TOP STORIES:

ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜೇಶ್ ವಿಟ್ಲ


ಒರ್ವ ವ್ಯಕ್ತಿಯೊಳಗಿರುವ ಪ್ರತಿಭೆ ಆತನನ್ನು ಸಾಧನೆಯ ಶಿಖರದೆಡೆಗೆ ಕೊಂಡೊಯ್ಯುವ ಜೊತೆಗೆ ಇತರರಿಗೂ ಸ್ಫೂರ್ತಿಯಾಗುತ್ತದೆ ಎನ್ನುವುದಕ್ಕೆ ಉತ್ತಮ ನಿದರ್ಶನ ನಮ್ಮ ಸಮಾಜದ ಹೆಮ್ಮೆಯ ಪ್ರತಿಭೆ ರಾಜೇಶ್ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇವರು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಚಂದಳಿಕೆಯ ಶ್ರೀಮತಿ ಗಿರಿಜಾ ಸೀನಪ್ಪ ಪೂಜಾರಿಯವರ ಸುಪುತ್ರ.ಮೂರನೇ ತರಗತಿಯಲ್ಲಿರುವಾಗ ಮುಖಕ್ಕೆ ಬಣ್ಣ ಹಚ್ಚಿ ಕಲಾಪ್ರಪಂಚಕ್ಕೆ ಕಾಲಿಟ್ಟ ಇವರು ಪ್ರಸ್ತುತ ಬಹುಮುಖ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲತಃ ಯಕ್ಷಗಾನ ಕಲಾವಿದರಾದ ಇವರು ಮುಂದೆ ರಂಗಭೂಮಿಗೆ ಪಾದರ್ಪಣೆ ಮಾಡಿ ಸುದೀರ್ಘವಾಗಿ ಸಹಸ್ರಾರು ನಾಟಕಗಳಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ ಸ್ತ್ರೀ ವೇಷಧಾರಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹಾಗು ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನೃತ್ಯ ನಿರ್ದೇಶಕರೂ ಆಗಿರುವ ಇವರು ತಮ್ಮ ಊರಿನಲ್ಲಿ ಅನೇಕ ರೀತಿಯ ನೃತ್ಯ ಪ್ರಕಾರಗಳನ್ನು ಪರಿಚಯಿಸಿ ಹೊಸ ಹೊಸ ಕಲಾವಿದರನ್ನು ಪ್ರೇರೇಪಿಸಿದ್ದಾರೆ. ಅಲ್ಲದೆ ನೃತ್ಯ ತರಗತಿಗಳನ್ನು ನಡೆಸುವ ಮೂಲಕ ಅನೇಕ ವಿದ್ಯಾರ್ಥಿಗಳನ್ನು ನೃತ್ಯ ಕ್ಷೇತ್ರದಲ್ಲಿ ಪರಿಚಯಿಸುತ್ತಿದ್ದಾರೆ. ಇವರು ಓರ್ವ ಚಿತ್ರಕಲಾ ಅಧ್ಯಪಕರಾಗಿಯೂ ಅನೇಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಉತ್ತಮ ಮೂರ್ತಿ ರಚನಕಾರರಾಗಿಯು ಜನ ಮನ್ನಣೆ ಪಡೆದಿದ್ದಾರೆ.

ಆರ್ ಕೆ ಆರ್ಟ್ಸ್ ಎಂಬ ಕಲಾ ಸಂಸ್ಥೆಯ ನಿರ್ದೇಶಕರಾಗಿದ್ದು, ಮೂಲತಃ ಈ ಸಂಸ್ಥೆ ವಸ್ತ್ರಾಲಂಕಾರ ಮತ್ತು ವರ್ಣಾಲಂಕಾರಗಳಿಗೆ ಸಂಬಂಧಪಟ್ಟ ಸಂಸ್ಥೆಯಾಗಿದೆ. ನಂತರ ಇದರ ಉಪ ಸಂಸ್ಥೆಗಳಾಗಿ ಆರ್ ಕೆ ಕುಣಿತ ಭಜನ ತಂಡ, ಆರ್ ಕೆ ಯಕ್ಷಗಾನ ಕಲಾ ತಂಡ, ಆರ್ ಕೆ ಚಿನ್ನರ ಮನೆ ನೃತ್ಯ ತಂಡಗಳನ್ನು ಆರಂಭಿಸಿದರು. ಮುಂದೆ ಆರ್ ಕೆ ಕ್ರಿಯೇಷನ್ ಎಂಬ ತಂಡವನ್ನು ಕಟ್ಟಿಕೊಂಡ ಇವರು “ನಮ್ಮ ಜನ ನಮ್ಮ ಹೆಮ್ಮೆ” ಎಂಬ ವೇದಿಕೆಯಡಿಯಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕಾರ್ಯನಿರ್ವಹಿಸಿದ ವರನ್ನು ಕರೆಯಿಸಿ ಮಾತನಾಡಿಸುವ ಮೂಲಕ ಅವರನ್ನು ಜನತೆಗೆ ಪರಿಚಯಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಇವರ ಸಂಸ್ಥೆಯಲ್ಲಿ ಸಂಗೀತ, ಚಿತ್ರಕಲೆ, ನೃತ್ಯ, ಯಕ್ಷಗಾನ, ಕ್ಲೇಮಾಡ್ಲಿಂಗ್ ಅಲ್ಲದೆ ಇತರೆ ಪಠ್ಯತೇರ ಚಟುವಟಿಕೆಗಳಿಗೆ ಸಹಕಾರವಾಗುವಂತಹ ಕಲಾಪ್ರಕಾರಗಳ ತರಬೇತಿಯನ್ನು ನಡೆಸುವುದರ ಜೊತೆಗೆ ಬೇಸಿಗೆ ಶಿಬಿರಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯವುಳ್ಳ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ತಂಡ ರಾಜ್ಯ ಮತ್ತು ಹೊರರಾಜ್ಯಗಳ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದು ಮಾತ್ರವಲ್ಲದೆ ರಾಜ್ಯಮಟ್ಟದ ಅನೇಕ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ನಿರ್ದೇಶನದ ಜನಪದ ನೃತ್ಯ ಮತ್ತು ಕೋಲಾಟ ನೃತ್ಯ ರಾಜ್ಯಮಟ್ಟದಲ್ಲಿ ಅನೇಕ ಬಾರಿ ಪ್ರಶಸ್ತಿಯನ್ನು ಪಡೆದಿದೆ. ಇವರು ಉತ್ತಮ ವರ್ಣಾಲಂಕಾರ ಕಲಾವಿದನಾಗಿದ್ದು ಇವರ ವರ್ಣಾಲಂಕಾರಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿಗಳು ದೊರೆತಿದೆ. ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ನಿರ್ದೇಶನದ ಅನೇಕ ನೃತ್ಯ ಪ್ರಕಾರಗಳು ಪ್ರಸಾರಗೊಂಡಿದೆ. ಬೆಂಗಳೂರು ಜನಪದ ಜಾತ್ರೆ, ಹಂಪಿ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯಮಟ್ಟದ ಯುವಜನೋತ್ಸವ, ಕರಾವಳಿ ಉತ್ಸವ, ಗಡಿನಾಡ ಉತ್ಸವಗಳಲ್ಲೂ ಭಾಗವಹಿಸಿದ್ದಾರೆ.

ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಕೆಲವು ಧಾರವಾಹಿಗಳಲ್ಲಿ ಅಭಿನಯ ಹಾಗೂ ಅನೇಕ ಕಿರು ಚಿತ್ರಗಳಲ್ಲಿ ನಟನೆಯ ಅನುಭವವನ್ನು ಹೊಂದಿದ್ದಾರೆ. ಇವರದೇ ನಿರ್ದೇಶನ ಮತ್ತು ಪರಿಕಲ್ಪನೆಯಲ್ಲಿ ಮೂಡಿಬಂದ ಉತ್ತಮ ಸಾಮಾಜಿಕ ಸಂದೇಶ ಕೊಡುವಂತಹ ಕಿರುಚಿತ್ರ “ವಿಷಾಮೃತ” ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ.

ಕಲಾ ಸೇವೆಯ ಜೊತೆ ಜೊತೆಗೆ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವವುಳ್ಳ ಇವರು ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ, ಅಂಬೇಡ್ಕರ್ ಜಯಂತಿ ಹೀಗೆ ಬೇರೆ ಬೇರೆ ಆಚರಣೆಗಳನ್ನು ನಡೆಸುವ ಮೂಲಕ ದಿನಾಚರಣೆಗಳ ಮಹತ್ವವನ್ನು ಜನರಿಗೆ ತಿಳಿಸುತ್ತಿದ್ದಾರೆ. ವಿಟ್ಲದ ಗ್ರಾಮಕ್ಕೆ ಸಾಲುಮರದ ತಿಮ್ಮಕ್ಕನವರನ್ನು ಕರೆಯಿಸಿ ಪರಿಸರ ಸಂರಕ್ಷಣೆಯ ಕುರಿತಾಗಿ ಜನಜಾಗೃತಿ ಮೂಡಿಸಿದ ಕೀರ್ತಿ ಇವರದ್ದಾಗಿದೆ. ಕೊರೋನಾ ಸಂಕಷ್ಟದ ಈ ಅವಧಿಯಲ್ಲಿ ದಾನಿಗಳ ನೆರವಿನೊಂದಿಗೆ ತಮ್ಮ ಸಂಸ್ಥೆಯ ಮೂಲಕ ನೊಂದ ಜನತೆಯ ಧ್ವನಿಯಾಗಿ ಆಹಾರ ಕಿಟ್ ಗಳ ವಿತರಣೆ ಮಾತ್ರವಲ್ಲದೆ ಅನೇಕ ರೀತಿಯಲ್ಲಿ ಸಹಾಯವನ್ನು ಮಾಡುತ್ತಿದ್ದಾರೆ.

“ಕಲಾವಿದರ ಬದುಕು ಎಂತಹದೇ ಪರಿಸ್ಥಿತಿಯಲ್ಲಿ ನಿಂತ ನೀರಾಗಬಾರದು ಅದು ನಿತ್ಯ ನಿರಂತರವಾಗಿರಬೇಕು” ಎನ್ನುವ ಹಾಗು ಜನತೆಗೆ ಜೀವನ ಮೌಲ್ಯಗಳ ಕುರಿತು ಸದಾ ತಿಳಿಸ ಬಯಸುವ ಇವರು ತಾನು ಬೆಳೆಯುವುದಕ್ಕೆ ಸದಾ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಕೃಷ್ಣಯ್ಯ ಕೆ ವಿಟ್ಲ ಅರಮನೆ ಹಾಗು ಮಾದರಿ ಶಾಲೆ ವಿಟ್ಲವನ್ನು ಸದಾ ಸ್ಮರಿಸುತ್ತಾರೆ. ತಮ್ಮ ಸುದೀರ್ಘ ಕಲಾ ಜೀವನದಲ್ಲಿ ಗ್ರಾಮೀಣ ಪ್ರದೇಶದ ಹಾಗೂ ವಿಶೇಷವಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳನ್ನು ಸಂಘಟಿಸಿ, ಕಲೆ ಹಾಗೂ ಸಂಸ್ಕ್ರತಿ, ಜೀವನ ಮೌಲ್ಯಗಳನ್ನು ನೀಡುತ್ತಿರುವ ರಾಜೇಶ್ ವಿಟ್ಲರವರ ಕಲಾಜೀವನ, ಸಾಮಾಜಿಕ ಕಳಕಳಿಯ ಮನೋಭಾವ, ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಇವರ ಕಲಾ ಬದುಕು ಹೀಗೆ ಮುಂದುವರಿಯಲಿ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸನ್ಮಾನಿಸಲ್ಪಟ್ಟ ಇವರಿಗೆ ಇನ್ನಷ್ಟು ಸನ್ಮಾನಗಳು ಪ್ರಶಸ್ತಿ ಪುರಸ್ಕಾರಗಳು ಅರಸಿ ಬರಲಿ, ಇನ್ನೂ ಹೆಚ್ಚು ಹೆಚ್ಚು ಸೇವಾ ಕಾರ್ಯಗಳು ಇವರಿಂದ ನಡೆಯುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಬರಹ:
ನಳಿನಿ ಎಸ್ ಸುವರ್ಣ | ಜಾರ್ಕಳ ಮುಂಡ್ಲಿ


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »