TOP STORIES:

ನಿಮ್ಮ ವಾಟ್ಸ್​ಆಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣ ಡಿಲೀಟ್ ಮಾಡಿ


ವಾಟ್ಸ್​ಆಯಪ್ ಪ್ಲಸ್ ಆಯಪ್ ಇಂದು ಲಕ್ಷಕ್ಕೂ ಅಧಿಕ ಮಂದಿ ಉಪಯೋಗ ಮಾಡುತ್ತಿದ್ದಾರೆ. ನೀವು ಇಂಥಹ ಅನಧಿಕೃತ ಆಯಪ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಅನ್​ಇನ್​ಸ್ಟಾಲ್ ಮಾಡಿ.

ಒಂದು ಆಯಪ್ ಫೇಮಸ್ ಆಗಿದೆ ಎಂದಾದರೆ ಅದಕ್ಕೆ ಪೂರಕವಾದ ಅಥವಾ ಥೇಟ್ ಅದರಂತೆ ಇರುವ ನಕಲಿ ಆಯಪ್​ಗಳು (Fake App) ಕೂಡ ಹುಟ್ಟಿಕೊಳ್ಳುತ್ತವೆ. ಗೂಗಲ್ ಪ್ಲೇ ಸ್ಟೋರ್​​ನಲ್ಲಿ (Goolge Play store) ಈಗಲೂ ಅಂತಹ ಅನೇಕ ಆಯಪ್​ಗಳು ರಾರಾಜಿಸುತ್ತಿವೆ. ಇಂತಹ ಫೇಕ್ ಆಯಪ್​ಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ, ಇವು ನಿಮ್ಮಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ, ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕಲೆಹಾಕಿ ಹಣ ದೋಚುತ್ತದೆ. ಈರೀತಿ ಅನೇಕ ಪ್ರಕರಣಗಳು ವರದಿಯಾಗಿದ್ದು ಗೊತ್ತೇ ಇದೆ. ಸದ್ಯ ವಾಟ್ಸ್​ಆಯಪ್​ನಂತೆ ಇರುವ ವಾಟ್ಸ್​ಆಯಪ್ ಪ್ಲಸ್ (WhatsApp Plus) ಎಂಬ ಆಯಪ್ ಅನ್ನು ಅನೇಕರು ಉಪಯೋಗಿಸುತ್ತಿದ್ದಾರೆ ಎಂಬುದು ತಿಳಿದುಬಂದಿದ್ದು ಅಂಥವರಿಗೆ ಕಂಟಕ ಎದುರಾಗಿದೆ.

 

ಹೌದು, ವಾಟ್ಸ್​ಆಯಪ್ ಪ್ಲಸ್ ಆಯಪ್ ಇಂದು ಲಕ್ಷಕ್ಕೂ ಅಧಿಕ ಮಂದಿ ಉಪಯೋಗ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದೇ ಸ್ಮಾರ್ಟ್​ಫೋನಿನಲ್ಲಿ ಎರಡು ವಾಟ್ಸ್​ಆಯಪ್ ಖಾತೆ ತೆರೆಯಲು ಸಾಧ್ಯವಿಲ್ಲ. ಹೀಗಾಗಿ ಒಂದು ಮೊಬೈಲ್​ನಲ್ಲಿ ಎರಡು ಸಿಮ್ ಬಳಸುವ ಅನೇಕರು ಒಂದು ಸಿಮ್​ನಲ್ಲಿ ಅಧಿಕೃತ ವಾಟ್ಸ್​ಆಯಪ್ ಇದ್ದರೆ, ಇನ್ನೊಂದು ಸಿಮ್​ಗಾಗಿ ವಾಟ್ಸ್​ಆಯಪ್ ಪ್ಲಸ್ ಅನ್ನು ಬಳಸುತ್ತಿದ್ದಾರೆ. ನೀವು ಹೀಗೆ ಮಾಡುತ್ತಿದ್ದರೆ ತಕ್ಷಣವೇ ವಾಟ್ಸ್​ಆಯಪ್ ಪ್ಲಸ್ ಆಯಪ್ ಅನ್ನು ಡಿಲೀಟ್ ಮಾಡಿ.

 

ವಾಟ್ಸ್​ಆಯಪ್​ ಪ್ಲಸ್​ನಿಂದ ವಾಟ್ಸ್​ಆಯಪ್​ಗೆ ತಲೆನೋವಾಗುವ ಪರಿಸ್ಥಿತಿ ಎದುರಾಗಿದ್ದು, ನೀವು ವಾಟ್ಸ್​ಆಯಪ್​ ಪ್ಲಸ್ ನಂತಹ ಅನಧಿಕೃತ ಆಯಪ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಅನ್​ಇನ್​ಸ್ಟಾಲ್ ಮಾಡಿ ಎಂದು ವರದಿಯಾಗಿದೆ. ಇಲ್ಲದಿದ್ದರೆ ವಾಟ್ಸ್​ಆಯಪ್​​ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಬಹುದು. ವಾಟ್ಸ್​ಆಯಪ್​​ ಪ್ಲಸ್ ಒಂದು ಅನಧಿಕೃತ ಆವೃತ್ತಿಯಾಗಿದ್ದು, ಬಳಕೆದಾರರಿಗೆ ಸ್ಥಿತಿಯನ್ನು ಮರೆಮಾಚುವುದು, ಮಿತಿಗಳಿಲ್ಲದೆ ಫೋಟೋಗಳನ್ನು ಕಳುಹಿಸುವುದು, ನಿರ್ಧಿಷ್ಟ ಮಿತಿಯನ್ನು ಮೀರಿ ಗುಂಪುಗಳನ್ನು ರಚಿಸುವುದು ಮುಂತಾದ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.

 

ಥರ್ಡ್ ಪಾರ್ಟಿ ಆಯಪ್​ ವಾಟ್ಸ್​ಆಯಪ್​ ಪ್ಲಸ್ ಬಳಸಿದರೆ ವಾಟ್ಸ್​ಆಯಪ್​ನಿಂದ ತಾತ್ಕಾಲಿಕ ಬ್ಯಾನ್ ಮಾಡಲಾಗುತ್ತದೆ ಎಂದು ವಾಟ್ಸ್​ಆಯಪ್ ನೀತಿ ನಿಯಮಗಳು ತಿಳಿಸುತ್ತವೆ. ಹೀಗಾಗಿ ಈ ಆಯಪ್​ಗಳನ್ನು ಬಳಸುತ್ತಿದ್ದರೆ ತಕ್ಷಣವೆ ಡಿಲೀಟ್ ಮಾಡಿ.

 

ಕಳೆದ ಆಗಸ್ಟ್ ತಿಂಗಳಲ್ಲಿ 20,70,000 ವಾಟ್ಸ್​ಆಯಪ್​ ಖಾತೆಗಳನ್ನು ಫೇಸ್​ಬುಕ್ ಒಡೆತನದ ಕಂಪನಿ ವಾಟ್ಸ್​​ಆಯಪ್ ಭಾರತದಲ್ಲಿ ನಿಷೇಧಿಸಿದೆ. ವಾಟ್ಸ್​ಆಯಪ್​ ಸುಮಾರು 420 ಕುಂದುಕೊರತೆಯ ವರದಿಗಳನ್ನು ಆಗಸ್ಟ್‌ನಲ್ಲಿ ಪಡೆದಿತ್ತು. ವಾಟ್ಸ್​​ಆಯಪ್​ ಕುರಿತಾಗಿ ಖಾತೆ ಬೆಂಬಲ (105), ನಿಷೇಧ ಮನವಿ (222), ಇತರ ಬೆಂಬಲ (34), ಉತ್ಪನ್ನ ಬೆಂಬಲ (42) ಮತ್ತು ಸುರಕ್ಷತೆ (17) ಗಳ ವಿಚಾರವಾಗಿ 420 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸ್‌ಆಯಪ್ ಅನುಸರಣೆ ಡೇಟಾ ತೋರಿಸಿದೆ. ಆದಾಗ್ಯೂ, 421 ವರದಿಗಳ ಪೈಕಿ, ವಾಟ್ಸಾಪ್ 41 ಖಾತೆಗಳ ವಿರುದ್ಧ ಪರಿಹಾರ ಕ್ರಮಗಳನ್ನು ಕೂಡ ಕೈಗೊಂಡಿದೆ.

 

 


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »