TOP STORIES:

ಈ ಮನೆಮದ್ದುಗಳನ್ನು ಫಾಲೋ ಮಾಡಿ, ಬಿಳಿ ಗಡ್ಡ ಮತ್ತೆ ಕಪ್ಪಾಗುತ್ತದೆ ನೋಡಿ…


ವಯಸ್ಸಿನ್ನೂ ಸಣ್ಣದಿರುತ್ತದೆ, ಆದರೆ ಕೂದಲು ಬೆಳ್ಳಗಾಗುವುದರ ಜೊತೆಗೆ, ಗಡ್ಡಮೀಸೆಯಲ್ಲಿ ಕೂಡ ಬಿಳಿ ಕೂದಲು ಅಲ್ಲಲ್ಲಿಇಣುಕುತ್ತಿರುತ್ತದೆ! ಸಮಸ್ಯೆ ಇರುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

ಕೆಲವರಿಗೆ ಮುಖದಲ್ಲಿ ಗಡ್ಡಮೀಸೆ ಇದ್ದರೆ, ನೋಡಲು ಚೆನ್ನಾಗಿ ಕಾಣುತ್ತಾರೆ. ಇನ್ನೂ ಕೆಲವರಿಗೆ ಗಡ್ಡ ಮೀಸೆ ಇಲ್ಲದಿದ್ದರೆ, ನೋಡಲುಜೆಂಟಲ್ ಮೆನ್ ರೀತಿಯಾಗಿ ಕಾಣುತ್ತಾರೆ. ಆದರೆ ಇತ್ತೀಚಿನ ಫ್ಯಾಷನ್ ತಕ್ಕ ಹಾಗೆ ಪುರುಷರು, ಒಮ್ಮೆ ಗಡ್ಡ ಮೀಸೆ ಬೆಳೆಸಿದರೆ, ಇನ್ನೊಮ್ಮೆ, ಕ್ಲೀನ್ ಶೇವ್ ಮಾಡಿ ಕೊಂಡು ಬಿಡುತ್ತಾರೆ. ಆದರೆ ಕೆಲವರಿಗೆ ಗಡ್ಡ ಮೀಸೆ ಬಿಡಲು ಇಷ್ಟವಿರುತ್ತದೆ, ಆದರೆ ಏನುಮಾಡುವುದು, ಅಲ್ಲಲ್ಲಿ ಇಣುಕುವ ಬಿಳಿ ಕೂದಲಿನ ಸಮಸ್ಯೆಗಳಿಂದಾಗಿ, ನೀಟ್ ಆಗಿ ಶೇವಿಂಗ್ ಮಾಡಿ ಬಿಡುವುದೇ ಲೇಸುಎಂದು ಭಾವಿಸುತ್ತಾರೆ.

ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನ ಶೈಲಿಯ ಜೊತೆಗೆ ದೇಹದಲ್ಲಿಆದ ಕೆಲವೊಂದು ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ, ಪುರುಷರಲ್ಲಿ ಗಡ್ಡಮೀಸೆ ಬೆಳ್ಳಗಾಗುವ ಸಮಸ್ಯೆಎದುರಾಗುತ್ತದೆ. ಹಾಗಂತ ಇದನ್ನು ಮುಚ್ಚಿಡಲು ದಿನನಿತ್ಯ ಶೇವಿಂಗ್ ಮಾಡಲು ಆಗುತ್ತದೆಯಾ? ಇದು ಖಂಡಿತವಾಗಿಯೂ ಆಗುಹೋಗುವಂತಹ ಮಾತಲ್ಲ!

ಹಾಗಾದ್ರೆ ಇದಕ್ಕೆ ಪರಿಹಾರವೇ ಇಲ್ಲವೇ ಎನ್ನುವ ನಿಮ್ಮ ಪ್ರಶ್ನೆಯಾಗಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿಸ್ವಲ್ಪ ತಾಳ್ಮೆಯಿಂದಕೆಲವೊಂದು ಮನೆ ಮದ್ದುಗಳಿಂದ ಪ್ರತಿನಿತ್ಯ ಅನುಸರಿಸಿಕೊಂಡು ಹೋದರೆ, ಖಂಡಿತವಾಗಿಯೂ ಸಮಸ್ಯೆ ಯನ್ನು ಯಾವುದೇಅಡ್ಡಪರಿಣಾಮಗಳು ಇಲ್ಲದೆ ಶಾಶ್ವತವಾಗಿ ನಿವಾರಿಸಿಕೊಳ್ಳಬಹುದು.

      ಮೊದಲಿಗೆ ಒಂದೆರಡು ಟೇಬಲ್ ಚಮಚ ಆಗುವಷ್ಟು ಬಿಳಿ ಎಳ್ಳನ್ನುರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಹಾಕಿ.

  • ಇನ್ನು ಮರುದಿನ ನೆನೆಸಿಟ್ಟ ಬಿಳಿ ಎಳ್ಳನ್ನು ಮಿಕ್ಸರ್ ಜಾರ್‌ನಲ್ಲಿ, ನೆನೆಸಿಟ್ಟ ನೀರಿನ ಸಮೇತ ಹಾಕಿಕೊಂಡು, ಚೆನ್ನಾಗಿ ರುಬ್ಬಿಕೊಳ್ಳಿ. ಸ್ವಲ್ಪ ದಪ್ಪಗೆ ಪೇಸ್ಟ್ ರೀತಿಯಾಗಿ ಮಾಡಿಕೊಂಡರೆ ಒಳ್ಳೆಯದು.
  • ಇನ್ನು ನಿಮ್ಮ ಗಡ್ಡ ಇಲ್ಲಾಂದ್ರೆ ಮೀಸೆಯ ಯಾವ ಭಾಗದಲ್ಲಿ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆ ಕಂಡುಬರತ್ತಿದೆಯೋಅಲ್ಲಿಗೆಲ್ಲಾ ಪೇಸ್ಟ್ ನ್ನು ದಪ್ಪಗೆ ಹಚ್ಚಿ.
  • ನಂತರ ಸುಮಾರು ಅರ್ಧ ಗಂಟೆಯವರೆಗೆ ಹಾಗೆಯೇ ಒಣಗಲು ಬಿಡಿ, ನಂತರ ನೀರಿನಿಂದ ತೊಳೆಯಿರಿ. ಉತ್ತಮಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಮನೆಮದ್ದನ್ನು ಟ್ರೈ ಮಾಡಿ ನೋಡಿ
  • ಬೇಗಾಗುವ ಸಾಮಾಗ್ರಿಗಳು
  • ಒಂದು ಕಪ್ ಆಗುವಷ್ಟು ಮೆಹಂದಿ ಎಲೆಗಳು
  • ಒಂದು ಟೇಬಲ್ ನಿಂಬೆ ರಸ
  • ಒಂದು ಟೇಬಲ್ ಟೇಬಲ್ ಚಮಚದಷ್ಟು ತೆಂಗಿನ ಎಣ್ಣೆ
  • ಒಂದು ಟೇಬಲ್ ಟೇಬಲ್ ಚಮಚದಷ್ಟು ವಿನೆಗರ್
  • ಒಂದು ಟೇಬಲ್ ಚಮಚದಷ್ಟು ಸೀಗೆಕಾಯಿ ಪುಡಿ

ತಯಾರು ಮಾಡಿ ಬಳಸುವ ವಿಧಾನ

  • ಮೊದಲಿಗೆ ನೀಡಿರುವ ಎಲ್ಲಾ ನೈಸರ್ಗಿಕ ಪದಾರ್ಥಗಳನ್ನು ಒಂದು ಬೌಲ್‌‌ನಲ್ಲಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ಮಾಡಿಕೊಳ್ಳಿ. ಆಮೇಲೆ ಇವುಗಳನ್ನು ಸಣ್ಣ ಮಿಕ್ಸಿ ಜಾರ್‌ಗೆ ಹಾಕಿ, ಚೆನ್ನಾಗಿ ರುಬ್ಬಿ ಕೊಂಡು ಪೇಸ್ಟ್ ರೀತಿಯಾಗಿ ಮಾಡಿಕೊಳ್ಳಿ. ಆಮೇಲೆ ಇದನ್ನು ಇನ್ನೊಂದು ಪಾತ್ರೆಗೆ ವರ್ಗಾಹಿಸಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
  • ಇನ್ನು ಪೇಸ್ಟ್‌ನ್ನು ಗಡ್ಡ ಅಥವಾ ಮೀಸೆಯಲ್ಲಿ ಕಂಡುಬರುವ ಬಿಳಿ ಕೂದಲಿನ ಸಮಸ್ಯೆ ಇರುವ ಕಡೆಗೆಲ್ಲಾ ಹಚ್ಚಿ, ಸುಮಾರು ಅರ್ಧ ಗಂಟೆಗಳವರೆಗೆ ಹಾಗೆಯೇ ಬಿಡಿ. ಆಮೇಲೆ ತಣ್ಣೀರಿನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿವಾರದಲ್ಲಿ ಎರಡು ಮೂರು ಬಾರಿಯಾದರೂ ಮನೆಮದ್ದನ್ನು ಟ್ರೈ ಮಾಡಿ ನೋಡಿ.

ತೆಂಗಿನ ಎಣ್ಣೆ ಮತ್ತು ನಿಂಬೆರಸ

  • ಒಂದು ಬೌಲ್‌ಗೆ ಶುದ್ಧ ಒಂದೆರಡು ಚಮಚ ತೆಂಗಿನ ಎಣ್ಣೆ ಹಾಗೂ ಒಂದು ಚಮಚ ನಿಂಬೆರಸವನ್ನು ಹಾಕಿ ಚೆನ್ನಾಗಿಮಿಕ್ಸ್ ಮಾಡಿಕೊಳ್ಳಿ.
  • ನಂತರ ಗಡ್ಡ ಅಥವಾ ಮೀಸೆಯ ಭಾಗದಲ್ಲಿ ಅಲ್ಲಲ್ಲಿ ಇಣುಕುತ್ತಿರುವ, ಬಿಳಿ ಕೂದಲಿಗೆ ಮಿಶ್ರಣವನ್ನು ಹಚ್ಚಿ. ಸುಮಾರು ಒಂದೆರಡು ಗಂಟೆಗಳವರೆಗೆ ಹಾಗೆಯೇ ಬಿಡಿ, ಆಮೇಲೆ, ಗಡ್ಡಮೀಸೆಯ ಕೂದಲನ್ನು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಮೂರು ನಾಲ್ಕು ಬಾರಿ ಪ್ರಕ್ರಿಯೆಯನ್ನು ಮುಂದುವರೆಸಿ.

ಬ್ಲ್ಯಾಕ್ ಟೀ ಎಲೆಗಳು

  • ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ, ಚೆನ್ನಾಗಿ ಕುದಿಸಿಕೊಳ್ಳಿ. ಆಮೇಲೆ ಕುದಿ ಬಂದಿರುವ ನೀರಿಗೆ ಸ್ವಲ್ಪ ಬ್ಲ್ಯಾಕ್ಟೀ ಎಲೆಗಳನ್ನು ಹಾಕಿ, ಇನ್ನೊಮ್ಮೆ ಎರಡು ಮೂರು ನಿಮಿಷಗಳವರೆಗೆ ಕುದಿಸಿಕೊಳ್ಳಿ. ಆಮೇಲೆ ಗ್ಯಾಸ್ ಸ್ಟೌವ್ ಅಫ್ ಮಾಡಿ, ನೀರನ್ನು ತಣಿಯಲು ಬಿಡಿ.
  • ಒಮ್ಮೆ ನೀರು ತಣಿದ ಬಳಿಕ, ಬ್ಲ್ಯಾಕ್ ಟೀ ಎಲೆಗಳಿಂದ, ನೀರನ್ನು ಚೆನ್ನಾಗಿ ಹಿಂಡಿ ತೆಗೆಯಿರಿ, ಆಮೇಲೆ ನೀರನ್ನು ಗಡ್ಡದ ಬಿಳಿ ಕೂದಲುಗಳ ಮೇಲೆ ಹಚ್ಚಿ, ಸುಮಾರು ಒಂದೆರಡು ಗಂಟೆಗಳವರೆಗೆ ಹಾಗಯೇ ಬಿಡಿ. ಆಮೇಲೆತಣ್ಣನೆಯ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.

Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »