TOP STORIES:

ಇನ್ಮುಂದೆ ಓರ್ವ ವ್ಯಕ್ತಿ ಇಷ್ಟೇ ಸಿಮ್ ಹೊಂದಿರಬೇಕೆಂಬ ಸರ್ಕಾರದ ಹೊಸ ನಿಯಮ!


ದೂರ ಸಂಪರ್ಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ದೂರಸಂಪರ್ಕ ಇಲಾಖೆಯು ಇದೀಗ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಓರ್ವ ವ್ಯಕ್ತಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು?, ಅಪ್ರಾಪ್ತ ವಯಸ್ಕರಿಗೆ ಸಿಮ್ ಖರೀದಿಸಲು ಅವಕಾಶವನ್ನು ನೀಡದಂತೆ ಟೆಲಿಕಾಂ ಕಂಪೆನಿಗಳು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದು ಸೇರಿದಂತೆ ಹಲವು ಬದಲಾವಣೆಗಳನ್ನು ಟೆಲಿಕಾಂ ವ್ಯವಸ್ಥೆಯಲ್ಲಿ ತಂದಿದೆ.

ದೂರ ಸಂಪರ್ಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ದೂರಸಂಪರ್ಕ ಇಲಾಖೆಯು ಇದೀಗ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಓರ್ವ ವ್ಯಕ್ತಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು?, ಅಪ್ರಾಪ್ತ ವಯಸ್ಕರಿಗೆ ಸಿಮ್ ಖರೀದಿಸಲು ಅವಕಾಶವನ್ನು ನೀಡದಂತೆ ಟೆಲಿಕಾಂ ಕಂಪೆನಿಗಳು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದು ಸೇರಿದಂತೆ ಹಲವು ಬದಲಾವಣೆಗಳನ್ನು ಟೆಲಿಕಾಂ ವ್ಯವಸ್ಥೆಯಲ್ಲಿ ತಂದಿದೆ. ಇದರಿಂದ ಟೆಲಿಕಾಂ ಕಂಪೆನಿಗಳು ನಿರ್ದಿಷ್ಟ ಮಾನದಂಡಗಳನ್ನು ಹೊಂದಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ದೂರಸಂಪರ್ಕ ಇಲಾಖೆಯ ನೂತನ ನಿಯಮಗಳ ಪ್ರಕಾರ, ಭಾರತದಲ್ಲಿ ಇನ್ಮುಂದೆ ಹೊಸ ಸಿಮ್ ಖರೀದಿಸಲು ಗ್ರಾಹಕ ಸ್ವಾಧೀನ ನಮೂನೆ ಎಂಬ ಫಾರ್ಮ್ ಅನ್ನು ಭರ್ತಿ ಮಾಡಬೇಕು ಎಂಬ ಮಾನದಂಡವನ್ನು ತರಲಾಗಿದೆ. ಈ ನಿಯಮದ ಪ್ರಕಾರ, ಹೊಸ ಫಾರ್ಮ್ ಒಂದನ್ನು ಗ್ರಾಹಕರು ಮತ್ತು ಟೆಲಿಕಾಂ ಆಪರೇಟರ್‌ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಕೆಲವು ನಿಯಮ ಮತ್ತು ಷರತ್ತುಗಳಲ್ಲಿ ಬಂದಿರುವ ಈ ನಿಯಮಗಳಿಗೆ ಗ್ರಾಹಕರು ಅರ್ಹರಾಗಿರಬೇಕಿದ್ದು, ಇದು ಗ್ರಾಹಕರು ಮತ್ತು ಟೆಲಿಕಾಂಗಳ ನಡುವಿನ ಒಪ್ಪಂದವಾಗಿರಲಿದೆ ಎಂದು ಹೇಳಲಾಗಿದೆ.

ಹಾಗೆಯೇ, ಭಾರತದಲ್ಲಿ ಓರ್ವ ವ್ಯಕ್ತಿ ಎಷ್ಟು ಸಿಮ್ ಹೊಂದಬಹುದು ಎಂಬುದನ್ನು ಸಹ ದೂರ ಸಂಪರ್ಕ ಇಲಾಖೆ ತಿಳಿಸಿದ್ದು, ಹೊಸ ನಿಯಮದಂತೆ, ದೇಶದ ಓರ್ವ ಪ್ರಜೆಯು ತನ್ನ ಹೆಸರಿನಲ್ಲಿ ( ಅವನು ಮತ್ತು ಅವಳ) ಒಟ್ಟು 18 ಸಿಮ್‌ಗಳನ್ನು ಖರೀದಿಸಬಹುದು ಎಂದು ಇಲಾಖೆ ತಿಳಿಸಿದೆ. ಈ 18 ಸಿಮ್‌ಗಳಲ್ಲಿ ಸಾಮಾನ್ಯ ಸಂವಹನಕ್ಕಾಗಿ 9 ಸಿಮ್‌ಗಳನ್ನು ಖರೀದಿಸಬಹುದು ಹಾಗೂ M2M ಸಂವಹನಕ್ಕಾಗಿ 9 ಸಿಮ್‌ಗಳನ್ನು ಖರೀದಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಗ್ರಾಹಕರು ತಮ್ಮ ಡಿವೈಸ್‌ ಬದಲಾಯಿಸಿದರೆ ಹೊಸ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಅಂದರೆ, ಇದೀಗ ಓರ್ವ ವ್ಯಕ್ತಿ ಇದೀಗ ತನ್ನ ಹೆಸರಿನಲ್ಲಿ ಸಾಮಾನ್ಯ ಕೆಲಸಗಳಿಗೆ 9 ಸಿಮ್‌ಗಳನ್ನು ಹೊಂದಬಹುದಾಗಿದೆ. ಹಾಗೂ M2M (ಮಷಿನ್ ಟು ಮಷಿನ್) ಸಿಮ್ ಪಡೆಯಲು ಗ್ರಾಹಕರು ಪರಿಶೀಲನಾ ನಮೂನೆಯನ್ನು ಸಲ್ಲಿಸಬೇಕು ಎಂದು ಹೇಳಲಾಗಿದೆ. ಹಾಗೆಯೇ, ಅಪ್ರಾಪ್ತ ವಯಸ್ಕರಿಗೆ ಸಿಮ್ ಪಡೆಯಲು ಯಾವುದೇ ಅವಕಾಶವನ್ನು ಇದೀಗ ತೆಗೆದುಹಾಕಲಾಗಿದೆ. ಇದರರ್ಥ ಯಾವುದೇ ಗ್ರಾಹಕರು 18 ವರ್ಷಕ್ಕಿಂತ ಕಡಿಮೆ ಇದ್ದರೆ, ಟೆಲಿಕಾಂ ಆಪರೇಟರ್‌ಗಳಿಂದ ಸಿಮ್ ಖರೀದಿಸಲು ಸಾಧ್ಯವಿಲ್ಲ. ಹಾಗೂ ಸ್ಥಿರಲೈನ್ ಸಂಪರ್ಕಕ್ಕೂ ಸಹ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಇಲಾಖೆಯು ಇಂತಹ ಮಾನದಂಡಗಳನ್ನು ತರಲು ಹೆಚ್ಚುತ್ತಿರುವ ಸಿಮ್ ಕಾರ್ಡ್‌ ವಂಚನೆ ಪ್ರಕರಣಗಳು ಕಾರಣ ಎನ್ನಲಾಗಿದೆ. ಹಾಗೂ ಗ್ರಾಹಕರು ತಮ್ಮ ಹೆಸರುಗಳಲ್ಲಿನ ಸಿಮ್ ಅನಧಿಕೃತ ಬಳಕೆಯಾಗುತ್ತಿದೆಯಾ ಎಂಬುದನ್ನು ಪರೀಕ್ಷಿಸಲು ಹೊಸ ಕ್ರಮವನ್ನು ನೀಡಲಾಗಿದೆ. ನೀವು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೋಡಲು ಇದೀಗ ಅನುಮತಿಸಿದ್ದು, tafcop.dgtelecom.gov.in ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಲಗ್ಗತ್ತಿಸಿ ಸಿಮ್ ದುರುಪಯೋಗ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »