TOP STORIES:

ತನ್ನ ಇರುವಿಕೆ ತೋರಿದ ತುಳುನಾಡಿನ ದೈವಿಶಕ್ತಿ: ಉಗ್ರನನ್ನು ನಗರ ಪ್ರವೇಶಿಸಲು ಬಿಡದೇ ದಾರಿಯಲ್ಲೇ ಬಾಂಬ್ ಸ್ಪೋಟಿಸಿ ಜನರ ರಕ್ಷಿಸಿದ ಕಂಕನಾಡಿ ಗರಡಿಯ ಅವಳಿ ವೀರರು..!


ಮಂಗಳೂರು: ಕಳೆದ ಕೆಲವು ದಶಕಗಳಿಂದ ಕೋಮುದಳ್ಳೂರಿಯಲ್ಲಿ ಬೆಂದು ಹೋಗಿದ್ದ ಕರಾವಳಿಯ ವಾಣಿಜ್ಯ ನಗರಿ ಮಂಗಳೂರುಇತ್ತೀಚಿನ ವರ್ಷಗಳಲ್ಲಿ ಅದ್ಯಾಕೋ ಸ್ಥಬ್ಧವಾಗಿತ್ತು. ಸಂತೃಪ್ತಿಯ ಮಧ್ಯೆ ಶನಿವಾರ ಮಂಗಳೂರು ನಗರದ ಕಂಕನಾಡಿ ಪೊಲೀಸ್ಠಾಣೆ ಬಳಿ ಆಟೋ ಕುಕ್ಕರ್ ಬಾಂಬ್ ಸ್ಫೋಟ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಆದರೆ ಇದೆಲ್ಲದರ ನಡುವೆ ಘಟನೆಯಲ್ಲೂ ತುಳುನಾಡಿನ ಕಾರ್ಣಿಕ ಶಕ್ತಿಗಳು ಪವಾಡ ಮೆರೆದಿರುವುದು ಗೋಚರವಾಗುತ್ತಿದೆ.

ಶನಿವಾರ ಮಂಗಳೂರು ನಗರದ ಕಂಕನಾಡಿ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಸ್ಪೋಟ ಸಂಭವಿಸಿದ್ದುಘಟನೆಯಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕನು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಅನೇಕ ಆಯಾಮಗಳನ್ನುಪಡೆದುಕೊಂಡರೂ ಕೊನೆಗೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಂಡಿದೆ.

ಭಯೋತ್ಪಾದನೆ ಸಂಚು ರೂಪಿಸಿದ್ದ ಶಾರೀಕ್ ಕುಕ್ಕರ್‌ನಲ್ಲಿ ಅನೇಕ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಪ್ರೀ ಪ್ಲಾನ್ ಎಂಬಂತೆಯೋಜನೆ ಹಾಕಿಕೊಂಡಿದ್ದ.

ಈತ ಮೈಸೂರಿನಿಂದ ಬಸ್ಸಿನಲ್ಲಿ ಬಂದು ಪಡೀಲ್‌ನ ಹತ್ತಿರ ಇಳಿದು ಪುರುಷೋತ್ತಮ್ ಎಂಬವರ ರಿಕ್ಷಾದಲ್ಲಿ ಕೂತು ಪಂಪ್‌ವೆಲ್‌ಗೆಹೋಗಬೇಕು ಎಂದಿದ್ದಾನೆ.

ಆದರೆ ಚಾಲಕ ರಿಕ್ಷಾ ಚಲಾಯಿಸುತ್ತಾ ಸಾಗುತ್ತಿರುವಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆ  ಬಳಿ ಆತ ಹೊತ್ತೊಯ್ಯುತ್ತಿದ್ದ ಬ್ಯಾಗ್‌ನಲ್ಲಿದ್ದ ಕುಕ್ಕರ್ ಅಚಾನಕ್ ಆಗಿ ಸ್ಫೋಟಗೊಂಡಿದೆ. ಸ್ಫೋಟದ ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಈತನ ಕೃತ್ಯದ ಬಗ್ಗೆ ಅನೇಕ ಪ್ರಶ್ನೆಗಳು, ಅನುಮಾನಗಳು, ಆತಂಕಗಳು ಸೃಷ್ಠಿಯಾಗುತ್ತಿದ್ದರೂ ಆತ ಸ್ಪೋಟಕ ತುಂಬಿದ್ದ ಕುಕ್ಕರನ್ನುತೆಗೆದುಕೊಂಡು ಜನರು ನಂಬಿಕೊಂಡು ಬಂದಿರುವ ತುಳುನಾಡ ಕಾರ್ಣಿಕ ಪುರುಷರ ದೈವಸ್ಥಾನವಾದ ಕೋಟಿ ಚೆನ್ನಯ್ಯ ಗರೋಡಿತನ್ನ ಗಡಿಯನ್ನೂ ದಾಟಲು ಬಿಡದೆ ಮುಂಚಿತವಾಗಿಯೇ ಅವಘಡ ನಡೆದಿರುವುದು ಎಲ್ಲೋ ಒಂದು ಕಡೆ ಜನ ಇದು ಮಣ್ಣಿನಪವಾಡ ಪುರುಷರ ಶಕ್ತಿಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಘಟನೆಯ ಭೀಕರತೆ ಅದೆಷ್ಟಿತ್ತೋ ತಿಳಿದಿಲ್ಲ. ಆದರೆ ದುರಂತವನ್ನು ಇಷ್ಟರಲ್ಲಿಯೇ ಮುಗಿಸಿದ್ದು ಮಾತ್ರ ನಾವು ನಂಬಿಕೊಂಡುಬಂದಿರುವ ಜಾಗದ ಶಕ್ತಿಗಳು ಎನ್ನುತಾರೆ ಸ್ಥಳೀಯರು.ಇನ್ನು ದುರಾದೃಷ್ಟವಶಾತ್ ಅಂದುಪ್ರತಿದಿನದಂತೆ ಇದು ಕೂಡಾ ಬಾಡಿಗೆಎಂದುಕೊಂಡಿದ್ದ ಪ್ರಮಾಣಿಕ ಆಟೋ ಚಾಲಕಪುರುಷೋತ್ತಮ ಅವರಿಗೆ ಮಾತ್ರ ಕಾದಿತ್ತು ಆಶ್ಚರ್ಯ.

ತನ್ನ ರಿಕ್ಷಾದಲ್ಲಿ ಪ್ರಯಾಣಿಕನನ್ನು ಕರೆದುಕೊಂಡು ಚಲಾಯಿಸುತ್ತಿರುವಾಗಲೇ ದುರಂತ ನಡೆದಿದ್ದು ಅವರನ್ನಷ್ಟೇ ಅಲ್ಲದೆ ಅಲ್ಲಿದ್ದವರನ್ನುಒಂದು ಕ್ಷಣ ದಿಗ್ಭ್ರಮೆಗೊಳಿಸಿತ್ತು. ಕರಾವಳಿಯಲ್ಲಿ ಏನು ಆಗುತ್ತೆ ಅಂತ ಭಯ ಇತ್ತೋ ಅದು ಘಟಿಸಿತ್ತು.

ಆದರೆ ಕುಕ್ಕರ್ ಬಾಂಬ್ ಮಂಗಳೂರು ನಗರ ಪ್ರವೇಶಿಸಿ ಯಾವುದೋ ಜನ ನಿಬಿಡ ಪ್ರದೇಶ, ಶಾಲೆಗಳ ಪ್ರದೇಶಗಳಲ್ಲಿ ಶಾಕೀರಕೊಂಡಿ ಹೋಗಿ ಸ್ಪೋಟಿಸಿದ್ದರೆ ಅದರ ಪರಿಣಾಮ ಬಹುಷ ಯಾರು ಕೂಡ ಊಹಿಸಲಸಾಧ್ಯ.

ಅಂತಹ ಸಜೀವ ಸ್ಪೋಟಕಗಳಿಂದ ತುಂಬಿದ್ದ ಟೈಮರ್ ಫಿಕ್ಸ್ ಮಾಡಿದ್ದ ಕುಕ್ಕರ್ ಬಾಂಬ್ ಜೊತೆಯಲ್ಲಿ ಶಾಕಿರನನ್ನು ಕಾರಣಿಕದ ಗರಡಿಕ್ಷೇತ್ರದ ಅವಳಿ ವೀರರು ಆಚೆಗೆ ದಾಟಿ ಬರಲು ಬಿಡದೇ ಮೊದಲೇ ಸ್ಪೋಟಗೊಂಡಿದ್ದು ದೈವ ಸಂಕಲ್ಪವಾಗಿತ್ತು.

ಎರಡು ವರ್ಷಗಳ ಹಿಂದೆಯಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಮುಂದಿನ ದಿನಗಳಲ್ಲಿ ಮಗಳ ಮದುವೆಯನ್ನು ಎದುರುನೋಡುತ್ತಿದ್ದ ಪುರುಷೋತ್ತಮರ ಸ್ಥಿತಿ ಅವರ ಕುಟುಂಬಸ್ಥರ ಮನಸ್ಸನ್ನು ತಲ್ಲಣಗೊಳಿಸಿದೆ.

ಸಂಸಾರಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದ ಪುರುಷೋತ್ತಮರು ಇದೀಗ ಸ್ಪೋಟಗಳ ಗಾಯಗಳಿಂದ ಆಸ್ಪತ್ರೆಯ ಹಾಸಿಗೆ ಮೇಲೆಮಲಗಿದ್ದಾರೆ.

ಆಟೋ ಚಾಲಕ ಪುರುಷೋತ್ತಮ್ ಅವರು ವೃತ್ತಿಯಲ್ಲಿ ಚಾಲಕರಾಗಿದ್ದರೂ ಅಪಾರ ದೈವಭಕ್ತ. ಮಹಾಕಾಳಿ ಮತ್ತು ಕೊರಗಜ್ಜ ದೈವದಭಕ್ತ ಕೂಡಾ. ದೈವಕ್ಕೆ ಬೂಳ್ಯ ಕೊಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

ವಿಶೇಷ ದಿನಗಳು, ಸಂಕ್ರಾಂತಿ, ವಾರ್ಷಿಕ ದೇವರಾದನೆಯ ಸಂದರ್ಭದಲ್ಲಿ ದೈವದ ಚಾಕರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ದೈವಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಪುರುಷೋತ್ತಮ್ ಜೀವ ಉಳಿಸಿದೆ. ಇವರು ದುರಂತದಲ್ಲಿ ಪಾರಾಗಲು ಉಜ್ಜೋಡಿಯ ಮಹಾಕಾಳಿಕೊರಗಜ್ಜ ದೈವಗಳೇ ಕಾರಣ ಅಂತಪತ್ನಿ ಚಿತ್ರಾಕ್ಷಿ ಕಣ್ಣೀರಿಟ್ಟಿದ್ದಾರೆ.


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »