TOP STORIES:

ಬರವುದ ಬಂಗಾರ್, ತುಳುವ ಕೇಸರಿ; ನಮ್ಮ ಹೆಮ್ಮೆಯ ಜನನಾಯಕ ಗಣೇಶ್ ಬಿ ಅಳಿಯೂರು


ತುಳು ರಂಗಭೂಮಿಯ ಹೆಸರಾಂತ ಕಥೆಗಾರ, ಗೀತರಚನೆಕಾರ, ನಿರ್ದೇಶಕ, ನಿರೂಪಕ ಹಾಗೂ ಕಲಾವಿದ. ಹಾಗೆಯೇ ತುಳುವ ಮಣ್ಣಿನ ಗಂಡುಕಲೆ ಯಕ್ಷಗಾನದ ಯಕ್ಷಕೃತಿ ರಚನೆಕಾರ. ಬರವುದ ಬಂಗಾರ್, ತುಳುವ ಕೇಸರಿ ಬಿರುದಾಂಕಿತ ನಮ್ಮ ಹೆಮ್ಮೆಯ ಜನನಾಯಕ ಗಣೇಶ್ ಬಿ ಅಳಿಯೂರು.

ಹೌದು ಒಬ್ಬ ಉತ್ತಮ ಗುರುವಿಗೆ ಅತ್ಯುತ್ತಮ ಶಿಷ್ಯ ನಾಗಬೇಕು, ಅಂತೆಯೇ ಹೆತ್ತ ತಂದೆ ತಾಯಿಯು, ತನ್ನ ಮಗನ ಸಾಧನೆಯಿಂದ ನಾಲ್ಕು ಜನ ಹೆಮ್ಮೆಯಿಂದ ಕೊಂಡಾಡಬೇಕು.
ಮಗ ಸಾಧನೆಯಲ್ಲಿ ಎತ್ತರ ಎತ್ತರವಾಗಿ ಬೆಳೆಯಬೇಕು ಅದೇ ತಾನೇ ಪೋಷಕರ ಮನ ಬಯಸುವುದು.ಅಂತಹ ಉನ್ನತ ಸಾಧಕರಲ್ಲಿ ನಮ್ಮ ಹೆಮ್ಮೆಯ ಗಣೇಶ್ ಬಿ ಅಳಿಯೂರು.

ದಿ. ಬಾಲಕೃಷ್ಣ ಪೂಜಾರಿ ಹಾಗೂ ವಿಮಲ ಬಾಲಕೃಷ್ಣ ಪೂಜಾರಿಯವರ ದ್ವಿತೀಯ ಪುತ್ರನಾಗಿ ಅಳಿಯೂರಿನ ಲೋಕೇಶ್ ನಿವಾಸದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಅಳಿಯೂರು ಹಾಗೂ ಪ್ರೌಢಶಿಕ್ಷಣವನ್ನು ಸರಕಾರಿ ಸಂಯುಕ್ತ ಪ್ರೌಢಶಾಲೆ ಅಳಿಯೂರಿ ನಲ್ಲಿ ಮುಗಿಸಿದರು.ಬಾಲ್ಯದಲ್ಲೇ ನಟನೆಯ ಬಗ್ಗೆ ಅಪಾರ ಒಲವು ತೋರುತ್ತಿದ್ದ ಇವರು ಶಾಲಾ ದಿನಗಳಲ್ಲಿ ಪ್ರತಿಭಾಕಾರಂಜಿಯಲ್ಲಿ ಬಾಗವಹಿಸಿ ಬಹುಮಾನ ಗೆದ್ದು ಬುರುತ್ತಿದ್ದರು ಇದು ಇವರ ಕಲಾಸೇವೆಯ ಮೇಲಿದ್ದ ಅಪಾರವಾದ ಆಸಕ್ತಿಯನ್ನು ತೋರಿಸುತಿತ್ತು.ಬರವುದ ಬೀರೆ ಖ್ಯಾತಿಯ ದಿ.ಸುರೇಂದ್ರ ಕುಮಾರ್ ಕಲಾತ್ರ್ಪಾದೆ ಇವರ ಶಿಷ್ಯರಾಗಿ ಕಲಾಮಾತೆಯ ಸೇವೆಗೆ ಬರುತ್ತಾರೆ.

ನಾಟಕಕ್ಷೇತ್ರಕ್ಕೆ ಹೆಚ್ಚಿನ ಒಲವು ತೋರಿ ಸುಮಾರು 12ನಾಟಕಗಳನ್ನು ಬರೆದಿರುವ ಇವರು ತುಳುರಂಗಭೂಮಿಗೆ ಹಿಟ್ ನಾಟಕಗಳನ್ನ ಕೊಡುಗೆಯಾಗಿ ನೀಡಿದ್ದಾರೆ ಇವರ ಅಗೆಲ್ ತುಳು ನಾಟಕಕ್ಕೆ ಜಿಲ್ಲಾ ಪ್ರಶಸ್ತಿಯೊಂದಿಗೆ ಮುಂಬಯಿಯಲ್ಲಿ ಸೇರಿ ಹಲವಾರು ಯಶಸ್ವಿ ಪ್ರಯೋಗ ಕಂಡು ಜನಮೆಚ್ಚುಗೆ ಪಡೆದಿರುತ್ತದೆ ಬರಿತ ಇಲ್ಲಾದ ಭಾರತಿ ತುಳು ನಾಟಕ ನೂರಾರು ಪ್ರಯೋಗದೊಂದಿಗೆ ಮಾಧ್ಯಮಗಳಿಂದ ಉತ್ತಮ ಕಥೆ ಎಂಬ ಪ್ರಶಂಸೆ ಲಭಿಸಿದೆ ನಾಲ್ ಗೋಡೆದ ನಡುಟು ಎಂಬ ನಾಟಕ ಬೆಂಗಳೂರು ಮಂಗಳೂರಿನಲ್ಲಿ ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದು ಭಾರೀ ಬೇಡಿಕೆಯ ನಾಟಕವಾಗಿ ಹೊರಹೊಮ್ಮಿದೆ ಮೂರ್ತೆ ಮುದರೆ ತುಳುನಾಡಿನ ದೈವಗಳ ಮಾಯ ಶಕ್ತಿಯ ನಂಬಿಕೆ ಹಾಗೂ ಅದರ ಶಕ್ತಿಯನ್ನ ತೋರಿಸಿಕೊಟ್ಟಿತು. ಈ ನಾಟಕ ಇಡೀ
ತುಳು ರಂಗಭೂಮಿಯನ್ನೆ ತಲ್ಲಣ ಗೊಳಿಸಿ ಹೊಸ ಮಿಂಚು ಹರಿಸಿದ ಒಂದು ಅದ್ಭುತ ನಾಟಕ.

ಸದ್ದುನ ಸುದ್ದಿಜ್ಜಿ, ಪಾರಿಜಾತ, ದೇವೆರ್ ತೂಪೆರ್, ಗೌರಿ ಗಣಪೆ ಮುಂತಾದ ಯಶಸ್ವಿ ನಾಟಕಗಳನ್ನು ತುಳುರಂಗಭೂಮಿಗೆ ನೀಡಿದ ಖ್ಯಾತಿ ಇವರಿಗೆ ಸಲ್ಲಬೇಕು.ಇನ್ನೂ ಕೇವಲ ರಂಗಭೂಮಿಯಲ್ಲಿ ಅಲ್ಲದೇ ತೌಳವ ರಾಜ್ಯದ ಗಂಡುಕಲೆ ಯಕ್ಷಗಾನ ಕ್ಷೇತ್ರಕ್ಕೂ ಇವರು ಕೊಡುಗೆ ನೀಡಿದ್ದಾರೆ. ತನ್ನ ಚೊಚ್ಚಲ ಮೊದಲ ಕಥಾ ಹಂದರ ಬನತ ಬಾಲೆ ಎಂಬ ಯಕ್ಷಕೃತಿ ಅಪಾರ ಜನಮೆಚ್ಚುಗೆಯಿಂದ ಪ್ರದರ್ಶನ ಕಂಡಿತು.ಇವರ ಬಂಗಾರ್ದ ತೊಟ್ಟಿಲ್, ಪರಕೆ ಪ್ರಸಂಗ ಸುಂಕದಕಟ್ಟೆ ಮೇಳ ಮಂಗಳಾದೇವಿ ಮೇಳಗಳಲ್ಲಿ ಪ್ರದರ್ಶನ ಪಡೆಯುತ್ತಿವೆ.ಇನ್ನೂ ಇವರು ನಿರೂಪಣೆಯಲ್ಲಿಯೂ ತನ್ನ ಚಾಪನ್ನು ಮೂಡಿಸಿದ್ದಾರೆ. ತನ್ನ ಧ್ವನಿಯಲ್ಲಿ ಅದೆಷ್ಟೋ ತುಳುನಾಡಿನ ಜನರನ್ನು ಮೋಡಿ ಮಾಡಿದ್ದಾರೆ.ಇವರ ನಿರೂಪಣೆಯ ಇಂಪನ್ನೂ ಕೇಳಿ ಯಾರು ಮಾರ್ರೆ ನಿರೂಪಣೆ ತುಂಬ ಒಳ್ಳೆಯದುಂಟು ಸಕತ್ ವಾಯ್ಸ್ ಮಾರ್ರೆ ಎಂದವರು ಅನೇಕರು.

ತುಳುವ ಜನಪದ ಶೈಲಿಯ ಕಾರ್ಯಕ್ರಮಗಳಲ್ಲಿ ಪ್ರಸಿದ್ದಿ ಪಡೆದು ಪ್ರಸ್ತುತ ಕೆಲ ಚಾನೆಲ್ ಗಳಲ್ಲಿ ಅತಿಥಿ ನಿರೂಪಕರಾಗಿ ಕೆಲಸವನ್ನು ಮಾಡುತ್ತಿದ್ದರೆ.ಕೆಲ ಟೆಲಿಪಿಲ್ಮ್ ಗಳಿಗೆ ತನ್ನ ಧ್ವನಿ ಡಬ್ಬಿಂಗ್ ನೀಡುತ್ತ ಯುವ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತ ಕಲಾಸೇವೆಗೈಯುತ್ತಿದ್ದರೆ.ತನ್ನ ಏಳವೆಯಲ್ಲೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಭರ್ಜರಿ ಮತಗಳಿಂದ ಗೆದ್ದು ಅಳಿಯೂರಿನ ಅಭಿವ್ರಧ್ದಿಯಲ್ಲಿ ತೊಡಗಿಸಿಕೊಂಡು.ಜನರ ಕಷ್ಟಕ್ಕೆ ಹಗಲಿರುಳು ಎನ್ನದೇ ಸ್ಪಂದಿಸುತ್ತ.ಊರಿನಲ್ಲಿ ಜನಪ್ರಿಯ ಯುವನಾಯಕರಾಗಿ ಗುರುತಿಸಿಕೊಂಡು ಗರಡಿ ಫ್ರೆಂಡ್ಸ್ ಅಳಿಯೂರು ಕೂಟದ ಮುಖೇನ ಸಮಾಜಸೇವೆ ಮಾಡುತ್ತ ಊರಿಗೆ ಸಮಾಜಕ್ಕೆ ಹೆಸರು ತರುತ್ತಾ ಹತ್ತೂರಿನಲ್ಲಿ ತನ್ನದೇ ಅಭಿಮಾನಿ ಬಳಗವನ್ನ ಪಡೆದಿರುತ್ತಾರೆ.ಇವರ ಕಲಾಸೇವೆಗೆ ಸಂದಿರುವ ಗೌರವಗಳು
ನಾಟಕ ರಂಗ, ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ 2016 ಪ್ರೇಂಡ್ಸ್ ಕ್ಲಬ್ ರಿ ಹೊಸಂಗಡಿ ಗೌರವ ಸನ್ಮಾನ ನಮ ಮಾತೆರ್ಲ ಒಂಜೆ ಕಲಾ ತಂಡದ ಗೌರವ ಸನ್ಮಾನ 2018
ಅಳ್ವಾಸ್ ರಂಗ್ 2019ಗೌರವ ಸನ್ಮಾನ ನೀಡಿ ಗುರುತಿಸಿದ್ದಾರೆ.

ಒಡಿಯೂರು ಸಂಸ್ಥಾನದಿಂದ ಆಟಿದ ತಮ್ಮನ 2019 ಗೌರವ ಸನ್ಮಾನ ನೀಡಿ ಗುರುತಿಸಿದ್ದಾರೆ. 2020ಕರಾವಳಿ ಕೇಸರಿ ಗೌರವ ಸನ್ಮಾನ ಹೀಗೆ ನಾಟಕ ರಂಗದಲ್ಲಿ ಉಡುಪಿ ದ.ಕ ಜಿಲ್ಲೆಯ ಹಲವು ಕಡೆ ಯುವಕ ಮಂಡಲ ಮಹಿಳಾ ಮಂಡಳಿ ಜಾತ್ರೋತ್ಸವ ಸಮಿತಿಗಳಿಂದ 45ಗೌರವ ಸನ್ಮಾನ ಯಕ್ಷಗಾನ ಪ್ರಸಂಗ ರಚನೆಗಾಗಿ ಸುಮಾರು 7ಗೌರವ ಸನ್ಮಾನ ಕಾರ್ಯಕ್ರಮ ನಿರೂಪಣೆಗಾಗಿ 3ಸನ್ಮಾನ ದೊಂದಿಗೆ ಬರವುದ ಬಂಗಾರ್ ತುಳುವ *ಕೇಸರಿ ಎಂಬ ಬಿರುದು ಪಡೆದಿರುತ್ತಾರೆ.ಇವರ ಈ ಕಲಾಸೇವೆಯು ಹೀಗೆಯೇ ಮುಂದುವರಿಯಲಿ ನಿಮ್ಮಿಂದ ತುಳುರಂಗಭೂಮಿಗೆ ಇನ್ನಷ್ಟೂ ಕೊಡುಗೆ ಸಿಗಲಿ ಹಾಗೆಯೇ ರಾಜಕೀಯದಲ್ಲೂ ಇನ್ನಷ್ಟೂ ಗೆಲುವು ಸಿಗಲಿ,ಕನಸು ಹೊತ್ತ ಯವ ಮನಸ್ಸುಗಳಿಗೆ ನೀವೂ ಮಾದರಿಯಾಗಲಿ ಎಂದು ನಮ್ಮ ಶುಭಹಾರೈಕೆ.

Credits: ವಿನೀತ್ ಆರ್ ಕೋಟ್ಯಾನ್ ಅಳಿಯೂರು & ಸುಕೇಶ್ ಪೂಜಾರಿ ಅಳಿಯೂರು

Write to us: billavaswarriors@gmail.com


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »