TOP STORIES:

ಬೆಳ್ತಂಗಡಿ ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ


ಬೆಳ್ತಂಗಡಿ: ವಿಜಯವಾಣಿ, ಕರಾವಳಿ ಅಲೆ ,ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಭುವನೇಂದ್ರ ಪುದುವೆಟ್ಟು(42ವ)ರವರು ನ.19ರಂದು ನಿಧನರಾಗಿದ್ದಾರೆ.

ಪುಡುವೆಟ್ಟು ನಿವಾಸಿ ನಾರಾಯಣ ರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನ.19ರಂದು ಕೊನೆಯುಸಿರೆಳೆದಿದ್ದಾರೆ.

ಕರಾವಳಿ ಅಲೆ, ವೆಬ್‌ದುನಿಯಾ, ಕಸ್ತೂರಿ ಚಾನೆಲ್, ವಿಜಯವಾಣಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಭುವನೇಂದ್ರ ಪುದುವೆಟ್ಟು ಅವರು ಕೆಲವು ಸಮಯಗಳಿಂದ ಬೆಳ್ತಂಗಡಿ .. ಮೃತರು ತಂದೆ ನಾರಾಯಣ ಪೂಜಾರಿ, ತಾಯಿ ಮೋಹಿನಿ, ಪತ್ನಿ ಸುಜಾತ, ಈರ್ವರು ಪುಟ್ಟ ಮಕ್ಕಳು ಮತ್ತು ಸಹೋದರ ಯತೀಂದ್ರ ಅವರನ್ನು ಅಗಲಿದ್ದಾರೆ. ಭುವನೇಂದ್ರ ಅವರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ ಮಂಗಳೂರು ಆಸ್ಪತ್ರೆಯಿಂದ ಪುದುವೆಟ್ಟು ಮನೆಗೆ ಕರೆ ತಂದು ಅಂತಿಮ ವಿಧಿವಿಧಾನ ನಡೆಯಲಿದೆ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »