TOP STORIES:

ಒಂದು ಗೌರವಯುತ ವಿದಾಯದ ವೇದಿಕೆಯತ್ತ…ಜನಾರ್ಧನ ಪೂಜಾರಿ


“ಒಂದು ಗೌರವಯುತ ವಿದಾಯದ ವೇದಿಕೆಯತ್ತ”

“ಸಾಲ ಮೇಳದ ಸಂಗ್ರಾಮ”

“ಜನಾರ್ಧನ ಪೂಜಾರಿ”

ಇದು ಕರಾವಳಿಯ ಮಾನವೀಯತೆಯ ಪ್ರಶ್ನೆ…!!

 

ಬಹು ದಿನಗಳಿಂದ ಸಾಮಾಜಿಕ ಜಾಲತಾಣದ ವೇದಿಕೆಯತ್ತ ಒಂದು ವಿಚಾರದ ಕುರಿತು ತಡಬಡಿಸುತ್ತಲೇ ಇದ್ದೇ. ಜನಾರ್ಧನ ಪೂಜಾರಿಯವರ ಸ್ವ ಪಕ್ಷಿಯವರಿಂದ ಒಂದು ಮಾತನ್ನು ನಿರೀಕ್ಷಿಸುತ್ತಿದ್ದೆ..!! ಆದರೆ ಅಲ್ಲಿಂದ ಉತ್ತರವೇ ಬರಲಿಲ್ಲ.ಕಾಯುವಿಕೆ ಸಾಕಿನ್ನು ಎಂದು ಪೂಜಾರಿಯವರ ಪಕ್ಷದ ಕಾರ್ಯಕರ್ತನಲ್ಲದಿದ್ದರು, ಭಾ.ಜ.ಪಾ. ದ ಕಾರ್ಯಕರ್ತನಾಗಿದ್ದುಕೊಂಡೆ ಈ ಬರಹವನ್ನು ನಿಮ್ಮ ಮುಂದೆ ತರಲೇಬೇಕಿತ್ತು ಅಂತನಿಸಿತು..!

ಜನಾರ್ಧನ ಪೂಜಾರಿ ದೇಶ ಕಂಡ ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದು ನಾನು ಪುನಃ ಹೇಳುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ.ಅದು ಎಲ್ಲಾ ಪಕ್ಷದವರಿಗೂ ತಿಳಿದ ವಿಷಯವೇ ಆಗಿದೆ.

ಬಡ ಜನರು ಬ್ಯಾಂಕಿನ ಒಂದಿಷ್ಟು ಜ್ಞಾನವನ್ನು , ಸಾಲವನ್ನು ಎಲ್ಲರಿಗೂ ಕೊಡುವಂತೆ ಮಾಡಿದ್ದೇ ಈ ಜನಾರ್ಧನ ಪೂಜಾರಿಯವರು..!!

ಅಂದಿನ ಸರಕಾರದಲ್ಲಿ ಕೇಂದ್ರದ ಸಚಿವನಾಗಿ ಅನೇಕ ಜವಾಬ್ದಾರಿಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ,ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸ್ಥಾನವನ್ನು ಪ್ರೀತಿಯಿಂದ ತಿರಸ್ಕರಿಸಿದ ವ್ಯಕ್ತಿ ಇವರು..!

ಈಗಿನ ರಾಜಕೀಯದಲ್ಲಿ ಪಂಚಾಯತಿನ ಸದಸ್ಯನಾದವನು ಕೂಡ ಮಹಡಿಯ ಮೇಲೆ ಇನ್ನೊಂದು ಮನೆ ಮಾಡುವ ತನಕ ದುಡಿಯುವ ಕಾಯಕ ಯೋಗಿಗಳು ನಮ್ಮ ಮುಂದೆ ಇದ್ದಾರೆ,ಅಲ್ಲವೇ..!? ಆದರೆ ಪೂಜಾರಿಯವರು…!??

ದಶಕಗಳ ಕಾಲ ರಾಜಕೀಯದಲ್ಲಿ ಅಭಿಶಕ್ತ ದೊರೆಯಾಗಿ ವಿಜೃಂಭಿಸಿದವರು,ಇಂದು ಅವರ ಕೈಯಲ್ಲಿ ಇರೋದು ಹಳೆಯ ಮನೆ ಮಾತ್ರ..! ಬಂದ ಗೌರವ ಧನ ಯಾವುದೋ ಅನಾಥಾಶ್ರಮ,ಬಡವರ ಮನೆಯ ದಾರಿಯನ್ನು ಕೇಳಿಕೊಂಡು ಸಾಗುತ್ತಿದೆ.!

ಇವರ ಬಗ್ಗೆ ತುಂಬಾ ಬರೆಯಬೇಕೆನ್ನಿಲ್ಲ..! ಯಾಕೆಂದರೆ ಎಲ್ಲಾ ರಾಜಕೀಯ ಪ್ರಮುಖರಿಗೆ ಇಂದು ಇವರ ಕುರಿತು ಒಂದು ಗೌರವಯುತ ಗೌರವ ಇದ್ದೆ ಇದೇ ಎಂದೇ ಹೇಳಬಹುದು.! ಚುನಾವಣೆ ಬಂದಾಗ ಇವರ ಆಶೀರ್ವಾದದ ಅಭಯಕ್ಕಾದರು ಮನೆಯ ಕಡೆ ದಾರಿಯನ್ನು ನೋಡುತ್ತಾರೆ..!

ಇಂದಿನ ರಾಜಕೀಯದಲ್ಲಿ ಪೂಜಾರಿಯವರಿಗೆ ಸರಿ ಸಮಾನವಾಗಿ ನಿಲ್ಲುವ ರಾಜಕಾರಣಿ ಹುಡುಕಿದರೂ ಸಿಗಲಾರರು.!

“ಇರಲಿ ಬಿಡಿ ವಿಷಯಕ್ಕೆ ಬರೋಣ..”

ಜನಾರ್ಧನ ಪೂಜಾರಿ ಎಂಬ ಸಹೃದಯಿ ಮನಸ್ಸಿಗೆ ಗೌರವಯುತ ವಿದಾಯದ ವೇದಿಕೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ.!
ಇದು ಕರಾವಳಿಯ ಮೇಲೆ ಬೆಟ್ಟದಷ್ಟಿದೆ..!
ಮಂಗಳೂರಿನ ಒಂದು ದೊಡ್ಡ ವೇದಿಕೆಯಲ್ಲಿ ಜನಾರ್ಧನ ಪೂಜಾರಿರವರಿಗೆ,ಕರಾವಳಿಯ ಎಲ್ಲಾ ರಾಜಕೀಯ ಪಕ್ಷದ ನಾಯಕರು,ಜಾತಿ-ಭೇದವನ್ನು ಮೀರಿ ಅದರಲ್ಲೂ ಧರ್ಮ, ಜಾತಿ ಎಂಬ ಅನ್ವರ್ಥ ನಾಮವನ್ನು ಬದಿಗೊತ್ತಿ ಗೌರವಿಸಬೇಕು,ಈ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು.

ಕರಾವಳಿಯಲ್ಲಿ ಧರ್ಮ ಧರ್ಮದ ನಡುವೆ ಆಳವಾದ ಕಂದಕವೇ ನಿರ್ಮಾಣವಾಗಿದೆ.! ದಿನೇ ದಿನೇ ಅದು ಬಿಗಡಾಯಿಸುತ್ತಲೇ ಇದೆ. ಇದನ್ನು ಸ್ವಲ್ಪವಾದರೂ,ಒಂದು ದಿನಕ್ಕಾದರು ಪೂಜಾರಿಯವರ ಗೌರವಯುತ ವೇದಿಕೆಯ ನಡುವೆ ಸಹಬದಿಗೆ ತರೋಣ..!!

ಜನಾರ್ಧನ ಪೂಜಾರಿಯವರಿಗೆ ಅಂದು ನಡೆಯುವ ಅಭಿಮಾನದ ಬೃಹತ್ ಕಾರ್ಯಕ್ರಮಕ್ಕೆ ಮಂಗಳೂರಿಗೆ ಮಂಗಳೂರೇ ನವ ವಧುವಿನಂತೆ ಶೃಂಗಾರಗೊಳ್ಳಬೇಕು.!
ಕರಾವಳಿ ಇಂತಹ ಕಾರ್ಯಕ್ರಮವನ್ನು ಇಷ್ಟರವರೆಗೆ ನೋಡಿರಲು ಸಾಧ್ಯವಿರಬಾರದು.ಅಂತಹ ಕಾರ್ಯ ಯೋಜನೆ ಸಿದ್ಧವಾಗಬೇಕು.ಜಾತಿ,ಮತ, ಧರ್ಮ ಮತ್ತು ಪಕ್ಷವನ್ನು ಬದಿಗೆ ಸರಿಸಿ ಸಾಮಾನ್ಯ ವ್ಯಕ್ತಿಯಾಗಿ ಆ ಸಂಭ್ರಮದಲ್ಲಿ ಭಾಗಿಯಾಗಬೇಕು. ಕಾರ್ಯಕ್ರಮದಲ್ಲಿ “ಪೂಜಾರಿಯವರೇ ಕೇಂದ್ರ ಬಿಂದು”ಆಗಿದ್ದು,ರಾಜ್ಯದ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಮತ್ತು ಕೇಂದ್ರದ ಉನ್ನತ ಸಚಿವರು ಭಾಗಿಯಾಗಬೇಕು.ಅದರ ಜೊತೆಗೆ 100 ಸಾಧಕರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಬೇಕು.ಬಡತನದಿಂದ ಮೇಲೆದ್ದು ಬಂದ ಸಾಧಕರಾಗಿರಬೇಕು.

ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ” ಬಿಲ್ಲವ ಸಂಘಟನೆಗಳು” ಹೊರಬೇಕು.(ಇದು ಬಿಲ್ಲವ ಸಂಘಟನೆಗಳ ಅಸ್ಥಿತ್ವದ ಪ್ರಶ್ನೆ.) ಬಿಲ್ಲವ ಸಂಘಟನೆಗಳೇ ಹೊರಲೇಬೇಕು..!! ಅಷ್ಟೇ..
ನಿಮ್ಮ ಜೊತೆ ಎಲ್ಲಾ ಸಂಘಟನೆಗಳನ್ನು ಜೊತೆ ಸೇರಿಸಿಕೊಂಡು ಸಾಗಬೇಕು.(ದೇಶ ವಿದೇಶದಲ್ಲಿರುವ ಸಾವಿರಾರು ಸಂಘಟನೆಗಳು ಬಿಲ್ಲವರಲ್ಲಿ ಇದೆ.)

ಒಂದು ರಾಜಕೀಯ ರಹಿತ ಉತ್ತಮ ವ್ಯಕ್ತಿ ಇದರ ಮೇಲ್ವಿಚಾರಣೆಯನ್ನು ನಡೆಸಬೇಕು.

ಕರಾವಳಿ ಒಮ್ಮತ ನೀಡುವುದರಲ್ಲಿ ಸಂದೇಹವಿಲ್ಲ ..!! ಒಂದು ಉತ್ತಮ ದಿನವನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಕಾರ್ಯ ಪ್ರವೃತ್ತರಾಗುವುದು ಒಳ್ಳೆಯದು.. ಆದಷ್ಟು ಬೇಗ..!!

ಮುಂದೊಂದು ದಿನ ಕಣ್ಣೀರಿನ ದಾರಿಯಲ್ಲಿ ನೆನೆಯುವುದು ಬೇಡ.. ಅಲ್ಲವೇ…

wwww.billavaswarriors.com

✍️ ವಿಜೇತ್ ಪೂಜಾರಿ ಶಿಬಾಜೆ


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »