TOP STORIES:

ಬಜ್ಪೆಯ ವಿಮಾನ ನಿಲ್ದಾಣದ ಹೆಸರು ಇನ್ನು ಕೂಡಾ ಬದಲಾವಣೆ ಆಗಿಲ್ಲ ಯಾಕೆ?


ಮಂಗಳೂರು ವಿಮಾನ ನಿಲ್ದಾಣದ ಮರುನಾಮಕರಣದ ಬಗ್ಗೆ ನನ್ನ ವೈಯುಕ್ತಿಕ ಅನಿಸಿಕೆ ಸತ್ಯಾಂಶ ಇದ್ದಲ್ಲಿ ಧಾರಾಳವಾಗಿ ಶೇರ್ ಮಾಡಬಹುದು..

ಅತ್ತ ಮಂಗಳೂರಿನಲ್ಲಿ ಒಂದು ರಸ್ತೆಯ ಹೆಸರು ಬದಲಾವಣೆ ಆಗಿದೆ, ಇತ್ತ ಉಡುಪಿಯಲ್ಲಿ ಒಂದು ರಸ್ತೆಯ ಹೆಸರು ಬದಲಾವಣೆಯಾಗಿದೆ,

ಆಗಲಿ ಒಳ್ಳೆಯ ವಿಚಾರ ಯಾಕೆಂದರೆ ಹಿಂದೂಗಳ ಹೆಸರಿನಿಂದಲೇ ಮರುನಾಮಕರಣ ಆಗಿರೋದು..
ಬಜ್ಪೆ ಗ್ರಾಮ ಪಂಚಾಯತ್ ನಿಂದ “ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು”ಎಂಬ ಹೆಸರು ಬದಲಾವಣೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಕೂಡಾ ಬಜ್ಪೆಯ ಅಂತಾರಷ್ಟ್ರೀಯ ವಿಮಾನ ನಿಲ್ದಾಣದ *ಹೆಸರು ಇನ್ನು ಕೂಡಾ ಬದಲಾವಣೆ ಆಗಿಲ್ಲ ಯಾಕೆ?

ಉಡುಪಿಯಲ್ಲಿ ಮತ್ತು ಮಂಗಳೂರಿನಲ್ಲಿ ಎರಡು ರಸ್ತೆಗಳ ಹೆಸರು ಬದಲಾವಣೆ ಈಗಾಗಲೇ ಆಗಿದ್ದು ಅದಕ್ಕೆ ಮನವಿ ಸಲ್ಲಿಸಿದ್ದು ಯಾರು ಮತ್ತು ಅದರ *ಹೆಸರು ಬದಲಾವಣೆ ಅಷ್ಟು ಸಲೀಸಾಗಿ ಯಾಕಾಯಿತು?

ಕೋಟಿ ಚೆನ್ನಯ ಅಥವಾ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಇಡಬೇಕ್ಕೆನ್ನುವಾಗ ನನ್ನದು ಒಂದಿರಲಿ ಅಂತ ಬರುವವರು ಯಾರು?

ಮಂಗಳೂರಿನ ದಿಲ್ ರಾಜ್ ಆಳ್ವರೇ…
“ತುಳುನಾಡ್ ಇಂಟರ್ನ್ಯಾಷನಲ್ ಏರ್ಪೋರ್ಟ್”ಅನ್ನೋ ಹೆಸರು ಸೂಕ್ತವಾಗಿದೆ, ಒಪ್ಪಿಕೊಳ್ಳುವಂತದ್ದೇ..
ಆದರೂ ಕೂಡಾ ಈಗಾಗಲೇ ಒಂದು ಹೆಸರಿನ ಬಗ್ಗೆ ಮನವಿ ಸಲ್ಲಿಸಿರುವಾಗ ಯಾರು ಊಹಿಸದ ಹೆಸರನ್ನು ಏಕಾಏಕಿ ಸೃಷ್ಟಿ ಮಾಡಿ ಅದನ್ನೇ ಇಡಬೇಕೆಂದರೆ ಇದು ಯಾವ ರೀತಿಯ ನ್ಯಾಯ?
ಕೋಟಿ ಚೆನ್ನಯ v/s ತುಳುನಾಡು ಅಂದ ಹಾಗಾಯಿತು ನಿಮ್ಮ ಕಥೆ.. ನಿಮಗೂ ಗೊತ್ತಿರಬಹುದಲ್ಲವೇ?
ಇವೆರಡು ಒಂದೇ ನಾಣ್ಯದ ಎರಡು ಮುಖಗಳು.. ಹೆಡ್ or ಟೆಲ್ ಅಂದಾಗ? ನಾನಂತು ಮೌನಿಯಾಗುತ್ತೇನೆ..
ಯಾಕಂದ್ರೆ ತುಳುನಾಡು, ತುಳುಭಾಷೆ ನಮಗೆ ಏನು ಕೊಟ್ಟಿದೆ ನೋಡಿ ಅದನ್ನು ಎಂದಿಗೂ ಮರೆಯೋಕೆ ಸಾಧ್ಯ ಇಲ್ಲ.. ಹಾಗಾಗಿ ತುಳುವರೇ ತುಳುನಾಡಿನಲ್ಲಿ ಮೇರೆದಾಡಿದಂತಹ ಕಾರಣಿಕ ಪುರುಷರ ಹೆಸರನ್ನು ಇಡಲು ಹೊರಟಾಗ ಬೆಂಬಲ ಸೂಚಿಸುವ ಬದಲು ಈ ರೀತಿ ನನ್ನದು ಒಂದಿರಲಿ ಅನ್ನೋದು ಸಮಂಜಸವೇ?

ಉಡುಪಿಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಗಳೇ..
ತುಳುನಾಡಿನಲ್ಲಿ 66 ಗರಡಿಗಳನ್ನು ಕಟ್ಟಿಸಿಕೊಂಡಂತಹ ಅವಳಿ ವೀರರ ಹೆಸರು ಇಡಬೇಕೆಂದು ಈಗಾಗಲೇ ಮನವಿ ಸಲ್ಲಿಸಿಯಾಗಿದೆ.
ಈ ನಡುವೆ ಶಂಕರಾಚಾರ್ಯ, ಮದ್ವಾಚಾರ್ಯರಂತಹ ದಾರ್ಶನಿಕರ ಹೆಸರನ್ನೇಕೆ ಬಳಸುತ್ತಿರಿ? ಅದಕ್ಕಿಂತ ನಿಮ್ಮ ಹೆಸರನ್ನೇ ಇಡಬೇಕೆಂದು ಆಗ್ರಹಿಸಬಹುದಿತ್ತಲ್ಲವೇ?
ಕೋಟಿ ಚೆನ್ನಯರು ಕೂಡಾ ಹಿಂದೂ ಧರ್ಮದ ಭಾಗವೇ ಆಗಿರುವಾಗ ಅವರ ಹೆಸರಿಗೆ ಯಾಕೆ ನಿಮ್ಮ ಆಕ್ಷೇಪ?
ಅದಕ್ಕಿಂತ ಉಡುಪಿಯ ಇಂದ್ರಾಳಿ ರೈಲ್ವೆ ಸ್ಟೇಷನ್ ಹೆಸರನ್ನು ಬದಲಾವಣೆ ಮಾಡಿ “ಮದ್ವಾಚಾರ್ಯ ರೈಲ್ವೆ ಸ್ಟೇಷನ್ ಉಡುಪಿ” ಅಥವಾ “ಶಂಕರಾಚಾರ್ಯ ರೈಲ್ವೆ ಸ್ಟೇಷನ್ ಉಡುಪಿ” ಎಂದು ಮರುನಾಮಕರಣ ಮಾಡಲು ಮನವಿ ಸಲ್ಲಿಸಬಹುದಿತ್ತಲ್ವಾ? ವಿವಾದಗಳ ನಡುವೆ ವಿವಾದ ಸೃಷ್ಟಿಸುವ ಹೇಳಿಕೆ ಯಾತಕ್ಕಾಗಿ ಕೊಡ್ತೀರಾ ಸ್ವಾಮಿ?

ಇನ್ನು ಮಾನ್ಯ ಮಿಥುನ್ ರೈಯವರು ಮಾಡಿದಂತಹ ಪ್ರತಿಭಟನೆ ರಾಜಕೀಯ ಉದ್ದೇಶ ರಹಿತ ಆಗಿದ್ದರೆ ಕೋಟಿ ಚೆನ್ನಯರ ಆಶೀರ್ವಾದ ಸದಾ ಅವರ ಮೇಲಿರಲಿ…
ರಾಜಕೀಯದ ಉದ್ದೇಶ ಕೂಡಿದ್ದರೆ ನಾನು ಹೇಳಬೇಕೆಂದಿಲ್ಲ ಕೋಟಿಚೆನ್ನಯರ ಸುರಿಯದ ತುದಿಗಳು ಸುಗಮವಾದ ದಾರಿಯನ್ನೇ ತೋರಿಸುತ್ತವೆ..

ಹಿಂದೂಪರ ಸಂಘಟನೆಗಳು ಜಾಣ ಮೌನಕ್ಕೆ ಶರಣಾಗದಿರಿ*
ನ್ಯಾಯಕ್ಕೆ ಎದೆಯಲ್ಲಿ ಜಾಗ ತೋರಿಸುತ್ತೇವೆ,
ಅನ್ಯಾಯಕ್ಕೆ ಕತ್ತಿಯಲ್ಲಿ ಜಾಗ ತೋರಿಸುತ್ತೇವೆ. (ನ್ಯಾಯೋಗ್ ತಿಗಲೆಡ್ ಸಾದಿ ಕೊರ್ಪ, ಅನ್ಯಾಯೋಗ್ ಸುರಿಯಡ್ ಸಾದಿ ತೋಜಾವ)
“ನಂಬಿನಕಲೇ ಇಂಬು ಕೊರ್ಪ ಸತ್ಯ ಗೆಂದಾದ್ ಕೊರ್ಪ” ಎಂದು ವಾಗ್ದಾನ ಕೊಟ್ಟಂತಹ ಅವಳಿ ವೀರರ ಹೆಸರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾರಾಜಿಸುವಂತಾಗಲಿ..

ಇನ್ನು, ಮೇಲೆಯೂ ನಮ್ಮದೇ ಸರ್ಕಾರ, ಕೆಳಗೆಯೂ ನಮ್ಮದೇ ಸರ್ಕಾರ ಅನ್ನೋರಿಗೆ ಚಪ್ಪಲಿ ತಗೊಂಡು ಹೊಡಿಯೋದೊಂದು ಬಾಕಿ ಇದೆ ಅಷ್ಟೇ..

ವಿಕ್ಕಿ ಪೂಜಾರಿ ಮಡುಂಬು


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »