ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ.
23/04/2026 ರಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ದ್ರುತಿ ಪೂಜಾರಿ 612/625 ಅಂಕಗಳನ್ನು ಗಳಿಸಿ 97.92% ಸಾಧನೆಯೊಂದಿಗೆ ತನ್ನ ಶಾಲೆಗೆ ಪ್ರಥಮ ರಾಂಕ್ ಪಡೆದು ಗಮನ ಸೆಳೆದಿದ್ದಾಳೆ.
ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದ್ರುತಿ ಪೂಜಾರಿ ಅವರು ಶ್ರೀಧರ್ ಪೂಜಾರಿ (ಅನ್ನು ಹಾಗೂ ಭಾರತೀ ಪೂಜಾರಿ ದಂಪತಿಯ ಪುತ್ರಿ. ಅವರ ತಂದೆ ಉಡುಪಿ ನಗರದಲ್ಲಿ ಸಿಟಿ ಬಸ್ ಚಾಲಕರಾಗಿ ದುಡಿಯುತ್ತಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿಯ ನಡುವೆಯೂ ಮಗಳ ವಿದ್ಯಾಭ್ಯಾಸಕ್ಕೆ ಸದಾ ಬೆಂಬಲ ನೀಡಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದವು ದ್ರುತಿ ಸಾಧನೆಯನ್ನು ಶ್ಲಾಘಿಸಿ, ಅವಳಿಗೆ
ಮುಂದಿನ ವಿದ್ಯಾಭ್ಯಾಸಕ್ಕೆ ಶುಭಾಶಯ ಕೋರಿದ್ದಾರೆ. ಸ್ಥಳೀಯರು ಮತ್ತು ಸ್ನೇಹಿತರೂ ಕೂಡಾ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.






