾವಿನ ಬಳಿಕ ಖಾತೆಏನಾಗುವುದು ಎಂದು ನಿಮಗೆ ತಿಳಿದಿದೆಯಾ?. ಸತ್ತ ಮೇಲೆ ನಮ್ಮ ಫೇಸ್‌ಬುಕ್ , ಇನ್​​ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆಏನಾಗುತ್ತದೆ, ಯಾರಾದರು ನಮ್ಮ ಖಾತೆಯನ್ನು ಹ್ಯಾಕ್ ಮಾಡಿ ಕೆಟ್ಟ ಸಂದೇಶ ಫೋಟೋಗಳನ್ನು ಹಂಚಿಕೊಂಡರೆ ಏನುಮಾಡೋದು..? ರೀತಿಯ ಅನೇಕ ಪ್ರಶ್ನೆಗಳು ಬಹುತೇಕರಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಫೇಸ್ಬುಕ್:
ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳು ಅದರದ್ದೇ ಆಗಿರುವ ಕೆಲವೊಂದು ಖಾಸಗಿ ನಿಯಮಗಳನ್ನು ರೂಪಿಸಿರುತ್ತವೆ. ಫೇಸ್‌ಬುಕ್ ಅಂತೂ ನೀವು ಸತ್ತ ಮೇಲೆ ನಿಮ್ಮ ಖಾತೆಯನ್ನು ಯಾರು ನಿರ್ವಹಿಸಬೇಕೆಂಬುದನ್ನು ಮೊದಲೇ ನಿರ್ಧರಿಸುವುದಕ್ಕೆಬಳಕೆದಾರರಿಗೆ ಸೌಲಭ್ಯವನ್ನು ಕೂಡ ಒದಗಿಸಿದೆ. ಆದರೆ, ಇದು ಅನೇಕರಿಗೆ ತಿಳಿದಿಲ್ಲವಷ್ಟೆ. ಇದಕ್ಕಾಗಿ ಮೊದಲು ನಿಮ್ಮ ಫೇಸ್‌ಬುಕ್ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿಲಿಗಸಿ ಕಾಂಟ್ಯಾಕ್ಟ್ಕ್ಲಿಕ್ ಮಾಡಬೇಕು. ಅಲ್ಲಿ ನೀವುಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ, ನೀವು ಸತ್ತ ನಂತರ ವ್ಯಕ್ತಿ ನಿಮ್ಮಖಾತೆಯನ್ನು ನಿಭಾಯಿಸುವಂತಹವರಾಗಿತ್ತಾರೆ.

ಇನ್ಸ್ಟಾಗ್ರಾಮ್:
ಹಾಗೆಯೆ ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಗಳನ್ನು ಅಳಿಸಲು ಅಥವಾ ಅವರ ಸಾವಿನ ನಂತರ ಅವುಗಳನ್ನುಸ್ಮರಣಾರ್ಥವಾಗಿ ಪರಿವರ್ತಿಸಲು ಆಯ್ಕೆಯನ್ನು ಹೊಂದಿರುತ್ತಾರೆ. ಸ್ಮರಣೀಯವಾದ ಫೇಸ್‌ಬುಕ್ ಪುಟವು ಇತರ ಪುಟಗಳಂತೆಕಾಣುತ್ತದೆ. ಆದರೆ, ವ್ಯಕ್ತಿಯ ಹೆಸರಿನ ಮುಂದೆ “Remembering” ಎಂಬ ಪದವನ್ನು ನೋಡಬಹುದು. ಫೇಸ್‌ಬುಕ್‌ನಂತೆಯೇ, ಇನ್ಸ್ಟಾಗ್ರಾಮ್ ಖಾತೆಯನ್ನು ಸ್ಮರಣೀಯಗೊಳಿಸಬಹುದು ಅಥವಾ ಅಳಿಸಬಹುದಾದ ಆಯ್ಕೆಯನ್ನು ಹೊಂದಿದೆ. ಆದರೆಖಾತೆಯನ್ನು ಸ್ಮರಣಾರ್ಥವಾಗಿಸಲು, ಜನರು ಮರಣದ ಪುರಾವೆಯೊಂದಿಗೆ ಇನ್ಸ್ಟಾಗ್ರಾಮ್ ಅನ್ನು ಸಂಪರ್ಕಿಸಬೇಕು.

ಟ್ವಿಟರ್:ವಿಶ್ವದಲ್ಲಿ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣವೆಂದರೆ ಟ್ವಿಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡುಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟರ್ಗೆಮನವಿ ಮಾಡಿಕೊಳ್ಳುವ ಅವಕಾಶವಿದೆ. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದು ಹಾಕಲಾಗುವುದು. ಮರಣಪ್ರಮಾಣ ಪತ್ರ ಸಲ್ಲಿಸುವುದು ಅತೀ ಅಗತ್ಯ.

ಜಿಮೇಲ್:ಜಿಮೇಲ್‌ನಲ್ಲಿ ಸಹ ಖಾತೆಯನ್ನು ನಿಷ್ಕ್ರಿಯ ಮಾಡುವ ಅವಕಾಶಗಳನ್ನು ಗೂಗಲ್ ನೀಡಿದ್ದು, ಅದಕ್ಕಾಗಿಪ್ರಿ ಸೆಲೆಕ್ಟೆಡ್‌ ಪೀರಿಡ್ಆಯ್ಕೆ ಮತ್ತು ಖಾತೆ ಡಿಆಕ್ಟಿವ್ ಮಾಡಲು ಕುಟುಂಬ ಸದಸ್ಯರಿಗೆ ಆಕ್ಸಸ್‌ ನೀಡುವ ಆಯ್ಕೆಗಳನ್ನು ನೀಡಿದೆ. ಬಳಕೆದಾರರು ಪ್ರಿಸೆಲೆಕ್ಟೆಡ್ ಪೀರಿಡ್ ಆಯ್ಕೆಯ ಡಿಆಕ್ಟಿವ್ ಮಾಡುವ ಅವಕಾಶ ಇದೆ. ಬಳಕೆದಾರ ಇಲ್ಲವಾದಾಗ ಅವರ ಕುಟುಂಬ ಸದಸ್ಯರು ಖಾತೆಡಿಆಕ್ಟಿವ್ ಮಾಡಲು ಆಕ್ಸಸ್ ನೀಡುವ ಆಯ್ಕೆ ಗೂಗಲ್ ನೀಡಿದೆ.

ಯೂ ಟ್ಯೂಬ್:ಯೂ ಟ್ಯೂಬ್ ಖಾತೆದಾರರು ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಅವಕಾಶ ನೀಡಿದೆ. ಯೂ ಟ್ಯೂಬ್​​ನಲ್ಲಿ ಹಣ ಸಂಪಾದನೆಮಾಡುವಂತಹ ಲಕ್ಷಾಂತರ ಮಂದಿಗೆ ಇದು ತುಂಬಾ ಒಳ್ಳೆಯ ಆಯ್ಕೆ. ಸಾವಿನ ಬಳಿಕ ನಿಮ್ಮ ಚಾನೆಲ್ ಅನ್ನು ಯಾರುನಿರ್ವಹಿಸಬಹುದು ಎನ್ನುವ ಬಗ್ಗೆ ಒಂದು ಕಾನೂನು ಪತ್ರ ಸಲ್ಲಿಸಬೇಕು. ಆಯ್ಕೆ ಮಾಡದೇ ಇದ್ದರೆ ಕೆಲವು ಸಮಯದ ತನಕಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವಂತಹ ನಿಮ್ಮ ಖಾತೆಯನ್ನು ಯೂ ಟ್ಯೂಬ್ ಮುಚ್ಚುತ್ತದೆ. ನೀವು ಗೂಗಲ್ ಇನ್ ಆಯಕ್ಟಿವ್ಅಕೌಂಟ್ ಮ್ಯಾನೇಜರ್ ಮೂಲಕ ಒಬ್ಬ ನಂಬಿಕಸ್ಥ ವ್ಯಕ್ತಿಗೆ ಖಾತೆಯ ನಿರ್ವಹಣೆ ನೀಡಬಹುದು.

ಇವಿಷ್ಟು ಮಾಹಿತಿಗಳು ನಿಮಗಾಗಿ. ಇದರಲ್ಲಿ ನಿಮ್ಮ ಅಕೌಂಟ್ ಗಳಿದ್ದರೆ ಈಗಲೇ ಅಪ್ಡೇಟ್ ಮಾಡ್ಕೊಳ್ಳಿ.


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »