TOP STORIES:

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ

4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ

ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200 ಕ್ಕೂ ಹೆಚ್ಚು ಸ್ವಾಮೀಜಿಯವರ ಭಕ್ತವೃಂದ ಭಾಗಿ

ರೂ 15 ಕೋಟಿ ವೆಚ್ಚದಲ್ಲಿ, 35 ಸಾವಿರ ಚದರಡಿಯ 4 ಅಂತಸ್ತಿನ ಭವನ,ಸತ್ಸಂಗ ಹಾಲ್,ಮೀಟಿಂಗ್ ಹಾಲ್,ಸ್ವಾಮೀಜಿಯ ಕೊಠಡಿ,ವಿವಿಐಪಿ,ವಿಐಪಿ ರೂಮ್,ಲಿಪ್ಟ್ ಸೌಲಭ್ಯ, ಮಲ್ಟಿ ಪರ್ಪಸ್ ಹಾಲ್ ನಿರ್ಮಾಣ

ಬೆಳ್ತಂಗಡಿ: ವಿಶ್ವದ ಕೋಟ್ಯಾಂತರ ಭಕ್ತರ ಶ್ರದ್ದಾಕೇಂದ್ರ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಅತಿ ಸುಂದರವಾದ ದೇಗುಲ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಇಡೀ ಜಗತ್ತಿಗೆ ಸಂತೋಷವನ್ನುಂಟುಮಾಡಿದೆ.

ಇಂತಹ ಪುಣ್ಯಕ್ಷೇತ್ರದ ಪಕ್ಕದಲ್ಲಿ ದಕ್ಷಿಣದ ಅಯೋಧ್ಯೆಯೆಂದು ಖ್ಯಾತಿ ಹೊಂದಿದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ನ ಶಾಖಾ ಮಠಕ್ಕೆ

ಕನ್ಯಾಡಿ ಶ್ರೀರಾಮ ಕ್ಷೇತ್ರದ  ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ನೇತೃತ್ವದಲ್ಲಿ

ಅಯೋಧ್ಯೆಯಲ್ಲಿ ಭೂಮಿ ಪೂಜೆ ಹಾಗೂ ಶಿಲಾನ್ಯಾಸವು ಮೇ 19 ರಂದು ನಡೆಯಿತು.

ಸುಮಾರು ರೂ 15 ಕೋಟಿ ವೆಚ್ಚದಲ್ಲಿ, 35 ಸಾವಿರ ಚದರಡಿಯಲ್ಲಿ 4 ಅಂತಸ್ತಿನ ಭವನ ನಿರ್ಮಾಣ.ಶಾಖಾ ಮಠದಲ್ಲಿ ಸತ್ಸಂಗ ಹಾಲ್,ಮೀಟಿಂಗ್ ಹಾಲ್,ಸ್ವಾಮೀಜಿಯ ಕೊಠಡಿ,ಡೈನಿಂಗ್,ಕಿಚನ್,ವಿವಿಐಪಿ,ವಿಐಪಿ ರೂಮ್,ಲಿಪ್ಟ್ ಸೌಲಭ್ಯ, ಮಲ್ಟಿ ಪರ್ಪಸ್ ಹಾಲ್ ನಿರ್ಮಾಣವಾಗಲಿದೆ.

