TOP STORIES:

ಜೇನು ಕೃಷಿ ಯಶಸ್ಸು ಕಂಡ, ‘ಹನಿ ವರ್ಲ್ಡ್’ ಬ್ರಾಂಡ್‌ನ ಸ್ಥಾಪಕ ಬಿಲ್ಲವ ಮನಮೋಹನ


ಇವರು ಬೆಟ್ಟಂಪಾಡಿಯ ಯುವಕ. ಹೆಸರು ಮನಮೋಹನ.‌ ಕಾಯಕ ಜೇನು ಕೃಷಿ. ಆರಂಭಿಸಿದ್ದು‌ 8ನೇ ಕ್ಲಾಸಿನಲ್ಲಿರುವಾಗ – ಕೇವಲ ಒಂದು ಪೆಟ್ಟಿಗೆಯಿಂದ. ಈಗ ಇರುವ ಜೇನುಪೆಟ್ಟಿಗೆಗಳ‌ ಸಂಖ್ಯೆ ಎರಡು‌ ಸಾವಿರ. ಒಂದು ಪೆಟ್ಟಿಗೆಯಿಂದ ಗರಿಷ್ಠ 48.6 ಕೆ.ಜಿ. ಜೇನು ಸಂಗ್ರಹಿಸಿದ್ದೂ ಇದೆ.ಬೆಟ್ಟಂಪಾಡಿಯಿಂದ ಮೈಸೂರುವರೆಗೆ 75 ಕಡೆ ಪೆಟ್ಟಿಗೆ ಇಟ್ಟಿದ್ದಾರೆ. ಇವರ ಜಾಗದಲ್ಲಿ ಅಲ್ಲ, ಯಾರದ್ದೋ ಜಮೀನಿನಲ್ಲಿ. ಸ್ಥಳ ಬಾಡಿಗೆಯಾಗಿ ಮಾಲೀಕನಿಗೆ ಒಂದಷ್ಟು‌ ಜೇನು ಮತ್ತು ಪರಾಗಸ್ಪರ್ಶದಿಂದ ಫಸಲು ಹೆಚ್ಚಳದ ಖುಷಿ.

ವಾರ್ಷಿಕವಾಗಿ 16000 ಕೆ. ಜಿ. ಜೇನು, 250 ಕೆ. ಜಿ. ಮೇಣ ಸಂಗ್ರಹ, 2000 ಜೇನುಕುಟುಂಬ ಮಾರಾಟ ಮನಮೋಹನರ‌ ಸಾಧನೆ. ‘ಹನಿ ವರ್ಲ್ಡ್’ ಇವರ ಬ್ರಾಂಡ್‌. ಜೇನು ಕುಟುಂಬ ಮಾರಾಟ ಮಾಡುವ , ಅಧಿಕ ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಯುವ ಕೃಷಿಕ.ಜೇನು ನಿರ್ವಹಣೆಗಾಗಿ ಒಂದಷ್ಟು ಮಂದಿಗೆ ಕೆಲಸ ಕೊಟ್ಟ‌ ಉದ್ಯೋಗದಾತ. ಪ್ರತಿ ವರ್ಷ ಸಾವಿರಕ್ಕೂ ಅಧಿಕ ಮಂದಿಗೆ ಇವರ ಮನೆಯಲ್ಲಿ ತರಬೇತಿಯಾಗುತ್ತದೆ. ಅದೆಷ್ಟೋ ಮಂದಿಯನ್ನು‌ ಸ್ವಾವಲಂಬಿಯಾಗಿಸಿದ್ದಾರೆ.

ಜೇನು‌‌ನಿರ್ವಹಣೆ ಬಗ್ಗೆ ಯಾವುದೇ ಹೊತ್ತಿನಲ್ಲಿ ‌ಕರೆ ಮಾಡಿದರೂ ಆತ್ಮೀಯವಾಗಿ ತಿಳಿಹೇಳುವರು. ಹೊಸಬರಿಗೆ ಸಂಪೂರ್ಣ ಪ್ರಾತ್ಯಕ್ಷಿಕೆ ಇದ್ದೇ ಇದೆ. ಇವರಲ್ಲಿ ಪೆಟ್ಟಿಗೆ ಖರೀದಿಸಿದರೆ, ಒಂದರಿಂದ ಸಾವಿರವಾಗಲಿ ಎಂದು ದೇವರನ್ನು ಪ್ರಾರ್ಥಿಸಿಯೇ ಹಸ್ತಾಂತರಿಸುವುದು.

ಹಮ್ಮುಬಿಮ್ಮಿಲ್ಲದ ಮುಕ್ತ ಮನಸ್ಸು, ನನ್ನಂತೆ ಇನ್ನೊಬ್ಬರು ಬೆಳೆಯವೇಕೆಂಬ ಚಿಂತನೆ ಮನಮೋಹನರನ್ನು ಯಶಸ್ವಿ ರೈತೋದ್ಯಮಿಯನ್ನಾಗಿಸಿದೆ ಎನ್ನುವುದು ಸತ್ಯ.


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »