TOP STORIES:

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ನಲ್ಲಿ ನಡೆಯಿತು.

ಮೇಜರ್ ದಾಮೋದರ್ ಸುವರ್ಣ ಯೆಯ್ಯಾಡಿ ಇವರು
ರಾಷ್ಟ್ರ ಧ್ವಜಾರೋಹಣ ಗೈದು ದೇಶದ ಸ್ವಾತಂತ್ರ್ಯ ತ್ಯಾಗ ಬಲಿದಾನದ ಮೂಲಕ ಲಭಿಸಿದೆ.ಕಾನೂನು ಪರಿಪಾಲನೆ ಜತೆಗೆ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಅನುಭವಿಸಬೇಕು. ದೇಶದ ಏಳಿಗೆಗಾಗಿ ಕೊಡುಗೆ ನೀಡಬೇಕೆಂದರು.

ಸಹನಾ ಕುಂದರ್ ಸೂಡಾ ಮಾತನಾಡಿ, ದೇಶದಲ್ಲಿ ನಮ್ಮ ಯುವ ಸಮೂಹಕ್ಕೆ ಸ್ವಾತಂತ್ರದ ಅರ್ಥಪೂರ್ಣ ಆಚರಣೆ ಹಾಗೂ ಮಹಿಳಾ ಸಮಾಜದ ಮೇಲೆ ನಡೆಯುತ್ತಿರುವ ಅನಾಚಾರವನ್ನು ತಡೆಗಟ್ಟಲು ಬೇಕಾದ ಸೂಕ್ತ ಮಾರ್ಗದರ್ಶನದ ಅಗತ್ಯವಿದ್ದು ಇದನ್ನು ನಾವೆಲ್ಲಾ ಪರಿಗಣಿಸಿ ಜೀವನ ನಡೆಸಬೇಕು ಎಂದರು.

ಬಿರುವೆರ್ ಕುಡ್ಲದ ಯುವಕರ ಸಮೂಹವು ಕಳೆದ ಹತ್ತು ವರ್ಷಗಳಿಂದ ಯಾವುದೇ ಜಾತಿ ಮತ ವನ್ನು ನೋಡದೆ ಬಡ ವರ್ಗಕ್ಕೆ ಆರ್ಥಕ ನೆರವು ಹಾಗೂ ಅರ್ಹ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುತ್ತಿರುವ ಪುಣ್ಯದ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಇದರ ಜತೆಗೆ ಬಿರುವೆರ್ ಕುಡ್ಲವು ಜನಪರ ಸಮಾಜ ಸೇವಾ ಕಾರ್ಯ ನಡೆಸುತ್ತಾ ಬರುತ್ತಿದೆ.

ಈ ಸಂಸ್ಥೆ ಅಸ್ಥಿತ್ವಕ್ಕೆ ಬಂದಾಗಿನಿಂದ ಸುಮಾರು 10 ಕೋ.ರೂಗಳಷ್ಟು ನಿಧಿಯನ್ನು ಅಶಕ್ತರ ಚಿಕಿತ್ಸೆಗೆ, ಶಿಕ್ಷಣಕ್ಕೆ, ವಿವಿಧ ಸವಲತ್ತು ವಿತರಣೆಗೆ ನೀಡಿದೆ.

ಆಂಬುಲೆನ್ಸ್ ಸೇವೆ,ಕೊರೊನಾ ಸಂದರ್ಭ ನೆರವು ಹಾಗೂ ಇದೀಗ 9ನೇ ಮನೆ ನಿರ್ಮಾಣ ಮಾಡಿ ಬಡ ವರ್ಗಕ್ಕೆ ಶೀಘ್ರ ಹಸ್ತಾಂತರ ಮಾಡಲಿದೆ.ಇದೆಲ್ಲಾ ಇತರ ಸಂಘಟನೆಗಳಿಗೆ ಮಾದರಿಯಾಗಿದೆ.

ಪ್ರಮೋದ್ ಬಳ್ಳಾಲ್ ಭಾಗ್, ಲತೀಶ್ ಪೂಜಾರಿ ಬಳ್ಳಾಲ್ ಭಾಗ್,ವಿದ್ಯಾ ರಾಕೇಶ್ ಪ್ರವೀಣ್ ಎಸ್ ಸುವರ್ಣ ಬಗಂಬಿಲ
ಧನ್ ರಾಜ್ ಪೂಜಾರಿ ಚಿಲಿಂಬಿ, ಜಿತೇಶ್ ಜೈನ್,ದರ್ಶನ್ ಜೈನ್,ಜೀವನ್ ತಲ್ವಾರ್ ಸತೀಶ್ ಪೂಜಾರಿ ಅಶೋಕ ನಗರ,
ರಾಮ್ ಎಕ್ಕೂರು,ರಾಕೇಶ್ ಚಿಲಿಂಬಿ, ಮನೋಜ್ ಶೆಟ್ಟಿ ಚಿಲಿಂಬಿ, ರೇನಿತ್ ರಾಜ್ ,ಹರೀಶ್ ಹೊಯ್ಗೆ ಬೈಲ್
ಗಿರೀಶ್ ಬತ್ತೇರಿ,ಗೌತಮ್ ಬತ್ತೇರಿ, ಪ್ರಜ್ವಲ್ ಶೆಟ್ಟಿ ಕಾಪು,
ಸುನಿಲ್ ಶೆಟ್ಟಿ ಬಳ್ಳಾಲ್ ಭಾಗ್,ರಮೇಶ್ ಬಿಜೈ,
ಕೃಷ್ಣಪ್ಪ ನಾಯಕ್,ಗಿರಿರಾಜ್ ಕೋಟ್ಯಾನ್
ವಿಶ್ವನಾಥ್ ಭವಾನಿ, ಕಿಶೋರ್ ಬಾಬು,
ಯತೀಶ್ ಬಳ್ಳಾಲ್ ಭಾಗ್,ಕಿರಣ್ ಬಂಟ್ವಾಳ, ಕಿಶೋರ್ ಉಡುಪಿ,ರಾಜೇಶ್ ಬೆಳ್ತಂಗಡಿ,
ಅಶೋಕ ಕಾಂಚನ್(ಕ್ವಾಲಿಟಿ ಬೇಕರಿ)
ಲತೀಶ್ ವಾಮಂಜೂರ್, ಪ್ರಶಾಂತ್ ಬಜ್ಪೆ
ರೋಹಿದಾಸ್ ಕದ್ರಿ,ರಾಜೇಶ್ ಉರ್ವ,
ಮಹೇಶ್ ಅಶೋಕ ನಗರ,ಗಣೇಶ್ ಆಕಾಶ್ ಭವನ
ಪ್ರವೀಣ್ ಅಂಬು,ದಿನಿಲ್ ಅಶೋಕ ನಗರ ಉಪಸ್ಥಿತರಿದ್ದರು.


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »