TOP STORIES:

ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ


ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ

ಸಾಮಾನ್ಯವಾಗಿ ಸಚಿವರಾದವರಿಗೆ ಸ್ಥಳೀಯವಾಗಿ ಸೆಕ್ರೇಟರಿ, ಆಪ್ತಸಹಾಯಕರು ಇರುತ್ತಾರೆ. ಪೊಲೀಸ್ ಭದ್ರತೆ ಇರುತ್ತದೆ. ಆದರೆ ಕೇಂದ್ರ ಸಚಿವರಾಗಿದ್ದ ಬಿ.ಜನಾರ್ದನ ಪೂಜಾರಿಯವರಿಗೆ ಈ ಯಾರು ಇರಲಿಲ್ಲ ಎಂದರೆ ಆಶ್ಚರ್ಯ. ಆದರೆ ಇದು ವಾಸ್ಯವ. ಅವರು ಕೇಂದ್ರ ಸಚಿವರಾಗಿ ಇದ್ದಷ್ಟು ಕಾಲವೂ ಸ್ಥಳೀಯವಾಗಿ ಇರಲಿಲ್ಲ ಎಂದರೆ ನಿಜಕ್ಕೂ ಕುತೂಲವೇ ಹೌದು.

ಜನಾರ್ದನ ಪೂಜಾರಿ ದೆಹಲಿಯಿಂದ ಬರುವಾಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಜನಜಂಗುಳಿ ಇರುತ್ತಿತ್ತು, ಅವರು ದೆಹಲಿಗೆ ಹೋಗುವಾಗಲೂ ಅದೇ ಸ್ಥಿತಿ. ಹಾಗಾದರೆ ಇವರ ಕೆಲಸಗಳನ್ನು ಇಲ್ಲಿ ಯಾರು ಮಾಡುತ್ತಿದ್ದರು, ಅವರ ಪತ್ರಗಳನ್ನು ಯಾರು ಬರೆಯುತ್ತಿದ್ದರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.

ಸಾಲ ಮೇಳವಿರುವಾಗ ಜಿಲ್ಲಾ ಲೀಡ್ ಬ್ಯಾಂಕ್ ನವರು ಪತ್ರಿಕೆಗಳಿಗೆ ವಿಷಯ ತಿಳಿಸುತ್ತಿದ್ದರು. ಅವರು ಕೊಟ್ಟ ಸಮಯಕ್ಕೆ ಸರಿಯಾಗಿ ಹೋದರೆ ಹಿಂದೆ ಬರುವ ತನಕವೂ ಲೀಡ್ ಬ್ಯಾಂಕ್ ನವರ ಜವಾಬ್ದಾರಿ. ತಿನ್ನುವುದು, ಊಟ ಮಾಡುವುದು ಎಲ್ಲವೂ ಅವರದೇ ಹೊಣೆ.

ಸಾಲ ಮೇಳಕ್ಕೆ ಬರುವಾಗ ಪೂಜಾರಿ ಕೈಯಲ್ಲಿ ಒಂದು ಕಾಗದ ತರುತ್ತಿದ್ದರು. ಆದರೆ ಅದನ್ನು ಓದಿ ಹೇಳುವ ಕ್ರಮವಿರಲಿಲ್ಲ, ಏನಿದರೂ ಭಾಷಣದಲ್ಲಿ ಹೇಳುತ್ತಿದ್ದರು. ಪೂಜಾರಿಯವರು ಒಂದು ದಿನವೂ ಬರೆದು ತಂದ ಭಾಷಣವನ್ನು ಓದಿದ್ದನ್ನು ಕಾಣಲಿಲ್ಲ. ಎಲ್ಲವೂ ನೆನಪು ಶಕ್ತಿ. ಅಂಕಿ ಅಂಶವನ್ನು ಹೇಳುವಾಗ ಮಾತ್ರ ಅವರು ತಾವು ತಂದಿದ್ದ ಕಾಗದ ನೋಡುತ್ತಿದ್ದರು.

ಕೆಲವು ಸಲ ಕಾರ್ಯಕರ್ತರು ತಾವೂ ಹೇಳುತ್ತಿದ್ದ ಅಹವಾಲುಗಳನ್ನು ಕಿವಿಗೊಟ್ಟು ಕೇಳಿ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ದೆಹಲಿಯಿಂದ ಬರುವಾಗ ಕಾರ್ಯಕರ್ತರ ಕೈಗೆ ಲಿಖಿತವಾಗಿ ಏನನ್ನೂ ಕೊಡುತ್ತಿರಲಿಲ್ಲ. ಸರ್ಕಾರದಿಂದ ಆದೇಶವೇ ವ್ಯಕ್ತಿಗಳಿಗೆ ಬರುತಿತ್ತು.

ಈ ಕಾರ್ಯಕ್ರಮವನ್ನು ಪೂಜಾರಿ ಅವರು ಎಂದು ತಪ್ಪಿಸಲಿಲ್ಲ. ಅವರು ಮಂತ್ರಿಯಾಗಿದ್ದಾಗ ಬ್ಯಾಂಕ್ ಡೈರೆಕ್ಟರ್ ಗಳು ಅನೇಕ ಮಂದಿ. ಹಾಗೆಯೇ ಕೇಂದ್ರ ಸರ್ಕಾರದ ವಿವಿಧ ಸಮಿತಿಗಳಿಗೆ ಪೂಜಾರಿ ಅಭಿಮಾನಿಗಳಾಗುತ್ತಿದ್ದರು. ಆದರೆ ಇವರ ಹೆಸರನ್ನು ಪೂಜಾರಿಯವರು ಬರೆದಿಟ್ಟುಕೊಳ್ಳುತ್ತಿರಲಿಲ್ಲ ಅಥವಾ ನನೆಗೆ ನೆನಪಿರಲಿಲ್ಲ, ಇನ್ನೊಮ್ಮೆ ಬರೆದುಕೊಡು ಎನ್ನುತ್ತಿರಲಿಲ್ಲ. ಇದು ಪೂಜಾರಿಯವರ ಸ್ಟೈಲ್ ಆಗಿತ್ತು.

ಸಚಿವರಾದವರಿಗೆಂದೇ ಸ್ಥಳೀಯ ಕಚೇರಿಯೂ ಇರಲಿಲ್ಲ. ಅವರು ಬರುವುದೇ ಸರ್ಕೂಟ್ ಹೌಸ್ ಗೆ. ಅಲ್ಲಿಂದಲೇ ದೆಹಲಿಗೆ ಹೋಗುವುದು, ಬಂಟ್ವಾಳದ ಮನೆಗೆ ಬರುವುದು. ಕಾರ್ಯಕರ್ತರಿಗೂ ಬಂಟ್ವಾಳದ ಮನೆಗೆ ಹೋಗುವ ಅವಕಾಶವಿಲ್ಲ.

ಹಾಗೆ ನೋಡಿದರೆ ಸಚಿವರಾದರೆ ಖರ್ಚು ಬಹಳವಾಗುತ್ತದೆ. ಕನಿಷ್ಟ ಸ್ಥಳೀಯವಾಗಿಯೇ ಸಿಬ್ಬಂಧಿ, ಕಚೇರಿ ಈ ಎಲ್ಲವೂ ಸರ್ಕಾರದ ಖರ್ಚಿನಲ್ಲಿಯೇ ಹೋಗುತ್ತದೆ. ಹೀಗೆ ಆಗುವ ಲೆಕ್ಕಾಚಾರವೆಷ್ಟು ಇದೆಲ್ಲವೂ ಶೂನ್ಯ. ಆದರೂ ಪೂಜಾರಿಯವರು ದೇಶ ಸುತ್ತಾಡುತ್ತಿದ್ದರು ಆ ಖರ್ಚಿನವಿವರವೂ ಇರಲಿಲ್ಲ.

ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದಾಗ ಅವರ ಕಾರಿನ ಬಾಗಿಲು ತೆಗೆಯಲು ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದರು. ಪೂಜಾರಿಯವರನ್ನು ಹತ್ತಿರದಿಂದ ನೋಡಿದವರೂ ಕೂಡಾ ಈ ಗುಣಗಳನ್ನು ಕಂಡು ಆಶ್ಚರ್ಯ ಪಡುತ್ತಿದ್ದರು. ಇದು ಪೂಜಾರಿಯವರಿಂದ ಮಾತ್ರ ಸಾಧ್ಯವೆಂದು ಸುಮ್ಮನಾಗುತ್ತಿದ್ದರು.

ಜನಾರ್ದನ ಪೂಜಾರಿಯವರು ಹೂವಿನ ಮಾಲೆ ಸ್ವೀಕರಿಸುತ್ತಿರಲಿಲ್ಲ, ಈಗಲೂ ಅವರು ಅದೇ ಕ್ರಮ. ಆದರೆ ಬೇರೆಯವರಿಗೆ ಮಾಲೆ ಹಾಕುವುದನ್ನು ಮಾತ್ರ ಮಾಡುತ್ತಿದ್ದಾರೆ. ಸ್ಪಾಟ್ ನಲ್ಲಿಯೇ ಹಣ ಸಂಗ್ರಹಮಾಡಿ ಅಶಕ್ತರಿಗೆ ಹಂಚುವುದು ಪೂಜಾರಿಯವರ ಯೂನೀಕ್. ಆ ಕ್ಷಣ ಬಂದಾಗ ಕೆಲವರು ದೂರ ಹೋಗುವುದು ಉಂಟು, ಆದರೆ ಪೂಜಾರಿಯವರು ಕಾಣಿಸದಿದ್ದವರ ಹೆಸರು ಕರೆದು ಹಣದ ಮೊತ್ತ ಹೇಳಿಸುತ್ತಿದ್ದರು, ಕ್ಷಣಕ್ಕೆ ಆ ವ್ಯಕ್ತಿಯ ಕಿಸೆಯಲ್ಲಿ ಇಲ್ಲದಿದ್ದರೂ ಸ್ಥಳದಲ್ಲೆಯೇ ಸಾಲ ಪಡೆದು ಹಣ ಕೊಡಿಸುತ್ತಿದ್ದರು.

ಒಬ್ಬ ಸಚಿವರಾಗಿದ್ದರೂ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಮುಂಗೋಪಿ, ತಕ್ಷಣಕ್ಕೆ ಸಿಡುಕು ಅವರ ಗುಣ. ಇನ್ನೊಂದು ಸತ್ಯವೆಂದರೆ ಅವರ ಮಗ ತೀರಿಕೊಂಡ ಬಳಿಕ ಸಿಟ್ಟಿನ ಅಂಶ ಬಹಳಷ್ಟು ಕಡಿಮೆಯಾಗಿದೆ. ಅವರು ಮೊದಲಿನಂತೆ ಎಗರಾಡುವುದಿಲ್ಲ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಆದರೆ ಒಂದೊಂದು ಸಲ ಅವರು ಅದನ್ನೂ ಮೀರುತ್ತಾರೆ.
ಈಗ ಸಚಿವರಾದವರೂ, ಶಾಸಕರಾದವರು ತಮ್ಮ ಸಾಧನೆಗಳನ್ನು ಪುಸ್ತಕ ತರುವ ಪರಂಪರೆ ಬಂದಿದೆ. ಆದರೆ ಜನಾರ್ದನ ಪೂಜಾರಿ ಅವರು ಇಂಥ ಪುಸ್ತಕ ತರುತ್ತಿದ್ದರೆ ಬಹುಷ ಅವರ ‘ಸಾಲಮೇಳದ ಸಂಗ್ರಾಮ’ ಬಹಳ ಹಿಂದೆಯೇ ಬರುತ್ತಿತ್ತು ಅಲ್ಲವೇ.
ಆದರೂ ಬಿ.ಜನಾರ್ದನ ಪೂಜಾರಿ ನಾನು ವೈಯಕ್ತಿಕವಾಗಿ ನೋಡಿದ ಅಪರೂಪದ ರಾಜಕಾರಣಿ. ಬೇರೆಯವರು ಹೊಗಳುತ್ತಾರೋ ಇಲ್ಲವೋ ಎನ್ನುವುದನ್ನು ನಾನು ಚಿಂತಿಸುವುದಿಲ್ಲ.

ಚಿದಂಬರ ಬೈಕಂಪಾಡಿ


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »