TOP STORIES:

ಸೌದಿ ಅರೇಬಿಯಾದ ಪ್ರಮುಖ ಆಹಾರ “ಕುಬ್ಬುಸು”


ತುತ್ತು ಅನ್ನ ತಿನ್ನೋಕೆ,ಬೋಗಸೆ ನೀರು ಕುಡಿಯೋಕೆ,ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ,ಅಂಗೈ ಅಗಲ ಜಾಗ ಸಾಕುಹಾಯಾಗಿರೋಕೆ ನಾ ಹಾಯಾಗಿರೋಕೆಇದು ಕನ್ನಡದ ಜನಪ್ರಿಯ ಚಲನಚಿತ್ರದ ಒಂದು ಹಾಡಿನ ಸಾಲು. ಹೌದು ಮನುಷ್ಯ ಭೂಮಿಯಲ್ಲಿ ಬದುಕಬೇಕಾದರೆ ನೀರು,ಗಾಳಿ, ಆಹಾರ, ಮತ್ತು ಬಟ್ಟೆ ಬೇಕೇ ಬೇಕು.ಆಹಾರವಿಲ್ಲದೆ ಮನುಷ್ಯ ಹೆಚ್ಚು ಕಾಲಬದುಕಲಾರ.ಪ್ರಪಂಚದ ಎಲ್ಲಾ ದೇಶಗಳು ತನ್ನದೇ ಆದ ಆಹಾರ ಪದ್ದತಿಯನ್ನು ಹೊಂದಿರುತ್ತದೆ. ಅದು ಅಲ್ಲಿಯವಾತಾವರಣ,ಸಂಸ್ಕೃತಿ,ಸಂಪ್ರದಾಯ, ಜಾತಿ ಮತ್ತು ಧರ್ಮಗಳಿಗೆ ಅನುಸಾರವಾಗಿ ವಿಕಸಿತವಾಗಿರುತ್ತದೆ.ಉದಾಹರಣೆಗೆ ನಮ್ಮಮಂಗಳೂರಿನ ಜನರು ಬೆಳಿಗ್ಗೆ ಇಡ್ಲಿ ಸಾಂಬಾರು ತಿಂದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನರು ಸಾಂಡ್ವಿಚ್ಚ್ ತಿನ್ನುತ್ತಾರೆ.ನಾವು ಮೀನುಸಾರು ಮಾಡಿದರೆ ಉತ್ತರ ಕರ್ನಾಟಕದ ಜನರು ಬೇಳೆ ಸಾರು ಮಾಡುತ್ತಾರೆ. ಪ್ರತಿಯೊಂದು ದೇಶದಲ್ಲಿಯೂ ತನ್ನದೇ ಆದ ವಿಶಿಷ್ಠಮತ್ತು ಹೆಸರುವಾಸಿಯಾದ ಆಹಾರ ಪದಾರ್ಥಗಳಿರುತ್ತದೆ.

(Copyrights owned by: billavaswarriors.com )

ಮಧ್ಯಪ್ರಾಚ್ಯ ದೇಶವಾದ ಸೌದಿ ಅರೇಬಿಯಾದ ಪ್ರಮುಖ ಆಹಾರ ಯಾವುದು ಅಂದರೆ ಅದು ಕುಬ್ಬುಸು ಕುಬ್ಬುಸು ಮೈದಾಗೋಧಿಯಿಂದ ತಯಾರಿಸುವ ಒಂದು ರೊಟ್ಟಿಯ ಆಕಾರದ ಆಹಾರ. ಸೌದಿ ಅರೇಬಿಯಾದ ಮಣ್ಣಲ್ಲಿ ಕಾಲಿಟ್ಟ ದಿನವೇ ನನ್ನಬಾಯಿಗೆ ಹೋದ ಮೊದಲ ಆಹಾರವೇ ಕುಬ್ಬುಸು. ಕುಬ್ಬುಸುನ್ನು  ಬಡವರ ಬಂಧು ಎಂದು ಕರೆದರು ತಪ್ಪಾಗಲಾರದು. ಯಾಕೆಂದರೆಅದು ಅತೀ ಕಡಿಮೆ ಬೆಲೆಗೆ ಸಿಗುವ ಮತ್ತು ಅತೀ ಹೆಚ್ಚು ಜನರು ಉಪಯೋಗಿಸುವ ಒಂದು ಉತ್ತಮ ಆಹಾರ. ಕುಬ್ಬುಸುನ್ನು ನನ್ನದೆಆದ ದ್ರಷ್ಟಿ  ಕೋನದಲ್ಲಿ ನೋಡಿದಾಗ ನನಗೆ ಅದು ಒಂದು ಬಹಳ ವಿಶಿಷ್ಠವಾದ ಹಾಗೂ ಅದ್ಬುತ ಆಹಾರದಂತೆ ಕಂಡು ಬಂದಿತು.

ತ್ಯಾಗದ ಸಂಕೇತವಾಗಿ ಕುಬ್ಬುಸು :   ನಿಮ್ಮಲ್ಲಿ ಈಗ ಒಂದು ಪ್ರಶ್ನೆ ಮೂಡಬಹುದು.ಅದು ಏನೆಂದರೆ ಕುಬ್ಬುಸಿಗೂ ತ್ಯಾಗಕ್ಕೂ ಸಂಬಂಧಏನು ಎಂದು.ಸಂಬಂಧ ಇದೆ.ಸೌದಿಯಲ್ಲಿ ಹೊಟ್ಟೆಪಾಡಿಗಾಗಿ ಉದ್ಯೋಗವನ್ನು ಹರಸಿ ಬಂದಂತಹ ಕಡಿಮೆ ವೇತನ ಪಡೆಯುವಕಾರ್ಮಿಕ ವಲಸಿಗರ ಸಂಖ್ಯೆಯೇ ಅತೀ ಹೆಚ್ಚು. ಅವರು ಮರುಭೂಮಿಯ ದೊಡ್ಡ ದೊಡ್ಡ ನಿರ್ಮಾಣ ಯೋಜನೆಗಳಲ್ಲಿ ಬಿಸಿಲುಚಳಿಯನ್ನು ಲೆಕ್ಕಿಸದೆ, ಕಿಕ್ಕಿರದ ಕ್ಯಾಂಪ್ ಗಳಲ್ಲಿ ನೆಲೆಸುತ್ತಾ.ದಿನಾ ತಾನು ಒಣ ಕುಬ್ಬುಸು ತಿಂದು ಊರಿನಲ್ಲಿ ತನ್ನನ್ನು ಆಶ್ರಯಿಸಿರುವತನ್ನ ಕುಟುಂಬದ ಸದಸ್ಯರು ಕನಿಷ್ಟ ಪಕ್ಷ ಮೂರು ಹೊತ್ತು ಚೆನ್ನಾಗಿ ಊಟ ಮಾಡಲಿ ಎಂಬ ಉದ್ದೇಶದಿಂದ ತನ್ನ ಎಲ್ಲಾ ಆಸೆಆಕಾಂಕ್ಷೆಗಳನ್ನು ತನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ. ಅಂದರೆ ಕುಬ್ಬುಸು ತ್ಯಾಗದ ಒಂದು ಸಂಕೇತ ಎಂದಾಯಿತು ಅಲ್ಲವೇ?

ಆರೋಗ್ಯದ ಸಂಕೇತವಾಗಿ ಕುಬ್ಬುಸು: ಕೈ ತುಂಬಾ ಸಂಬಳ ಇರುವ ಜನರು ಕೂಡಾ ಇಲ್ಲಿ ಕುಬ್ಬುಸಿನ ಮೊರೆ ಹೋಗುತ್ತಾರೆ. ಯಾಕೆಂದರೆ ಕುಬ್ಬುಸು ಒಂದು ಆರೋಗ್ಯದಾಯಕ ಆಹಾರ. ಇಲ್ಲಿನ ಜನರು ಫಾಸ್ಟ್ ಫುಡ್ಡಿನ ದಾಸರಾಗಿ ಮೈಯಲ್ಲಿ ಕೊಬ್ಬನ್ನುಬೆಳೆಸಿಕೊಂಡು,ರಕ್ತದ ಒತ್ತಡ ಹಾಗೂ ಸಕ್ಕರೆ ಕಾಯಿಲೆಗೆ ಗುರಿಯಾಗಿ,ಕೊಬ್ಬು, ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡಗಳನ್ನು ಕಡಿಮೆಮಾಡಲು ಕುಬ್ಬುಸಿನ ಮೊರೆಹೋಗುತ್ತಾರೆ.ಕೆಲವರು ತನ್ನವರು ಊರಿನಲ್ಲಿ ಸುಖವಾಗಿರಲಿ ಎಂದು ಆಹಾರವಾಗಿ ಕುಬ್ಬುಸುನ್ನುತಿಂದರೆ ಇನ್ನು ಕೆಲವರು ಬೇಕಾ ಬಿಟ್ಟಿ ತಿಂದು ಬೊಜ್ಜು ಕರಗಿಸಲು ಕುಬ್ಬುಸು ತಿನ್ನುವುದು ನಿಜವಾಗಲೂ ಒಂದು ವಿಪರ್ಯಾಸ.

ಕೊನೆಯಾದಗಿ ಒಂದು ಮಾತು, ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ  ಅತೀ ಮುಖ್ಯವಾದದ್ದು .ಆಹಾರವನ್ನುಮಿತವಾಗಿ ಹಾಗೂ ಹಿತವಾಗಿ ಸೇವಿಸಬೇಕು. ನಾವಿಂದು ತಿಂದು ತೇಗಿ ಆಹಾರವನ್ನು ಚೆಲ್ಲುತ್ತಾ ಇದ್ದೇವೆ.ಆದರೆ ಇಂದಿಗೂ ಅದೆಷ್ಟೋಜನರು ಒಪ್ಪೋತ್ತೀನ ಊಟಕ್ಕಾಗಿ ಪರಿತಪಿಸುತ್ತಾ ಇದ್ದಾರೆ.ಆದುದರಿಂದ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ಮಿತವಾಗಿಸೇವಿಸೋಣ.ಸೌದಿಯಲ್ಲಿ ಸಿಗುವ ಕುಬ್ಬುಸು ಅಂತಹ ಆಹಾರಗಳಲ್ಲಿ ಒಂದು.ಇಂತಹ ಒಂದು ಅದ್ಭುತವಾದ ಆಹಾರವನ್ನು ನೀಡಿದ್ದಕ್ಕೆನಿಜವಾಗಿಯೂ ನಾವೆಲ್ಲಾ ಇಲ್ಲಿನ ಮಣ್ಣಿಗೆ ಋಣಿಯಾಗಲೇ ಬೇಕು. ಇಡೀ ಪ್ರಪಂಚವೇ ಬೆಲೆಯೇರಿಕೆಯ  ಸುಳಿಗೆ ಸಿಕ್ಕಿದರೂ, ಕೇವಲಒಂದೇ ರಿಯಾಲಿಗೆ ಒಂದು ಕಟ್ಟು ಕುಬ್ಬುಸುನ್ನು ನೀಡುತ್ತಿರುವ ಇಲ್ಲಿನ ಸರಕಾರಕ್ಕೆ ನನ್ನದೊಂದು ಸಲ್ಯೂಟ್.

✍ ಲೇಖನ: ನಾಗರಾಜ್  ಅಂಚನ್ ಬಜಾಲ್


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »