TOP STORIES:

ಪ.ಗೋ. ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು


ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು

ವಿಜಯ್ ಕೋಟ್ಯಾನ್ ಪಡು-ಬಯೋಡೆಟಾ
ಹಿರಿಯ ವರದಿಗಾರರು,
ವಿಜಯ ಕರ್ನಾಟಕ, ಮಂಗಳೂರು

ಮಂಗಳೂರು ತಾಲೂಕಿನ ಪಡು ಬೊಂಡಂತಿಲ ಗ್ರಾಮದ ಗೋಪಾಲ ಪೂಜಾರಿ ಮತ್ತು ಕಮಲ ದಂಪತಿಗಳ ಸುಪುತ್ರನಾಗಿರುವ ವಿಜಯ್ ಕೋಟ್ಯಾನ್ ಅವರು 1978ರ ಜುಲೈ 8ರಂದು ಜನನ. ಬೊಂಡಂತಿಲ ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ರಾಜೇಶ್ವರ್ ಪ್ರೌಢಶಾಲೆ ಅಡ್ಯಾರ್‌ಪದವಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಬಂಟ್ವಾಳ ತಾಲೂಕಿನ ಬೆಂಜನ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದರು. ತದನಂತರ ಮಂಗಳೂರಿನ ಐಟಿಐನಲ್ಲಿ ಡಿಪಿಸಿಎಸ್ (ಡಾಟಾ ಪ್ರೊಸೆಸಿಂಗ್ ಎಂಡ್ ಕಂಪ್ಯೂಟರ್ ಸಾಫ್ಟ್‌ವೇರ್) ತರಬೇತಿ ಮುಗಿಸಿದರು.
ಬಾಲ್ಯದಿಂದಲೇ ಸಂಕಷ್ಟದ ಬದುಕು ಉದ್ಯೋಗವನ್ನು ಅರಸುವತ್ತ ಮುಖಮಾಡಿದ ಕಾರಣ ಹೊಸದಿಗಂತಕ್ಕೆ ಡಿಟಿಪಿ ಆಪರೇಟರ್ ಆಗಿ 1997ನೇ ಇಸವಿಯಲ್ಲಿ ಸೇರ್ಪಡೆಯಾದರು. ಸುಮಾರು 5 ವರ್ಷಗಳ ಕಾಲ ಡಿಟಿಪಿ ಆಪರೇಟರ್ ಆಗಿದ್ದು, ಆ ಕಾಲದಲ್ಲೇ ಸಿನಿಮಾ ದಿಗಂತ, ಸಾಪ್ತಾಹಿಕಕ್ಕೆ ಬರೆಯುವ ಹವ್ಯಾಸ ಬೆಳೆಸಿಕೊಂಡರು. ತದನಂತರ ವಿಜಯ ಕರ್ನಾಟಕದಲ್ಲಿ ಉದ್ಯೋಗಾವಕಾಶ ದೊರೆತ ಕಾರಣ 2003ರಲ್ಲಿ ವಿಜಯ ಕರ್ನಾಟಕ ಸೇರಿಕೊಂಡರು. ವಿಜಯ ಕರ್ನಾಟಕದಲ್ಲಿ ಡಿಟಿಪಿ ಆಪರೇಟರ್ ಆಗಿ ಸೇರಿದ ಇವರು ಪ್ರಾರಂಭದಿಂದಲೇ ತಮ್ಮ ಬರವಣಿಗೆಯನ್ನು ಒರೆಗಚ್ಚುವ ಕೆಲಸ ಮಾಡಿದರು. ಅದಕ್ಕೆ ತಕ್ಕಂತೆ ಹಿರಿಯರ ಮಾರ್ಗದರ್ಶನವೂ ಸಿಕ್ಕಿದ್ದು, ಕ್ರೀಡೆ, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸಂಬಂಧಿತ ವಿಶೇಷ ವರದಿಗಳನ್ನು ಮಾಡಿ ಯಶಸ್ಸು ಕಂಡರು. ಇವರ ಪ್ರತಿಭೆಯನ್ನು ಗುರುತಿಸಿದ ವಿಕ ಸಂಸ್ಥೆ ಇವರನ್ನು ಹಂತಹಂತವಾಗಿ ಉಪಸಂಪಾದಕನನ್ನಾಗಿ, ಹಿರಿಯ ಉಪಸಂಪಾದಕನನ್ನಾಗಿ ಪದೋನ್ನತಿಗೊಳಿಸಿತು. ಇದಾದ ಬಳಿಕ ವಿಜಯ್ ಕೋಟ್ಯಾನ್ ಅವರ ಜೀವನ ದಿಸೆಯೇ ಬದಲಾಯ್ತು ಅನ್ನಬಹುದು. ತಮ್ಮ ಪತ್ರಿಕೋದ್ಯಮ ಜೀವನವನ್ನು ಚಾಲೆಂಜ್ ಆಗಿ ಸ್ವೀಕರಿಸಿ ಅವಕಾಶ ಬಳಸಿ ಯಶಸ್ಸಿನಲ್ಲಿ ಹಾದಿಯಲ್ಲಿ ಮುನ್ನಡೆದರ. 2015ರಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನವೀಯ, ರಾಜಕೀಯ, ಸಾಹಿತ್ಯ, ಜನಪದೀಯ ಸಂಗತಿಗಳು, ಧಾರ್ಮಿಕ ವರದಿಗಾರಿಕೆ, ಸಾಮಾಜಿಕ ಕಳಕಳಿ, ತನಿಖಾ ವರದಿಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಬರವಣಿಗೆ ಕೈಚಳಕ ಒಲಿಸಿಕೊಂಡವರು. ಅದರಲ್ಲೂ ತುಳುನಾಡಿನ ಜಾನಪದ ಕ್ರೀಡೆ ಕಂಬಳ, ಯಕ್ಷಗಾನ, ಗ್ರಾಮೀಣ ಕ್ರೀಡೆಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದು, ವರದಿಗಳ ಸರಮಾಲೆಯನ್ನೇ ಮಾಡಿದವರು. ಕರಾವಳಿ ಜಿಲ್ಲೆಗೆ ಕಂಟಕ ಎನಿಸಿಕೊಂಡಿರುವ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಹೋಗಿ ಸರಣಿ ವರದಿ ಪ್ರಕಟಿಸಿ ರಾಜ್ಯ ಸರಕಾರದ ಗಮನಸೆಳೆದವರು. ಇದು ಮಾತ್ರವಲ್ಲದೆ ಜಿಲ್ಲೆಯ ಮರಳುಗಾರಿಕೆ, ಕೆಂಪು ಕಲ್ಲು, ಬಾಕ್ಸೈಟ್ ಗಣಿಗಾರಿಕೆ ದಂಧೆಯಂತಹ ಕ್ಲಿಷ್ಟಕರ ತನಿಖಾ ವರದಿಗಳನ್ನು ಬಯಲಿಗೆಳೆದು ಆಡಳಿತದ ಗಮನ ಸೆಳೆದು ತನಿಖಾ ಆದೇಶಕ್ಕೆ ಕಾರಣಕರ್ತರು.
ವರದಿಗಾರಿಕೆ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲಿ ಉತ್ತಮ ಸಂಘಟನಾ ಚಾತುರ್ಯ, ಕಾರ್ಯಕ್ರಮ ಆಯೋಜನೆ ಮೂಲಕ ಗಮನಸೆಳೆದವರು. ನಟನೆ, ನಿರೂಪಣೆಯಲ್ಲೂ ಒಂದು ಹೆಜ್ಜೆ ಮುಂದೆ. ಸುಮಾರು 16ವರ್ಷಗಳ ಹಿಂದೆ ತಮ್ಮೂರಿನಲ್ಲಿ ಕರಾವಳಿಯ ಮೊತ್ತಮೊದಲ ‘ಕೆಸರ್ಡೊಂಜಿ ದಿನ’ ಆಯೋಜಿಸಿದ ಹೆಗ್ಗಳಿಕೆ ಇವರದು. ಬೊಂಡಂತಿಲ ಗ್ರಾಮದಲ್ಲಿ ಸಂಘಸಂಸ್ಥೆ ಮುಖೇನ ಮಕ್ಕಳಲ್ಲಿರುವ ಪ್ರತಿಭೆಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಿಕೊಂಡು ಬಂದವರು. ಈ ರೀತಿ ಉದ್ಯೋಗ ಕ್ಷೇತ್ರವಲ್ಲದೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ ವ್ಯಕ್ತಿತ್ವ ಇವರದು.
2019ರಲ್ಲಿ ದೇರಳಕಟ್ಟೆಯಲ್ಲಿ ಭಗ್ನ ಪ್ರೇಮಿಯೊಬ್ಬನಿಂದ ಇರಿತಕ್ಕೆ ಒಳಗಾಗಿ ಅದೆಷ್ಟೋ ಕಾಲ ಜೀವಚ್ಛವವಾಗಿ ಮಲಗಿದ್ದ ಹೆಣ್ಮಗಳೊಬ್ಬಳ ಮತ್ತೆ ನಿಧಾನಕ್ಕೆ ಚೇತರಿಸಿಕೊಂಡ ಕ್ಷಣಗಳನ್ನು ಮಾನವೀಯ ನೆಲೆಯಲ್ಲಿ ವಿಜಯ್ ಕೋಟ್ಯಾನ್ ಅವರು ವರದಿ ಮಾಡಿದ್ದು, ಆ ವರದಿಗೆ ಪ.ಗೋ. ಪ್ರಶಸ್ತಿ ಒಲಿದು ಬಂದಿದೆ.
ವಿಜಯ್ ಕೋಟ್ಯಾನ್ ಅವರು ತಂದೆ-ತಾಯಿ, ಪತ್ನಿ ಸೌಮ್ಯಶ್ರೀ, ಮಗಳು ಚಾರ್ವಿ ಅಂಚನ್, ಸಹೋದರ ಕುಟುಂಬದ ಜತೆ ನೀರುಮಾರ್ಗದ ಪಡು ಬೊಂಡಂತಿಲದಲ್ಲಿ ವಾಸಿಸುತ್ತಿದ್ದಾರೆ.

ದಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪದ್ಯಾಣ ಗೋಪಾಲಕೃಷ್ಣ)ಯು ಈ ಬಾರಿ ವಿಜಯ ಕೋಟ್ಯಾನ್ ಪಡು ಅವರಿಗೆ ಲಭಿಸಿದೆ. ಅವರಿಗೆ ಅಭಿನಂದನೆಗಳು.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »