TOP STORIES:

FOLLOW US

ಶಾಂತಿ-ಸೌಹಾರ್ದತೆಯ ಸಂದೇಶ ಸಾರುವ ‘ಅಡ್ಡಣ ಪೆಟ್ಟು’: ಬಲು ವಿಶಿಷ್ಠ ಮಂಡೆಕೋಲಿನ ಈ ಅಡ್ಡಣಪೆಟ್ಟು ಆಚರಣೆ..!

ಸುಳ್ಯ: ದೈವವೇ ಬಂದು ಜಗಳ ಬಿಡಿಸಿ ಸೌಹಾರ್ದತೆಯಿಂದ ಬಾಳಿ ಎಂಬ ಗತ ಕಾಲದ ದೈವ ಸಂದೇಶವನ್ನು ಇಂದಿಗೂ ಜನ ಮಾನಸಕ್ಕೆ ಮುಟ್ಟಿಸುವ ವಿಶಿಷ್ಟ ಆಚರಣೆ ಅಡ್ಡಣಪೆಟ್ಟು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಪ್ರತಿ ವರ್ಷವೂ ನಡೆಯುತಿದೆ. ಮಂಡೆಕೋಲು ಗ್ರಾಮದ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದ ಸಂದರ್ಭದ ನಡೆಯುವವಿಶಿಷ್ಟವಾದ ಅಡ್ಡಣ ಪೆಟ್ಟು ಎಂಬ ಹೊಡೆದಾಟದ ಸಂಪ್ರದಾಯ ಜಾತ್ರೋತ್ಸವದ ಪ್ರಮುಖ ಆಕರ್ಷಣೆ. ಶ್ರೀ ವಿಷ್ಣುಮೂರ್ತಿ ದೇವರ ದರ್ಶನ ಬಲಿ, ಬಟ್ಟಲು […]

ಎಪ್ರಿಲ್ ತಿಂಗಳ ಅಕ್ಷಯ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ : ರೈಲು

ರೈಲು ಎಲ್ಲರಂತಲ್ಲ ನಾನು… ಬಯಲ ಬೆಳಕಿನಲ್ಲಿ ಕತ್ತಲು ಕೊರೆಯುವಲ್ಲಿ ಓಡಬೇಕು; ಓಡುತ್ತಲೇ ಇರಬೇಕು ಅಬ್ಬರದಿ ಬಂದೆರಗುವ ಜನಸಾಗರಕೆ ತೀರವಾಗಬೇಕು   ಶಾಂತವಾಗಿ ನಿರ್ವಾಹವಾಗಿ ಜೀವಜೀವಗಳ  ನಿಜಬಂಧುವಾಗಿ ತುಂಬಿಕೊಂಡಂತೆ ಖಾಲಿಯಾಗುತ್ತಲೇ ಇರಬೇಕು ಜೀವನದ ಇತಿಮಿತಿಯಲಿ ಗತಿ ತಿರುಗಿದಂತೆ ಹಳಿಗಳೂ ಬದಲಾಗುತ್ತವೆ, ಎಲ್ಲೋ ಕವಲೊಡೆದು ಇನ್ನೆಲ್ಲೋ ಕೂಡುತ್ತವೆ ಉದ್ವೇಗ ಉನ್ಮಾದಗಳ ಬದಿಗೊತ್ತಿ ನಯನಾಜೂಕಿನಲಿ ನಡೆಯಬೇಕು ಕೆಂಪು ನಿಶಾನೆಯೆದುರು ಸಮಾಧಾನಿಯಾಗಿರಬೇಕು ಎಲ್ಲರಂತಲ್ಲ ನಾನು ಕನಸಿಗೆ ಕಚಗುಳಿಯಿಟ್ಟು ನೂಕುವ ರಾಯಭಾರಿಯಾಗಬೇಕು ಚಿಣ್ಣರ ಕೇಕೆ, ಹರೆಯದ ಬಯಕೆ, ಇಳಿವಯಸ್ಸಿನ ಬೇಗೆಗೆ ನಿತ್ಯವೂ ಹೊಸ ಆಹ್ಲಾದವನೀಯುತ […]

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಚುನಾವಣಾ ಪ್ರಚಾರಕ್ಕಾಗಿ ಶ್ರೀ ನಾರಾಯಣ ಗುರು ಹಾಗೂ ಕೋಟಿ-ಚೆನ್ನಯರ ದುರ್ಬಳಕೆ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಹಾಗೂ ತುಳುನಾಡಿನ ಅವಳಿ ಯೋಧರಾದ ಕೋಟಿ-ಚೆನ್ನಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಪುಷ್ಪ ನಮನ ನಾಟಕ ಬಿಲ್ಲವ ಸಮುದಾಯವನ್ನು ಮೂರ್ಖರನ್ನಾಗಿಸುವ ಯತ್ನವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸಬೇಕು.   ಶ್ರೀ ನಾರಾಯಣ ಗುರು ಹಾಗೂ ಅವಳಿ ವೀರರಾದ ಕೋಟಿ-ಚೆನ್ನಯರನ್ನು ಅವಮಾನಿಸಿದ ಬಿಜೆಪಿ ಈಗ ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟು ಹೊಸ ನಾಟಕವಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವು ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ […]

ಬಿಲ್ಲವ ಸಮಾಜದ ಜನರ ಭಾವನೆ ಜತೆ ಚೆಲ್ಲಾಟ ಬೇಡ:ಸತ್ಯಜಿತ್ ಸುರತ್ಕಲ್

ಸಮುದಾಯ ಭಾವನೆ ಜತೆ ಚೆಲ್ಲಾಟ ಬೇಡ:ಸತ್ಯಜಿತ್ ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು, ಕೋಟಿ ಚೆನ್ನಯರ ಹೆಸರಿನಲ್ಲಿ ಬಿಲ್ಲವ ಸಮಾಜದ ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡುವ ಪ್ರಯತ್ನ ಮುಂದುವರಿಸಿದರೆ, ಈ ಬಾರಿ ಅದಕ್ಕೆ ತಕ್ಕ ಉತ್ತರವನ್ನು ಸಮಾಜದ ಜನತೆ ನೀಡಲಿದ್ದಾರೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜ ನಂಬಿಕಸ್ತ ಹಾಗೂ ಮುಗ್ಧ ಸಮಾಜ. ಭಾವನಾತ್ಮಕವಾಗಿ ಅವರ ಜತೆ ಚೆಲ್ಲಾಟವಾಡಬಹುದು ಎಂಬುದು ಸ್ಥಳೀಯ ಬಿಜೆಪಿ […]

ಸಾರ್ವಜನಿಕರೇ ಗಮನಿಸಿ : ‘ಮತದಾರರ ಪಟ್ಟಿ’ಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿದೆ ಸುಲಭ ವಿಧಾನ

ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಮತದಾನ ಕೇವಲ ಹಕ್ಕು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಇದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವಾಗಿದೆ. ನೀವು ಭಾರತದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರೆ ಮತ್ತು ಇನ್ನೂ ನೋಂದಾಯಿಸದಿದ್ದರೆ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾದಿಯಲ್ಲಿ ನಿಮ್ಮನ್ನು ಪ್ರಾರಂಭಿಸಲು ಸರಳ ಮಾರ್ಗದರ್ಶಿ ಇಲ್ಲಿದೆ.   ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಭಾರತದಲ್ಲಿ ಮತ ಚಲಾಯಿಸಲು ನೋಂದಾಯಿಸುವುದು ಹೇಗೆ ಎಂಬುದರ ಸರಳ ವಿವರಣೆ ಇಲ್ಲಿದೆ: ಆನ್ ಲೈನ್ ನೋಂದಣಿ ಪ್ರಕ್ರಿಯೆ: ರಾಷ್ಟ್ರೀಯ ಮತದಾರರ […]

ನಾಮಪತ್ರ ಸಲ್ಲಿಸುವ ಮುನ್ನ ನನ್ನ ಮಾತೃಶ್ರೀಯವರ ಆಶೀರ್ವಾದ ಪಡೆದ‌ ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ತಾಯಿ ಮನೆಗೆ ಹೋಗಿ ನನ್ನ ಮಾತೃಶ್ರೀಯವರ ಲಚ್ಚಿ ಪೂಜಾರ್ದಿ ಅವರ  ಆಶೀರ್ವಾದ ಪಡೆದ ನಂತದ ಕೋಟ ಶ್ರೀನಿವಾಸ್ ಪೂಜಾರಿ ಅದ್ದೂರಿಯಾಗಿ ನಾಮಪತ್ರ ಸಲ್ಲಿಸಿದರು. ಕಚೇರಿ ಆವರಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ ಬಳಿಕ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲೆಯ ಅಭ್ಯರ್ಥಿ ಬ್ರಿಜೇಶ್ ಚೌಟ, ರಾಜ್ಯ ಚುನಾವಣಾ ಸಂಚಾಲಕ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಉಡುಪಿ ಶಾಸಕ […]

ಸರ್ವಧರ್ಮದವರನ್ನು ಸಮಾನರನ್ನಾಗಿ ಕಾಣುವ ಮಾಣಿಕ್ಯ ಪದ್ಮರಾಜ್ ಆರ್

ಇವರು ಸದಾ ಹಸನ್ಮುಖಿ… ಎಲ್ಲರಲ್ಲೂ ನಗುಮುಖದಿಂದಲೇ ಮಾತನಾಡಿಸುತ್ತ ಸಮಸ್ಯೆ ಆಲಿಸುವ ಸರಳ ಸಜ್ಜನಿಕೆಯ ಗುಣಹೊಂದಿದವರು ನೇರ ನಡೆನುಡಿಯ ಧೀಮಂತ ವ್ಯಕ್ತಿತ್ವದ ಪದ್ಮರಾಜ್ ಆರ್. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜಸೇವೆಯನ್ನು ಮೈಗೂಡಿಸಿಕೊಂಡು, ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ ಭಕ್ತಿ ಹೊಂದಿ ಕಿರಿಯ ವಯಸ್ಸಿನಲ್ಲೇ ದೇವಳದ ಬಹು ದೊಡ್ಡ ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರದ ಏಳಿಗೆಗಾಗಿ ಸದಾ ಹಗಲಿರುಳು ದುಡಿಯುತ್ತಿರುವವರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ […]

ಶ್ರೀಮತಿ ಶಾರದಾ ಅಂಚನ್ ಅವರಿಗೆ “ಪ್ರೊ| ನಳಿನಿ ವಿಶ್ವನಾಥ್ ಕಾರ್ನಾಡ್  ಸಂಸ್ಮರಣಾ ಪ್ರಶಸ್ತಿ”

ಶ್ರೀಮತಿ ಶಾರದಾ ಅಂಚನ್ ಅವರಿಗೆ “ಪ್ರೊ| ನಳಿನಿ ವಿಶ್ವನಾಥ್ ಕಾರ್ನಾಡ್  ಸಂಸ್ಮರಣಾ ಪ್ರಶಸ್ತಿ” ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮಾ. 8ರಂದು ಅಪರಾಹ್ನ 4ರಿಂದ ಸಂಘದ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಗೋರೆಗಾಂವ್‌ನ ಕೇಶವಗೋರೆ ಸ್ಮಾರಕ ಟ್ರಸ್ಟ್‌ನಲ್ಲಿ ನಡೆಯಲಿದೆ.  ಸುಜಾತಾ ವಿ. ಕೋಟ್ಯಾನ್ ಮತ್ತು ಶೈಲಜಾ ಆರ್. ಅಂಚನ್ ಸಂಸ್ಮರಣೆಯಲ್ಲಿ ಸ್ಥಾಪಿಸಿದ ದತ್ತಿ ನಿಧಿ ಕಾಠ್ಯಕ್ರಮ ಜರಗಲಿದೆ. ಪ್ರೊ| ನಳಿನಿ ವಿಶ್ವನಾಥ್ ಕಾರ್ನಾಡ್ ಅವರ ಸಂಸ್ಮರಣೆಯಲ್ಲಿ ಡಾ| ವಿಶ್ವನಾಥ್ ಕಾರ್ನಾಡ್ ಅವರು […]

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಉಡುಪಿ ಜಿಲ್ಲೆಯ ಅಂಬಲಪಾಡಿ ವಿಠೋಬ ರುಕುಮಾಯಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಪೂಜಾರಿಯವರ ನೇತೃತ್ವದಲ್ಲಿ ಫೆಬ್ರವರಿ 12ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ನಾರಾಯಣ ಗುರು ಅರ್ಬನ್ ಕೊ.ಒಪ್. ಬ್ಯಾಂಕಿನ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್,ಗೋಪಾಲ್ ಬಂಗೇರಾ,ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಸದಸ್ಯರು ಉಪಸ್ಥಿತಿ ಇದ್ದರು. ರಜತ ಮಹೋತ್ಸವದ […]

ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್

ಯುವವಾಹಿನಿ( ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಾಟಕ ಪ್ರದರ್ಶನ ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್ ಮಂಗಳೂರು : ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಮಾಜಮುಖಿ ಕಾರ್ಯಕ್ಕೆ ಸಮಾಜದ ಸರ್ವರ ಬೆಂಬಲ ಅತ್ಯಂತ ಸಂತಸ ತಂದಿದೆ, ಆರ್ಥಿಕ ಕ್ರೋಡೀಕರಣಕ್ಕಾಗಿ ನಡೆದ ನಾಟಕ ಪ್ರದರ್ಶನದಲ್ಲಿ ಪುರಭವನದ ಜನಸ್ತೋಮದಿಂದ ತುಂಬಿರುವುದು ಮಹಿಳಾ ಘಟಕದ ಶ್ರಮಕ್ಕೆ ಸಂದ ಪ್ರತಿಫಲ ಎಂದು ಅಸಿಸ್ಟೆಂಟ್ ಕಮಿಷನರ್ ಅಫ್ ಪೋಲಿಸ್ ಮಹೇಶ್ ಕುಮಾರ್ ತಿಳಿಸಿದರು. ಅವರು […]