ಭೂಮಿ ಪೂಜೆಯಲ್ಲಿ ಅನೇಕ ವಿಭೂತಿ ಪುರುಷರು, ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ನೇತಾರರು ಭಾಗವಹಿಸಿದರು. ಭಾಗವಹಿಸುವ ಪ್ರಧಾನ ವಿಭೂತಿ ಪುರುಷರಾದ  ಆಚಾರ್ಯ ಮಾಹಾಮಂಡಲೇಶ್ವರ 1008 ಅವದೇಶಾನಂದ ಗಿರಿಜೀ ಮಹಾರಾಜ್ ಪಂಚದಶನಾಮ್ ಜುಣಾ ಅಖಾಡ,  ಮಹಂತ್ ವಿದ್ಯಾನಂದ ಸರಸ್ವತಿಜೀ ಮಹಾರಾಜ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಪಂಚದಶನಾಮ್ ಜುನಾ ಅಖಾಡ.,  ಮಹಂತ್ ಡಾ| ಸ್ವಾಮಿ ಭರತ್ ದಾಸ್‌ಜೀ ಮಹಾರಾಜ್ ಉದಾಸೀನ್ ಸಂಘತ್ ಋಷಿ ಆಶ್ರಮ್  ರಾಣೋಪಾಲಿ ಅಯೋಧ್ಯೆ,ಮಹಂತ್ ದೇವಾನಂದ್ ಸರಸ್ವತಿಜೀ ಮಹಾರಾಜ್ ಸಚಿವ ಶ್ರೀ ಪಂಚದಶನಾಮ್ ಜುನಾ ಅಖಾಡ ಹರಿದ್ವಾರ,ಮಹಂತ್ ಸುರೇಶ್ ದಾಸ್‌ಜೀ ಮಹಾರಾಜ್ ದಿಗಂಬರ ಅಖಾಡ ಅಯೋಧ್ಯೆ., ಮಹಂತ್ ಕಮಲನಯನ್ ದಾಸ್‌ಜೀ ಮಹಾರಾಜ್ ಚೋಟಿ ಚಾವಣಿ ಅಯೋಧ್ಯೆ,  ಮಹಂತ್ ಅವದೇಶ್ ದಾಸ್‌ಜೀ ಮಹಾರಾಜ್ ಬಡಾಭಕ್ತಮಹಲ್ ಅಯೋಧ್ಯಾಧಾಮ್,  ಮಹಂತ್ ರಾಜ್‌ಕುಮಾರ್ ದಾಸ್‌ಜೀ ಮಹಾರಾಜ್ ರಾಮವಲ್ಲಭ ಕುಂಜ ಅಯೋಧ್ಯಾಧಾಮ್,  ಮಹಂತ್ ಸಂಜಯ್ ದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್,  ಮಹಂತ್ ರಾಜೂದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್,ಸಚಿವ ಮಾಂಕಲ್ ವೈದ್ಯ,ಶಾಸಕ ಹರೀಶ್ ಪೂಂಜ,ನಿವೃತ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್,ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಕಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ,ನಿವೃತ ಎಸ್.ಪಿ ಪೀತಾಂಬರ ಹೆರಾಜೆ,ಉದ್ಯಮಿಗಳಾದ ಸತೀಶ್ಚ್ಚಂದ್ರ ಸಾಲಿಯಾನ್ ಪಾಣಿಲ, ಕರುಣಾಕರ ಸುವರ್ಣ,ಪ್ರಮುಖರಾದ ಜಯಂತ್ ಕೋಟ್ಯಾನ್,ಪ್ರೀತಮ್ ಧರ್ಮಸ್ಥಳ,ಶಶಿರಾಜ್ ಶೆಟ್ಟಿ ಜಿ.ಕೆ,ರತ್ನಾಕರ ಬುಣ್ಣನ್,ರಾಜೇಶ್ ಮೂಡುಕೋಡಿ,ಪ್ರೇಮ ಉಮೇಶ್, ಸುಜಾತ ಅಣ್ಣಿ ಪೂಜಾರಿ,ಸಹಕಾರಿ ಅಭಿವೃದ್ದಿ ಅಧಿಕಾರಿ ಪ್ರತೀಮಾ,ರವೀಂದ್ರ ಅರ್ಲ,ತುಕರಾಮ್,ಸೀತರಾಮ ಬೆಲಾಲು,ಜನಾರ್ಧನ ಕುಕ್ಕೇಡಿ,ಜಯಾನದ ಕಲ್ಲಾಪು,ಮಹೇಶ್ ಬಾಯಾರ್,ಯೋಗೀಶ್ ಕೊಕ್ಕಡ,ಹರೀಶ್ ಕಳೆಂಜ,ಸುನಿಲ್ ಉಪ್ಪಿನಂಗಡಿ,ಮಂಜುನಾಥ ಸಾಲಿಯಾನ್, ಮಹಾಬಲ,ಪ್ರವೀಣ್ ಫೆರ್ನಾಂಡೀಸ್ ಉಜಿರೆ,ಬೆಳ್ತಂಗಡಿ ಪತ್ರಕರ್ತರರಾದ ಮನೋಹರ್ ಬಳಂಜ,ಸಂತೋಷ್ ಪಿ ಕೋಟ್ಯಾನ್,ಚೈತ್ರೇಶ್ ಇಳಂತಿಳ,ದೀಪಕ್ ಅಠವಳೆ,ಜಾರಪ್ಪ ಪೂಜಾರಿ,ಭುವನೇಶ್ ಗೇರುಕಟ್ಟೆ ಹಾಗೂ ಬೆಳ್ತಂಗಡಿಯಿಂದ  ಸ್ವಾಮೀಜಿಯ ಭಕ್ತರು ಸುಮಾರು200 ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »