TOP STORIES:

ಎಪ್ರಿಲ್ ತಿಂಗಳ ಅಕ್ಷಯ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ : ರೈಲು


ರೈಲು

ಎಲ್ಲರಂತಲ್ಲ ನಾನು…

ಬಯಲ ಬೆಳಕಿನಲ್ಲಿ ಕತ್ತಲು ಕೊರೆಯುವಲ್ಲಿ

ಓಡಬೇಕು; ಓಡುತ್ತಲೇ ಇರಬೇಕು

ಅಬ್ಬರದಿ ಬಂದೆರಗುವ ಜನಸಾಗರಕೆ ತೀರವಾಗಬೇಕು

  ಶಾಂತವಾಗಿ ನಿರ್ವಾಹವಾಗಿ ಜೀವಜೀವಗಳ  ನಿಜಬಂಧುವಾಗಿ

ತುಂಬಿಕೊಂಡಂತೆ ಖಾಲಿಯಾಗುತ್ತಲೇ ಇರಬೇಕು

ಜೀವನದ ಇತಿಮಿತಿಯಲಿ ಗತಿ ತಿರುಗಿದಂತೆ

ಹಳಿಗಳೂ ಬದಲಾಗುತ್ತವೆ, ಎಲ್ಲೋ ಕವಲೊಡೆದು ಇನ್ನೆಲ್ಲೋ ಕೂಡುತ್ತವೆ

ಉದ್ವೇಗ ಉನ್ಮಾದಗಳ ಬದಿಗೊತ್ತಿ ನಯನಾಜೂಕಿನಲಿ ನಡೆಯಬೇಕು

ಕೆಂಪು ನಿಶಾನೆಯೆದುರು ಸಮಾಧಾನಿಯಾಗಿರಬೇಕು

ಎಲ್ಲರಂತಲ್ಲ ನಾನು

ಕನಸಿಗೆ ಕಚಗುಳಿಯಿಟ್ಟು ನೂಕುವ ರಾಯಭಾರಿಯಾಗಬೇಕು

ಚಿಣ್ಣರ ಕೇಕೆ, ಹರೆಯದ ಬಯಕೆ, ಇಳಿವಯಸ್ಸಿನ ಬೇಗೆಗೆ

ನಿತ್ಯವೂ ಹೊಸ ಆಹ್ಲಾದವನೀಯುತ ಭರವಸೆಯ ಬೆಳಕಾಗಬೇಕು

ಮುಗ್ಗರಿಸಿದವರ ನೋವಿಗೆ  ಸಾಂತ್ವನವಾಗಬೇಕು

ಅರಿವಿನ ಅರವಟಿಗೆಯಲಿ ಒಡಲು ಗಟ್ಟಿಯಾಗುತಿರಬೇಕು

ನವರಸ ಭಾವ ವಿಭಾವಗಳ ತಾಳಮೇಳದೊಳಗೆ

ಕೋಟಿ ಮನಸ್ಸುಗಳು ಹರಿಯುವುದು ನನ್ನೊಳಗೆ

ಸ್ವರ ವ್ಯಂಜನದೊಳು ಮೂಡಿದ ಬಿರುಕಿಗೆ ತೇಪೆ ಹಾಕಿ

ಸಮರಸ ಸಂಧಾನದ ಉಸಿರು ಚೆಲ್ಲಿ ಮುಂದಡಿಯಿಡಬೇಕು

ನನ್ನಾಂತರ್ಯದೊಳಿರುವ ಪ್ರೇಮ, ವಿರಹ ಗೀತೆಗಳೆಷ್ಟೋ…!

ಕಣ್ಣಂಜಿಕೆಗೆ ಮುಖ ಮರೆಸಿ ಕೂತ ಗುಟ್ಟುಗಳೆಷ್ಟೋ…!

ಯುಗಯುಗಾಂತರದಲಿ ಘಟಿಸಿ ಹೋದ ಕತೆಗಳಲೂ

ಮುಖ್ಯ ಪಾತ್ರಧಾರಿ, ಪರಮ ಸೂತ್ರಧಾರಿಯೂ ನಾನೇ

ಎಲ್ಲರಂತಲ್ಲ ನಾನು

ಸಾಗುತ್ತಲೇ ಇರಬೇಕು

ನಿಂತರೆ ಸ್ತಬ್ದವಾಗಬಹುದಲ್ಲವೇ ಯಾನ…!

ನಗರದ ನರನಾಡಿಗಳಲಿ ಪವಹಿಸಿ ಪಥಿಕರ ಗಮ್ಯವಾಗಬೇಕು

ನಿತ್ಯ ಪಥದ ಧ್ಯಾನಿಯಾಗಬೇಕು.

✍🏻 ಅನಿತಾ ಪಿ. ತಾಕೊಡೆ


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »