ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ

Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಸುಮಾರು ೨೦೦ಕ್ಕೂ ಮಿಕ್ಕಿ ಜನರು ಪಾಲುಗೊಂಡಿದ್ದು, ಬಿಲ್ಲವಾಸ್ ಕತಾರ್ ತನ್ನ ಸಮಾಜ ಸೇವೆಯಲ್ಲಿ ಇನ್ನೊಂದು ಮೈಲಿಗಲ್ಲು ಸೃಷ್ಟಿಸಿತು. ಆರೋಗ್ಯ ತಪಾಸಣೆಯೊಂದಿಗೆ ಉಚಿತ ವೈದ್ಯಕೀಯ ಸಲಹೆಯ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದರು. ಬಿಲ್ಲವಾಸ್ ಕತಾರ್ ನ ಕಾರ್ಯದರ್ಶಿ ಶ್ರೀ ಉಮೇಶ್ ಪೂಜಾರಿಯವರು […]
“ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರತಿಭಾ ಕುಳಾಯಿ ಆಯ್ಕೆ

ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾಜ ಸೇವಾ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರತಿಭಾ ಕುಳಾಯಿ ಮಹಿಳೆಯರ ಸ್ವಾವಲಂಬಿ ಬದುಕು ರೂಪಿಸಲು ಮಾಡಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಹಣಕಾಸು ಸೌಲಭ್ಯ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ […]
ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ

ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ. ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ. ಇದಕ್ಕೆ ಕಾರಣ ತಾನು ಬಾಲ್ಯದಲ್ಲಿ ಅನುಭವಿಸಿದ ಕಷ್ಟದ ಅನುಭವಗಳು. ವಿದ್ಯೆ ಪಡೆಯುವ ಹಂಬಲವಿದ್ದರೂ ಆರ್ಥಿಕತೆಯ ಬೆಂಬಲವಿಲ್ಲದೆ ಪರಿತಪಿಸಿದ ಕ್ಷಣಗಳು ಇಂದಿಗೂ ಅವರಿಗೆ ಕಹಿ ನೆನಪು. ಸಕ್ಕರೆ ಮನಸಿನ ದಿನಕರ್ ಪೂಜಾರಿ ಇವರು ಕಾರ್ಕಳ ತಾಲೂಕಿನ ನಕ್ಕರೆ ಎನ್ನುವ ಗ್ರಾಮದಲ್ಲಿ […]
ಬಿಲ್ಲವ ಸಮಾಜಕ್ಕಾಗಿ ಪಂದ್ಯಾಟದ ಜೊತೆಗೆ ಆರ್ಥಿಕ ಯೋಜನೆಯನ್ನು ರೂಪಿಸಿದ ರುವಾರಿ ವಿಶ್ವನಾಥ ಪೂಜಾರಿ ಕಡ್ತಲ

ಆದರಣೀಯ ಕ್ಷಣಗಳನ್ನು ಮತ್ತೊಮ್ಮೆ ಮರಳಿಸಿ ವಿದೇಶದ ಮಣ್ಣಲ್ಲೂ ಬಿಲ್ಲವರನ್ನು ಒಗ್ಗೂಡಿಸಿಕೊಂಡು ಒಂದು ಪಂದ್ಯಾಟ ನಡೆಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಮಾಡಿಯೇ ಸಿದ್ಧ ಎಂಬ ಸ್ಪಷ್ಟ ನಿಲುವಿನೊಂದಿಗೆ ಎಲ್ಲರಿಗೂ ಇಷ್ಟವಾಗಿಸಿದ ಕ್ರಿಕೆಟ್ ಪಂದ್ಯಾಟ ಮಾಡಿ ಸೈ ಎನಿಸಿಕೊಂಡ ಖ್ಯಾತಿ ಬಿಲ್ಲವ ಸಂಘ ಪುಣೆಯದ್ದು. ಉದ್ಯೋಗ ನಿಮಿತ್ತ ವಿವಿಧ ಕಡೆಗಳಲ್ಲಿದ್ದ ಬಿಲ್ಲವರನ್ನು ಒಗ್ಗೂಡಿಸಿ ”ವಲ್ಡ್೯ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್” ಆಯೋಜನೆಯು ಅವಿರತ ಶ್ರಮದ ಫಲವಾಗಿದೆ. ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಬಿಲ್ಲವ ಸಮಾಜದ ಬಾಂಧವರಿಗೆ “ದೇಯಿ ಸಂಜೀವಿನಿ” […]
ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ

ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ ಗಣ್ಯರ ಸಮ್ಮುಖದಲ್ಲಿ ಅವರ ಸಮಾಜ ಸೇವೆ ಹಾಗು ಬಿಲ್ಲವ ಸಮುದಾಯಕ್ಕೆ ಎಲ್ಲಾ ಕ್ಷೇತ್ರ ಗಳಲ್ಲಿ ನೀಡುತ್ತಿರುವ ಅಪಾರ ವಿಶೇಷ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ “ ಬಿಲ್ಲವ ಸಂಜೀವಿನಿ “ ಬಿರುದು ಪ್ರದಾನ ಮಾಡಿ ಗೌರವಿಸಿದರು. ಸೌದಿ ಅರೇಬಿಯಾದ ದಮ್ಮಮ್ ನಲ್ಲಿ 24*7 […]
ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ
ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು ಕಣಿ ಪಂಚಾಂಗ ಶ್ರವಣ ಕಾರ್ಯಕ್ರಮ ಕದ್ರಿ ಕಂಬಳ ರಸ್ತೆಯ ಮಂಜುಪ್ರಾಸಾದ ನಿಲಯದ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ವೇ। ಮೂ। ಡಾ। ಪ್ರಭಾಕರ ಅಡಿಗ ಅವರ ಮಾರ್ಗದರ್ಶನದಲ್ಲಿ ಜರಗಿತು. ರುದ್ರ ಪಾರಾಯಣ ಬಳಗ, ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ ಮತ್ತು ಶ್ರೀಮತಿ ಶಶಿಪ್ರಭಾ […]
ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ರವರು 2010ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಆಗಿ ಆಯ್ಕೆ ಗೊಂಡಿರುತ್ತಾರೆ. ಇವರು ನಿವೃತ್ತ ಸರ್ವೆ ಸೂಪರ್ ವೈಸರ್ ಬಾಲಕೃಷ್ಣ ಪೂಜಾರಿ ಕೆಂಗುಡೇಲು ಮತ್ತು ಗುಣವತಿ ದಂಪತಿಗಳ ಪುತ್ರ. ಇವರು ರಾಜಾನುಕುಂಟೆ, ಆವಲಹಳ್ಳಿ, ಕಮರ್ಷಿಯಲ್ […]
ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ

ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ ಕೊರಗಜ್ಜ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದು, ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್, ಯುವವಾಹಿನಿ ಮುಂತಾದ ಸಮಾಜ ಮುಖಿ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಾರೆ. ಇವರು ಶ್ರೀ ನಾರಾಯಣ ಗುರು,ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಶುಭಾನಂದ ಗುರು, ಶ್ರೀ ರಮಣ ಮಹರ್ಷಿ ಮುಂತಾದ […]
ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ

ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ, ರಾಷ್ಟ್ರೀಯ ಬಿಲ್ಲವ ಮಂಡಲದ ಸಂಚಾಲಕಿ,ಜೆಸಿಐ ಇಂಡಿಯಾ ಇದರ ವಲಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ರವರನ್ನು ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.ಜವಾಹರ್ ಬಾಲ್ ಮಂಚ್ರಾಷ್ಟ್ರೀಯ ಅಧ್ಯಕ್ಷ ಡಾ. ಹರಿ ದಕ್ಷಿಣ ಕನ್ನಡ ಜಿಲ್ಲಾ […]
ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್ ಅಚೀವರ್ಸ್ ಅವಾರ್ಡ್ಸ್- 2025

3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ವತಿಯಿಂದ ಗೌರವಿಸಲಾಯಿತು. ಬೆಂಗಳೂರಿನ ಪ್ರತಿಷ್ಠಿತ ದಿ ರಿಟ್ಜ್ ಕಾರ್ಲ್ಟ್ರನ್ ಹೋಟೆಲ್‌ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಘನ ಉಪಸ್ಥಿತಿ ವಹಿಸಿದ್ದರು. ರಾಜ್ಯದ ವಿವಿಧ […]